ಸಿಂದಗಿ : ಹಾವುಗಳ ಕುರಿತು ಅತೀ ಕಡಿಮೆ ತಿಳುವಳಿಕೆ, ಅನಗತ್ಯ ಭಯದಿಂದ ಜನರು ಅವುಗಳನ್ನು ಕೊಲ್ಲುತ್ತಿದ್ದು, ಅದರಿಂದ ಹಾವುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹಾವುಗಳ ಕುರಿತು ಇರುವಷ್ಟು ಮೂಢನಂಬಿಕೆ ಬೇರೆ ಯಾವುದೇ ಪ್ರಾಣಿಗಳಿಗಿಲ್ಲ. ಎಲ್ಲ ಜಾತಿಯ ಹಾವುಗಳು ಕಚ್ಚುತ್ತವೆ. ಅವು ಕಚ್ಚಿದರೆ ಬದುಕುವುದಿಲ್ಲ ಎಂಬ ನಂಬಿಕೆ ಇದೆ. ಹೀಗಾಗಿ, ಅವುಗಳನ್ನು ಸಾಯಿಸುತ್ತಾರೆ ಎಂದು ವಿಜಯಪುರ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿನಾಥ ಕುಸನಾಳ ವಿಷಾದಿಸಿದರು.
ತಾಲ್ಲೂಕಿನ ಗಣಿಹಾರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ, ಪ್ರೌಢಶಾಲೆಯ ಆವರಣದಲ್ಲಿ ಅರಣ್ಯ ಇಲಾಖೆ ಪ್ರಾದೇಶಿಕ ಅರಣ್ಯ ವಿಭಾಗದ ಸಹಯೋಗದಲ್ಲಿ ವಿಶ್ವ ಹಾವುಗಳ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಾವುಗಳು ರೈತನಿಗೆ ಸಹಕಾರಿಯಾದ ಜೀವಿ. ರೈತನಿಗೆ ಮಾರಕವಾಗಿರುವ ದಂಶಕಗಳು ರೈತ ಬೆಳೆಯುವ ಫಲವತ್ತತೆ, ನೆಲವನ್ನು ಕೊರೆದು ಶೇ.40ರಷ್ಟು ಫಸಲು ಹಾಳು ಮಾಡುತ್ತವೆ. ಯಾರು ಮುಟ್ಟದೇ ಕಚ್ಚದ ಹಾವು ದಂಶಕಗಳನ್ನು ಆಹಾರವಾಗಿ ಬಳಸುವುದರ ಮೂಲಕ ರೈತನಿಗೆ ಸಹಕಾರಿಯಾಗಿದೆ ಎಂದರು.
ಬೋರಗಿ ಮಠದ ಮಹಾಲಿಂಗೇಶ್ವರ ಮಹಾಸ್ವಾಮಿಗಳು ಮಾತನಾಡಿ, ಯಾವುದೇ ಪ್ರಾಣಿಗಳ ಸಂಖ್ಯೆ ಮೇರೆ ಮೀರಿದ್ದಲಿ ಅದನ್ನು ನಿಯಂತ್ರಿಸಲು ಪ್ರಕೃತಿಯಲ್ಲಿ ತನ್ನದೇ ವ್ಯವಸ್ಥೆ ಇರುತ್ತದೆ. ಇಲಿ, ಹೆಗ್ಗಣಗಳ ನಿಯಂತ್ರಿಸುವಿಕೆಯಲ್ಲಿ ಹಾವಿನ ಸಂತತಿ ಉಳಿಸುವಿಕೆ ಅವಶ್ಯವಿದ್ದು, ಹಾವಿನ ಬಗ್ಗೆ ಇರುವ ತಪ್ಪು ತಿಳುವಳಿಕೆಗಳನ್ನು ಇಂತಹ ಜಾಗೃತಿ ಅಭಿಯಾನಗಳ ಮೂಲಕ ನಡೆಸಿಕೊಡುವ ಅರಣ್ಯ ಇಲಾಖೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಹಿಕ್ಕಣಗುತ್ತಿ ಲಿಂಗಾಯತ ಮಹಾ ಮಠದ ಪ್ರಭುಲಿಂಗ ಶರಣರು, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಸುಧಾ ನಂದಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗಸ್ತು ವನಪಾಲಕ ಪರುಶರಾಮ ಭಜಂತ್ರಿ, ಉರಗ ಸಂರಕ್ಷಕ ಧನಂಜಯ ಕುಮಾರ ವಿಶೇಷ ಉಪನ್ಯಾಸ ನೀಡಿದರು. ಚಲನಚಿತ್ರದಲ್ಲಿ ತೋರಿಸುವ ಅನಗತ್ಯ ದೃಶ್ಯಗಳು, ಹಾವಿನ ದ್ವೇಷ 12 ವರುಷ ಎಂಬ ಮೂಢರ ಮಾತುಗಳು ಜನರಲ್ಲಿ ಹಾವಿನ ಬಗ್ಗೆ ದ್ವೇಷ ಹೆಚ್ಚಿಸುತ್ತಿವೆ. ಹಾವಿಗೆ ನಿಜವಾಗಲೂ ನೆನಪಿಟ್ಟುಕೊಳ್ಳುವ ಶಕ್ತಿಯಾಗಲಿ ನೋಡಿದ ಮನುಷ್ಯನನ್ನು ಗುರುತಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ಹಾವು ಕಚ್ಚಿದ ವ್ಯಕ್ತಿ ತಕ್ಷಣದಲ್ಲಿ ಸಾಯುವುದಿಲ್ಲ, ಬದಲಾಗಿ ಹೆದರಿಕೆಯಿಂದ ಸಾಯುತ್ತಾನೆ ಎಂದು ಮಾಹಿತಿ ನೀಡಿದರು.
ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸಿ.ಎಂ.ಮೇತ್ರಿಮ, ಅರಣ್ಯ ಅಧಿಕಾರಿಗಳಾದ ಭಾಗ್ಯವಂತ ಮಸೂದಿ, ಅನಂತಕುಮಾರ ಪಾಕಿ, ರಾಜೀವ ಬಿರಾದಾರ, ಇರ್ಷಾದ ನೆವಾರ, ಬಸನಗೌಡ ಬಿರಾದಾರ, ಗಿರೀಶ, ಮಂಜುನಾಥ ದೂಳೆ, ಪ್ರಶಾಂತ್ ಗಾಣಿಗೇರ, ಲಿಂಗರಾಜ ವೇದಿಕೆ ಮೇಲಿದ್ದರು. ಮುಖ್ಯಶಿಕ್ಷಕ ಸಿದ್ದಲಿಂಗ ಚೌಧರಿ ಸ್ವಾಗತಿಸಿದರು. ಶಿಕ್ಷಕ ಎಸ್.ಎಸ್.ಬಿರಾದಾರ ನಿರೂಪಿಸಿದರು ಈ ಸಂದರ್ಭದಲ್ಲಿ ಶಿಕ್ಷಕರಾದ ಕೆ.ಜಿ.ಹತ್ತಳ್ಳಿ. ಪ್ರಕಾಶ.ಜಿ.ಎ, ಸಿ.ಎಸ್.ಬೊಮ್ಮಣ್ಣಿ, ಎಂ.ಎ.ಕುಡುಚಿ, ಎಂ.ಎಲ್.ಟೈಲರ್, ಆರ್.ಸಿ.ಗಬ್ಬುರ, ಎಸ್.ಜಿ.ನಾಟಿಕಾರ, ಬಿ.ಕೆ.ಹಳ್ಳಿ, ಆರ್.ಎಸ್.ಪಟ್ಟಣಶೆಟ್ಟಿ, ಪುಷ್ಪಾ ಸಂಕನಾಳ, ಕೆ.ಎಸ್.ತೊರವಿ ಸುಷ್ಮಾ, ಪ್ರಕಾಶ್ ಹೊಳಿನ, ಪಿ.ಎಸ್.ಅಗ್ನಿ, ಆರ್.ಜಿ.ಪಾಟೀಲ, ಅಬ್ದುಲಸಾಬ ದೇವರಮನಿ, ಭೀಮು ನನ್ನಶೆಟ್ಟಿ, ಮುಗಿನ ಅಂಗಡಿ ಸಲ್ಮಾ, ಬಳಗಾನೂರ ಕುಲ್ಸುಮ್ಮ, ಇನಂದಾರ ರುಬಿನಾ, ಎಂ.ಎ.ಮಲ್ಲಾಡಿ, ಡಿ.ಎಂ.ಕೆರಕಿ, ಬಸವರಾಜ ಹಡಪದ, ಎಸ್.ಸಿ.ಬಿರಾದಾರ ಸೇರಿ ಇತರ ಉಪಸ್ಥಿತರಿದ್ದರು.