ಶಿಕ್ಷಣ, ಆರೋಗ್ಯದಿಂದ ಸಾಮಾಜಿಕ ಅಭಿವೃದ್ಧಿ ಸಾಧ್ಯ: ಸಿಇಒ ಲವೀಶ್ ಒರಡಿಯಾ

KannadaprabhaNewsNetwork |  
Published : Sep 14, 2025, 01:04 AM IST
 ಯಾದಗಿರಿಯ ಕೋಲಿವಾಡ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಗೆ ಸಿ.ಎಸ್.ಆರ್ ಅನುದಾನದಲ್ಲಿ ಐ.ಡಿ.ಬಿ.ಐ ಬ್ಯಾಂಕ್ ವತಿಯಿಂದ ನೀಡಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್‌ ಒರಡಿಯಾ ಉದ್ಘಾಟಿಸಿ, ಮಾತನಾಡಿದರು. | Kannada Prabha

ಸಾರಾಂಶ

ಮಾನವ ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಪಡೆಯಲು ಉತ್ತಮವಾದ ಶಿಕ್ಷಣ ಮತ್ತು ಆರೋಗ್ಯ ಇವುಗಳೆರಡು ಅತೀ ಮುಖ್ಯ ಪಾತ್ರವಹಿಸುತ್ತವೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಮಾನವ ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಪಡೆಯಲು ಉತ್ತಮವಾದ ಶಿಕ್ಷಣ ಮತ್ತು ಆರೋಗ್ಯ ಇವುಗಳೆರಡು ಅತೀ ಮುಖ್ಯ ಪಾತ್ರವಹಿಸುತ್ತವೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ಹೇಳಿದರು.

ನಗರದ ಕೋಲಿವಾಡ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಗೆ ಸಿ.ಎಸ್.ಆರ್ ಅನುದಾನದಲ್ಲಿ ಐ.ಡಿ.ಬಿ.ಐ ಬ್ಯಾಂಕ್ ವತಿಯಿಂದ ನೀಡಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಬ್ಯಾಂಕಿನ ವ್ಯವಸ್ಥಾಪಕ ಮಂಡಳಿಗಳು ಸದಾ ಜನಗಳ ಜೊತೆಗೆ ಅವರವರ ವ್ಯಾಪಾರ, ವ್ಯವಹಾರದ, ಕಡೆಗೆ ಹೆಚ್ಚಿನ ಸಮಯ ನೀಡುವ ಸಮಯದಲ್ಲಿ ಐ.ಡಿ.ಬಿ.ಐ ಬ್ಯಾಂಕಿನ ವತಿಯಿಂದ ಸಿ.ಎಸ್.ಆರ್ ಅನುದಾನದಲ್ಲಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ದೇಣಿಗೆಯಾಗಿ ನೀಡಿದ್ದು ಇದು ನಿಜವಾದ ಮಾನವಿಯ ಸಮಾಜಸೇವೆ ಎಂದರು.

ಶಾಲಾ ವಿದ್ಯಾರ್ಥಿಗಳು ಒಳ್ಳೆಯ ಆರೋಗ್ಯದ ಮೇಲೆ ಗಮನ ಕೊಡಬೇಕು. ಹಾಗೂ ಸ್ವಚ್ಛತೆ ಕಾಪಾಡುತ್ತಾ ಒಳ್ಳೆಯ ರೀತಿಯಲ್ಲಿ ಅಭ್ಯಸಿಸಿ ಮುಂದಿನ ದಿನಗಳಲ್ಲಿ ಜಿಲ್ಲೆಗೆ ಕೀರ್ತಿ ತರುವ ಪ್ರಯತ್ನ ಮಾಡಬೇಕು ಮತ್ತು ಇಂತಹ ಖಾಸಗಿ ಬ್ಯಾಂಕ್ ವತಿಯಿಂದ ನೀಡಲಾದ ಶುದ್ಧ ನೀರಿನ ಘಟಕವನ್ನು ನೀರನ್ನು ಮಿತವಾಗಿ ಬಳಸಿ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಶಾಲಾ ಶಿಕ್ಷಣ ಉಪ ನಿರ್ದೇಶಕ ಚನ್ನಬಸಪ್ಪ ಮುಧೋಳ ಮಾತನಾಡಿ, ಈ ಶುದ್ಧ ಕುಡಿಯುವ ನೀರಿನ ಘಟಕದಿಂದ ಶಾಲೆಯ 430 ವಿದ್ಯಾರ್ಥಿಗಳು ಶುದ್ಧ ಕುಡಿಯುವ ನೀರಿನ ಬಳಕೆ ಮಾಡಬಹುದು ಜೊತೆಗೆ ಅದನ್ನು ಸಂರಕ್ಷಣೆ ಮಾಡುವ ಮೂಲಕ ಜವಾಬ್ದಾರಿ ಹೊಂದಬೇಕು ಎಂದರು.

ಕ್ಷೇತ ಶಿಕ್ಷಣಧಿಕಾರಿ ವೀರಪ್ಪ ಕನ್ನಳ್ಳಿ, ಶಿಕ್ಷಣ ಸಂಯೋಜಕ ಕಿಶನ್ ಪವಾರ್ ಉಪಸ್ಥಿತರಿದ್ದರು. ಐ.ಡಿ.ಬಿ.ಐ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ರಾಮುಲು, ಮುಖ್ಯ ಗುರು ಮರೆಪ್ಪ ಮ್ಯಾಗೇರಿ ಮಾತನಾಡಿದರು. ಪರಿಸರ ಪ್ರೇಮಿ ನಾಗರಾಜ ಬೀರನೂರ, ಎಸ್.ಡಿ.ಎಂ.ಸಿ ಅಧ್ಯಕ್ಷ, ಜಗದೀಶ್, ಸೇರಿದಂತೆ ಶಾಲಾ ಸಹ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಐ.ಡಿ.ಬಿ.ಐ ಬ್ಯಾಂಕ್ ಸಿಬ್ಬಂದಿಗಳಾದ ಶರಣಗೌಡ, ಅವಿನಾಶ್ ಮುಳ್ಳಗಸಿ, ಮೊಹ್ಮದ್‌ ಗೌಸುದ್ದೀನ್‌ ಇದ್ದರು. ಶೈಲಾ ಜ್ಯೋತಿ ನಿರೂಪಿಸಿ, ಗುರುನಾಥ್ ರೆಡ್ಡಿ ವಂದಿಸಿದರು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ