ಎಲ್ಲರೂ ಒಂದೇ ಎಂಬ ಸಂದೇಶ ಬಿತ್ತಿದ ಶಿವಕುಮಾರ ಶ್ರೀ

KannadaprabhaNewsNetwork |  
Published : Jun 06, 2025, 12:33 AM ISTUpdated : Jun 06, 2025, 12:34 AM IST
ಎಲ್ಲರೂ ಒಂದೇ ಎಂಬ ಸಂದೇಶ ಬಿತ್ತಿದ ಶಿವಕುಮಾರ ಸ್ವಾಮೀಜಿ | Kannada Prabha

ಸಾರಾಂಶ

ಜಾತಿ, ಮತ, ಪಂಗಡ ಬಿಟ್ಟು ಎಲ್ಲಾ ಜನರು ಒಂದೇ ಎಂಬ ಸಂದೇಶವನ್ನು ಬಿತ್ತಿದವರು ಡಾ.ಶಿವಕುಮಾರ ಸ್ವಾಮೀಜಿ ಎಂದು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಜಿ.ಸಿದ್ದರಾಮಯ್ಯ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಜಾತಿ, ಮತ, ಪಂಗಡ ಬಿಟ್ಟು ಎಲ್ಲಾ ಜನರು ಒಂದೇ ಎಂಬ ಸಂದೇಶವನ್ನು ಬಿತ್ತಿದವರು ಡಾ.ಶಿವಕುಮಾರ ಸ್ವಾಮೀಜಿ ಎಂದು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಜಿ.ಸಿದ್ದರಾಮಯ್ಯ ತಿಳಿಸಿದ್ದಾರೆ.ನಗರದ ಸಿದ್ದಗಂಗಾ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಂಸ್ಥಾಪಕರ ದಿನಾಚರಣೆ ಹಾಗೂ ಸ್ಪೂರ್ತಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಂಸ್ಥಾಪಕ ಶಿವಕುಮಾರಸ್ವಾಮೀಜಿಗಳ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಜಾತಿ ಭೇಧವಿಲ್ಲದೆ ಎಲ್ಲಾ ವರ್ಗದ ಮಕ್ಕಳಿಗೆ ಅನ್ನ, ಅಕ್ಷರ ,ಆಶ್ರಯ ನೀಡಿ, ಅವರ ಉನ್ನತ್ತಿಗೆ ಶ್ರಮಿಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ ಎಂದರು.ಭಕ್ತರಿಂದ ನಡೆದಾಡುವ ದೇವರು ಎಂದು ಕರೆಯಿಸಿಕೊಂಡ ಡಾ.ಶಿವಕುಮಾರ ಸ್ವಾಮೀಜಿ ಮಠದಲ್ಲಿ ಓದುತ್ತಿರುವ ಮಕ್ಕಳನ್ನೇ ದೇವರೆಂದು ತಿಳಿದು, ಅವರ ಸೇವೆಯಲ್ಲಿ ಇಡೀ ಜೀವನವನ್ನೇ ಸವೆಸಿದವರು. ನಡೆ,ನುಡಿಗಳಲ್ಲಿ ವೆತ್ಯಾಸವಿಲ್ಲದೆ ಬದುಕಿದವರು. ಮಕ್ಕಳ ಜೊತೆಗೆ, ಗೋವುಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದ ಶ್ರೀಗಳು, ಮಾತೃ ಹೃದಯದ ಅವರು ಆನಾಥ ಮಕ್ಕಳಿಗೆ ತಾಯಿಯಾಗಿಯೇ ಸಾಕಿ ಸಲುಹಿದವರು. ಇಂದು ಇಡೀ ವಿಶ್ವದಲ್ಲಿ ಸಿದ್ದಗಂಗಾ ಮಠದಲ್ಲಿ ಓದಿದ ಮಕ್ಕಳು ಇದ್ದಾರೆ. ಅವರು ಶ್ರೀಮಠಕ್ಕೆ ಬಂದಾಗ ಅವರ ಯೋಗಕ್ಷೇಮ ವಿಚಾರಿಸಿ, ಅವರ ಬದುಕನ್ನು ತಿದ್ದು, ತೀಡುವ ಕೆಲಸ ಮಾಡುತ್ತಿದ್ದರು ಎಂದು ಎಂ.ಜಿ.ಸಿದ್ದರಾಮಯ್ಯ ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಚ್.ಎಂ.ದಕ್ಷಿಣಾಮೂರ್ತಿ ಮಾತನಾಡಿ, ಸ್ಪೂರ್ತಿ ಸಾಂಸ್ಕೃತಿಕ ಚಟುವಟಿಕೆಯ ಜೊತೆಗೆ,ಸಂಸ್ಥಾಪಕರ ದಿನಾಚರಣೆಯನ್ನು ಒಟ್ಟಿಗೆ ಆಚರಿಸಿಕೊಂಡು ಬರಲಾಗುತ್ತಿದೆ. ಈ ವೇಳೆ ಪರಮಪೂಜ್ಯ ಡಾ.ಶಿವಕುಮಾರ ಸ್ವಾಮೀಜಿಗಳ ಬಗ್ಗೆ ಉಪನ್ಯಾಸ ಏರ್ಪಡಿಸಿದ್ದೇವೆ. ಶ್ರೀಮಠದ ವಿದ್ಯಾರ್ಥಿಯಾಗಿ ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಎಂ.ಜಿ.ಸಿದ್ದರಾಮಯ್ಯ ಅವರು ಪೂಜ್ಯರ ಕಾಯಕ,ದಾಸೋಹದ ಪ್ರತಿ ಮಜಲನ್ನು ಪರಿಚಯಿಸಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ಐಕ್ಯೂಎಸಿ ಸಂಚಾಲಕರಾದ ಪ್ರೊ.ಶೀಲಾ.ಕೆ.ಪಿ, ಸ್ಪೂರ್ತಿ ಸಂಚಾಲಕರಾದ ಪಾವನ,ಜಿ.ಎಸ್, ಸಹ ಸಂಚಾಲಕರಾದ ನಯನ.ಕೆ.ಆರ್, ಸಿದ್ದಗಂಗಾ ಮಹಿಳಾ ಪದವಿಪೂರ್ವ ಕಾಲೇಜಿನ ಬೋಧಕ, ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್