ಕನ್ನಡಪ್ರಭ ವಾರ್ತೆ ಮಡಿಕೇರಿ
ಈ ಸಮೀಕ್ಷೆಗೆ ದಾಖಲೆಗಳ ಮಾಹಿತಿ ನೀಡುವ ಅವಶ್ಯಕತೆ ಇರುವುದರಿಂದ ತಮ್ಮ ಕುಟುಂಬದ ಸದಸ್ಯರ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತದಾರರ ಗುರುತಿನ ಚೀಟಿ, ವಿಕಲಚೇತನರಾಗಿದ್ದರೆ ಯುಐಡಿ ಕಾರ್ಡ್ ಅಥವಾ ಅಂಗವಿಕಲ ಪ್ರಮಾಣ ಪತ್ರದ ದಾಖಲೆಗಳನ್ನು ತೆಗೆದಿರಿಸಿಕೊಂಡು ಸುಲಭವಾಗಿ ಈ ಸಮೀಕ್ಷೆ ಕಾರ್ಯದಲ್ಲಿ ತಾವೇ ಸ್ವಯಂ ಆಗಿ ಭಾಗವಹಿಸಬಹುದಾಗಿದ್ದು, ಸಮೀಕ್ಷೆ ಯಶಸ್ವಿಯಾದ ನಂತರ ಈ ಬಗ್ಗೆ ಮೊಬೈಲ್‌ಗೆ ಸಂದೇಶ ಬರಲಿದೆ.ಗಣತಿದಾರರು ತಮ್ಮ ಮನೆಗೆ ಬರುವವರೆಗೆ ಕಾಯದೇ ಸಾರ್ವಜನಿಕರು ತಮಗೆ ಅನುಕೂಲವಾದ ಅವಧಿಯಲ್ಲಿ ಯಾವುದೇ ಪ್ರದೇಶದಿಂದ ಸಮೀಕ್ಷೆಯಲ್ಲಿ ಭಾಗವಹಿಸಬಹುದಾಗಿದ್ದು, ತಾವೇ ತಮ್ಮ ಮಾಹಿತಿಯನ್ನು ದಾಖಲು ಮಾಡುವುದರಿಂದ, ಯಾವುದೇ ಗೊಂದಲಗಳಿಲ್ಲದೆ ನಿಖರವಾಗಿ ತಮ್ಮ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯನ್ನು ಸಮೀಕ್ಷೆಯಲ್ಲಿ ತಿಳಿಸಲು ಸಾಧ್ಯವಾಗಲಿದೆ.ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂಬಂಧಿಸಿದಂತೆ 1131 ಬ್ಲಾಕ್‌ಗಳಿದ್ದು, ಇದರಲ್ಲಿ 1,34,396 ಕುಟುಂಬಗಳ ಗುರಿಯಲ್ಲಿ ಈಗಾಗಲೇ 1,04,644 ಕುಟುಂಬಗಳ ಸಮೀಕ್ಷೆ ಆಗಿದ್ದು, ಶೇ.77.86 ರಷ್ಟು ಸಮೀಕ್ಷೆ ನಡೆದಿದೆ. ತಾಲೂಕುವಾರು ಗಮನಿಸಿದಾಗ ಕುಶಾಲನಗರ ತಾಲೂಕಿನಲ್ಲಿ 304 ಬ್ಲಾಕ್‌ಗಳಲ್ಲಿ 34,637 ಕುಟುಂಬಗಳಲ್ಲಿ 26,819 ಕುಟುಂಬಗಳ ಸಮೀಕ್ಷೆ ಆಗಿದೆ. ಮಡಿಕೇರಿ ತಾಲೂಕಿನಲ್ಲಿ 264 ಬ್ಲಾಕ್‌ಗಳಲ್ಲಿ 35,127 ಕುಟುಂಬಗಳಲ್ಲಿ 25,610 ಕುಟುಂಬಗಳ ಸಮೀಕ್ಷೆ ಆಗಿದೆ. ಪೊನ್ನಂಪೇಟೆ ತಾಲೂಕಿನಲ್ಲಿ 87 ಬ್ಲಾಕ್‌ಗಳಲ್ಲಿ 10,337 ಕುಟುಂಬಗಳಲ್ಲಿ 8,743 ಕುಟುಂಬಗಳ ಸಮೀಕ್ಷೆ ಆಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ 266 ಬ್ಲಾಕ್‌ಗಳಲ್ಲಿ 29,402 ಕುಟುಂಬಗಳ ಗುರಿಯಲ್ಲಿ 24,428 ಕುಟುಂಬಗಳ ಸಮೀಕ್ಷೆ ಆಗಿದೆ. ಹಾಗೆಯೇ ವಿರಾಜಪೇಟೆ ತಾಲೂಕಿನಲ್ಲಿ 210 ಬ್ಲಾಕ್‌ಗಳಲ್ಲಿ 24,893 ಕುಟುಂಬಗಳ ಗುರಿಯಲ್ಲಿ 19,044 ಕುಟುಂಬಗಳ ಸರ್ವೇ ಆಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎ.ಎಸ್.ದೀಪಕ್ ಅವರು ತಿಳಿಸಿದ್ದಾರೆ.