ಕೌಶಲ್ಯಾಧಾರಿತ ಸಮಗ್ರ ಶಿಕ್ಷಣ ಇಂದಿನ ತುರ್ತು: ಪ್ರೊ.ಗಣಪತಿ ಸಿನ್ನೂರ

KannadaprabhaNewsNetwork |  
Published : Sep 06, 2025, 01:00 AM IST
ಚಿತ್ರ 5ಬಿಡಿಆರ್‌2ಬೀದರ್‌ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ನಿಮಿತ್ತ ಶಿಕ್ಷಣ ರತ್ನ ಪ್ರಶಸ್ತಿ ಸಮಾರಂಭ ನೆರವೇರಿ ಶಿಕ್ಷಕರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಕೌಶಲ್ಯ ಆಧಾರಿತ ಸಮಗ್ರ ಶಿಕ್ಷಣ ಇಂದು ಅನಿವಾರ್ಯವಾಗಿದ್ದು ಮಾತಿಗಿಂತ ಕೃತಿಗೆ ಬೆಲೆ ಜಾಸ್ತಿ ಎಂದು ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಕಲಬುರಗಿಯ ವ್ಯವಹಾರ ಅಧ್ಯಯನ ವಿಭಾಗ ಸಹ ಪ್ರಾಧ್ಯಾಪಕರಾದ ಪ್ರೊ.ಗಣಪತಿ ಬಿ ಸಿನ್ನೂರ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ, ಬೀದರ್‌

ಕೌಶಲ್ಯ ಆಧಾರಿತ ಸಮಗ್ರ ಶಿಕ್ಷಣ ಇಂದು ಅನಿವಾರ್ಯವಾಗಿದ್ದು ಮಾತಿಗಿಂತ ಕೃತಿಗೆ ಬೆಲೆ ಜಾಸ್ತಿ ಎಂದು ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಕಲಬುರಗಿಯ ವ್ಯವಹಾರ ಅಧ್ಯಯನ ವಿಭಾಗ ಸಹ ಪ್ರಾಧ್ಯಾಪಕರಾದ ಪ್ರೊ.ಗಣಪತಿ ಬಿ ಸಿನ್ನೂರ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ನಿಮಿತ್ತ ಶಿಕ್ಷಣ ರತ್ನ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿ, ವಚನ ಸಾಹಿತ್ಯ ಕಬ್ಬಿಣಕ್ಕಿಂತ ಗಟ್ಟಿಯಾಗಿದೆ ಅದನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿ ಕೊಂಡಾಗ ಜೀವನಕ್ಕೊಂದು ಮೌಲ್ಯ. ಇಂದಿನ ಜಾಗತೀಕರಣದ ಕರಿನೆರಳಿನಲ್ಲಿ ವಚನ ಆಧಾರಿತ ಶಿಕ್ಷಣ ಅಭಿವೃದ್ಧಿಗೊಂಡರೆ ಉತ್ತಮ ನಾಗರಿಕ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಇಂದಿನ ಶಿಕ್ಷಣ ಕೇವಲ ಅಂಕಗಳಿಗೆ ಸೀಮಿತಗೊಂಡಿದೆ. ಶಿಕ್ಷಣ ಎನ್ನುವದು ಬದುಕಿನ ಬವಣೆ ನೀಗಿಸುವಂತಾಗಬೇಕು. ಇದರಿಂದ ಸಂಪೂರ್ಣ ಬಡತನ ನಿರ್ಮೂಲನೆಯಾಗಿ ಸಮೃದ್ಧ ಸಮಾಜ ಕಟ್ಟಬಹುದು ಹಾಗೆಯೇ ಧನಾತ್ಮಕ ವಿಚಾರ ಪ್ರತಿಬಿಂಬಿತವಾಗುತ್ತದೆ ಎಂದು ನುಡಿದರು.

ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ಪ್ರಾಚಾರ್ಯರಾದ ಬಸವರಾಜ ಮೊಳಕೇರಿ ಮಾತನಾಡಿ, ನಮ್ಮ ಭಾಗ ಇಂದು ಶೈಕ್ಷಣಿಕವಾಗಿ ಅಭಿವೃದ್ಧಿಗೊಳ್ಳುತ್ತಿದೆ. ಹಿಂದುಳಿಯುವಿಕೆ ಎಂಬ ಭ್ರಾಂತಿಯಿಂದ ಇಂದು ಹೊರ ಬರಬೇಕಾಗಿದೆ. ನಮ್ಮಲ್ಲಿ ಬಸವ ತತ್ವ ಆಚರಣೆ ಅಳವಡಿಸಿ ಕೊಂಡರೆ ಅಸಮಾನತೆ ದೂರವಾಗಿ ಎಲ್ಲರೂ ಒಂದೇ ಎಂಬ ಕಲ್ಪನೆ ಮೂಡುತ್ತದೆ ಎಂದರು.

ಸಾಧ್ವಿ ಬಸವರಾಜ ಬಿರಾದಾರ ಅವರು ವಚನ ನೃತ್ಯ ಪ್ರಸ್ತುತಪಡಿಸಿದರು. ಸ್ವಪ್ನ ಮಹೇಶ ಮಾಶಟ್ಟಿ, ಡಾ.ಪ್ರಶಾಂತ ಮಾಶಟ್ಟಿ ಮಹಾವಿದ್ಯಾಲಯ ಹಾಗೂ ಮಹಿಳಾ ಬಸವ ಕೇಂದ್ರದ ಅಧ್ಯಕ್ಷೆ ಡಾ. ವಿದ್ಯಾ ವತಿ ಬಲ್ಲೂರ, ಅಲ್ಲಮಪ್ರಭು ನಾವದಗೇರೆ, ಶಿವಕುಮಾರ ಸಾಲಿ, ಸಂಜೀವಕುಮಾರ ಚಿಲ್ಲರ್ಗಿ, ರಾಜಶೇಖರ ಪಾಟೀಲ್‌ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಡಾ.ಸುರೇಶ ಪಾಟೀಲ್‌ ಮಾತ ನಾಡಿದರು. ಪ್ರಸ್ತಾವಿಕವಾಗಿ ಶಿವಶಂಕರ ಟೋಕರೆ ಮಾತನಾಡಿದರೆ, ಮಲ್ಲಿಕಾರ್ಜುನ ಟಂಕಸಾಲೆ ಸ್ವಾಗತಿಸಿ ವೈಜಿನಾಥ ಸಜ್ಜನಶೆಟ್ಟಿ ನಿರೂಪಿಸಿ ಸಂಜೀವಕುಮಾರ ಬಿರಾದಾರ ವಂದಿಸಿದರು. ಇದೇ ಸಂದರ್ಭದಲ್ಲಿ ಶಿಕ್ಷಣ ರತ್ನ ಪ್ರಶಸ್ತಿ ನೀಡಿ ಹಲವಾರು ಶಿಕ್ಷಕರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ