ಎಸ್‌ಎಂವಿಟಿಐ- ಎಐ ಆಧರಿತ ಶ್ರವಣ ಸಾಧನ ಅಭಿವೃದ್ಧಿ

KannadaprabhaNewsNetwork |  
Published : Jun 05, 2026, 02:45 AM IST
ಎಸ್‌ಎಂವಿಟಿಐ ವಿದ್ಯಾರ್ಥಿಗಳು ಹಿಯರ್ ಫ್ಯೂಶನ್ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ | Kannada Prabha

ಸಾರಾಂಶ

ಇಲ್ಲಿನ ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಪೂರ್ಣಿತ, ಅನನ್ಯ ಆಚಾರ್ಯ, ಜತ್ತನ್ ಶ್ರದ್ಧಾ ವಸಂತ್ ಮತ್ತು ದೀಪ್ತಿ ಅವರು ವಿಭಾಗದ ಪ್ರಾಧ್ಯಾಪಕರಾದ ಪವಿತ್ರ ಪೂರ್ಣಿಮಾ ಮತ್ತು ರಘುನಾಥ್ ಅವರ ಮಾರ್ಗದರ್ಶನದಲ್ಲಿ ಎಐ ಆಧತ ಶ್ರವಣ ಸಾಧನ ‘ಹಿಯರ್ ಪ್ಯೂಶನ್’ ಅನ್ನು ಅಭಿವೃದ್ಧಿಪಡಿಸಿದ್ದಾರೆ.

ಕಾಪು: ಇಲ್ಲಿನ ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಪೂರ್ಣಿತ, ಅನನ್ಯ ಆಚಾರ್ಯ, ಜತ್ತನ್ ಶ್ರದ್ಧಾ ವಸಂತ್ ಮತ್ತು ದೀಪ್ತಿ ಅವರು ವಿಭಾಗದ ಪ್ರಾಧ್ಯಾಪಕರಾದ ಪವಿತ್ರ ಪೂರ್ಣಿಮಾ ಮತ್ತು ರಘುನಾಥ್ ಅವರ ಮಾರ್ಗದರ್ಶನದಲ್ಲಿ ಎಐ ಆಧತ ಶ್ರವಣ ಸಾಧನ ‘ಹಿಯರ್ ಪ್ಯೂಶನ್’ ಅನ್ನು ಅಭಿವೃದ್ಧಿಪಡಿಸಿದ್ದಾರೆ.

ಶ್ರವಣ ದೋಷವು ಪರಿಣಾಮಕಾರಿ ಸಂವಹನ ಮತ್ತು ಜೀವನದ ಗುಣಮಟ್ಟ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಸಾಮಾನ್ಯ ಶ್ರವಣ ಸಾಧನಗಳು ಸಾಮಾನ್ಯವಾಗಿ ಎಲ್ಲ ಶಬ್ದಗಳನ್ನು ಸಮಾನವಾಗಿ ಕೇಳಿಸುವುದರಿಂದ ಗದ್ದಲದ ವಾತಾವರಣದಲ್ಲಿ ಮಾತುಗಳನ್ನು ಸ್ಪಷ್ಟವಾಗಿ ಗುರುತಿಸುವುದು ಬಳಕೆದಾರರಿಗೆ ಕಷ್ಟಕರವಾಗುತ್ತದೆ. ಇದಕ್ಕೆ ಪರಿಹಾರವಾಗಿ ವಿದ್ಯಾರ್ಥಿಗಳು ಅನಗತ್ಯ ಹಿನ್ನೆಲೆ ಶಬ್ದವನ್ನು ಕಡಿಮೆ ಮಾಡುತ್ತಾ ಮಾತಿನ ಸ್ಪಷ್ಟತೆಯನ್ನು ಹೆಚ್ಚಿಸುವ ಶ್ರವಣ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಯೋಜನೆಗೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಿಂದ ಅನುಮೋದನೆ ದೊರೆತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿಥಿ ತಂದು ಕೊಟ್ಟಿದ್ದ ಮಾವಿನ ಹಣ್ಣು ಸೇವಿಸಿ ಇಬ್ಬರು ಬಾಲಕಿಯರು ಸಾವು!
ಮೆಡಿಕಲ್‌ ಸೀಟು ಶುಲ್ಕ ಈ ವರ್ಷ ಹೆಚ್ಚಿಸದಿರಲು ಸರ್ಕಾರ ನಿರ್ಧಾರ