ಕನ್ನಡಪ್ರಭ ದಿನ ಪತ್ರಿಕೆ ಹೊರತಂದ ಶಿವಗಂಗಾ ತಾಣ ವಿಶೇಷ ಸಂಚಿಕೆ ಬಿಡುಗಡೆ

KannadaprabhaNewsNetwork |  
Published : Jan 15, 2025, 12:46 AM IST
ಪೋಟೋ 10 : ದಕ್ಷಿಣಕಾಶಿ ಶಿವಗಂಗೆಯಲ್ಲಿ ಕನ್ನಡಪ್ರಭ ದಿನ ಪತ್ರಿಕೆಯೂ ಮಕರ ಸಂಕ್ರಾಂತಿ ಹಾಗೂ ಗಿರಿಜಾ ಕಲ್ಯಾಣೋತ್ಸವದ ಪ್ರಯುಕ್ತ ಹೊರತಂದ ಶಿವಗಂಗಾ ತಾಣ : ಮಕರ ಸಂಕ್ರಮಣ ವಿಶೇಷ ಸಂಚಿಕೆಯನ್ನು ಶಾಸಕ ಎನ್.ಶ್ರೀನಿವಾಸ್ ಹಾಗೂ ಮುಖಂಡರು ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕನ್ನಡಪ್ರಭ ಪತ್ರಿಕೆ ಹೊರತಂದಿರುವ ಸಂಚಿಕೆಯೂ ಚೆನ್ನಾಗಿ ಮೂಡಿ ಬಂದಿದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಪತ್ರಿಕೆಗಳು ಸದಾ ಸಮಾಜಮುಖಿಯಾಗಿ ಜನಪ್ರತಿನಿಧಿಗಳು ಮಾಡುವ ಸರಿ ತಪ್ಪುಗಳನ್ನು ತಿದ್ದಿ ಸರಿಪಡಿಸುವ ಕೆಲಸವನ್ನು ಮಾಡುತ್ತಿವೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ದಕ್ಷಿಣಕಾಶಿ ಶಿವಗಂಗೆಯಲ್ಲಿ ಕನ್ನಡಪ್ರಭ ದಿನ ಪತ್ರಿಕೆಯೂ ಮಕರ ಸಂಕ್ರಾಂತಿ ಹಾಗೂ ಗಿರಿಜಾ ಕಲ್ಯಾಣೋತ್ಸವದ ಪ್ರಯುಕ್ತ ಹೊರತಂದ ಶಿವಗಂಗಾ ತಾಣ: ಮಕರ ಸಂಕ್ರಮಣ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕನ್ನಡಪ್ರಭ ಪತ್ರಿಕೆ ಹೊರತಂದಿರುವ ಸಂಚಿಕೆಯೂ ಚೆನ್ನಾಗಿ ಮೂಡಿ ಬಂದಿದೆ. ಶಿವಗಂಗೆ ಬೆಟ್ಟದ ಇತಿಹಾಸ, ಪೌರಾಣಿಕತೆಯ ಬಗ್ಗೆ ವಿಶೇಷ ಲೇಖನಗಳು ಪ್ರಕಟವಾಗಿದ್ದು, ಶಿವಗಂಗೆಯ ಇತಿಹಾಸವನ್ನು ಈ ಲೇಖನಗಳನ್ನು ಓದಿ ತಿಳಿಯಲು ಅನುಕೂಲವಾಗಲಿದೆ. ಇದೇ ರೀತಿ ವಿಶೇಷವಾಗಿ ಪ್ರತಿವರ್ಷ ಹೊಸತನದಿಂದ ಮೂಡಿ ಬರಲಿ ಎಂದು ಆಶಿಸಿದರು.ಮುಖಂಡ ಅಗಳಕುಪ್ಪೆ ಗೋವಿಂದರಾಜು ಮಾತನಾಡಿ ಕನ್ನಡಪ್ರಭ ಪತ್ರಿಕೆಯಲ್ಲಿ ಸ್ಥಳೀಯ ಸಮಸ್ಯೆಗಳು, ಕಾರ್ಯಕ್ರಮಗಳ ಬಗ್ಗೆ ಪ್ರತಿನಿತ್ಯ ಪ್ರಕಟಗೊಂಡು ಜನರಿಗೆ ತಲುಪಿಸುತ್ತಿದೆ. ಸಮಸ್ಯೆಗಳ ಬಗ್ಗೆ ಸುದ್ದಿ ಪ್ರಕಟಿಸಿ ಅಧಿಕಾರಿಗಳ, ಜನಪ್ರತಿನಿಧಿಗಳ ಎಚ್ಚರಿಸುವ ಕೆಲಸ ಮಾಡುತ್ತಿದೆ ಎಂದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್, ಎಂ.ಕೆ.ನಾಗರಾಜು, ನಗರಸಭೆ ಸದಸ್ಯ ಗಣೇಶ್, ಗ್ರಾ.ಪಂ.ಮಾಜಿ ಅಧ್ಯಕ್ಷ ಹನುಮಂತರಾಜು, ಸದಸ್ಯರಾದ ದಿನೇಶ್ ನಾಯಕ್, ಮನುಪ್ರಸಾದ್, ಎಸ್ ಆರ್ ಗೌಡ, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಯೋಗಾನಂದೀಶ್, ಲಕ್ಕೂರು ಸಿದ್ದರಾಜು, ಗ್ರಾಪಂ ಮಾಜಿ ಸದಸ್ಯರಾದ ಬರಗೇನಹಳ್ಳಿ ನಾರಾಯಣ್, ಹೊಸನಿಜಗಲ್ ಸಿದ್ದರಾಜು, ಪಾರ್ಥಸಾರಥಿ, ಲಂಕೇಶ್ ಗೌಡ ಮತ್ತಿರರಿದ್ದರು.ಪೋಟೋ 10 : ದಕ್ಷಿಣಕಾಶಿ ಶಿವಗಂಗೆಯಲ್ಲಿ ಕನ್ನಡಪ್ರಭ ದಿನ ಪತ್ರಿಕೆಯೂ ಮಕರ ಸಂಕ್ರಾಂತಿ ಹಾಗೂ ಗಿರಿಜಾ ಕಲ್ಯಾಣೋತ್ಸವದ ಪ್ರಯುಕ್ತ ಹೊರತಂದ ಶಿವಗಂಗಾ ತಾಣ : ಮಕರ ಸಂಕ್ರಮಣ ವಿಶೇಷ ಸಂಚಿಕೆಯನ್ನು ಶಾಸಕ ಎನ್.ಶ್ರೀನಿವಾಸ್ ಹಾಗೂ ಮುಖಂಡರು ಬಿಡುಗಡೆಗೊಳಿಸಿದರು.

PREV

Recommended Stories

ಲೋಕಾ ಎಸ್ಪಿ ಬದ್ರಿನಾಥ್‌ ಸೇರಿ 19 ಪೊಲೀಸರಿಗೆ ರಾಷ್ಟ್ರ ಪದಕ
ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ