ಮೌಲ್ಯಯುತ ಶಿಕ್ಷಣದಿಂದ ಸಮಾಜ ಅಭಿವೃದ್ಧಿ: ವನಜ ಎಂ.

KannadaprabhaNewsNetwork |  
Published : Sep 24, 2025, 01:02 AM IST
ಆಗಲು | Kannada Prabha

ಸಾರಾಂಶ

ಮಕ್ಕಳಿಗೆ ಉತ್ತಮ ಮೌಲ್ಯಯುತ ಶಿಕ್ಷಣ ಮತ್ತು ಮಾರ್ಗದರ್ಶನ ನೀಡಿದರೆ ಸಮಾಜ ಹಾಗೂ ದೇಶದ ಉದ್ಧಾರ ಆಗಲು ಸಾಧ್ಯ ಎಂದು ಮುಖ್ಯ ಶಿಕ್ಷಕಿ ಹೇಳಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ನಮ್ಮ ಮಕ್ಕಳಿಗೆ ಉತ್ತಮ ಮೌಲ್ಯಯುತ ಶಿಕ್ಷಣ ಮತ್ತು ಮಾರ್ಗದರ್ಶನ ನೀಡಿದರೆ ಸಮಾಜ ಹಾಗೂ ದೇಶದ ಉದ್ಧಾರ ಆಗಲು ಸಾಧ್ಯ ಎಂದು ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತ ಹಾಕತ್ತೂರು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವನಜ ಎಂ. ಹೇಳಿದರು.

ನಾಪೋಕ್ಲು ಬಿಲ್ಲವ ಸಮಾಜದ ವತಿಯಿಂದ ಇಲ್ಲಿಯ ಭಗವತಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಶ್ರೀ ಬ್ರಹ್ಮರ್ಷಿ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಉದ್ಘಾಟಿಸಿ ಅವರು ಮಾತನಾಡಿದರು. ಜೀವನವನ್ನು ಮೀಸಲಿಡಬೇಕು:

ಶ್ರೀ ನಾರಾಯಣ ಗುರು ಒಂದೇ ಜಾತಿ, ಒಂದೇ ಮತ, ಒಂದೇ ಧರ್ಮ, ಒಂದೇ ದೇವರು ಎಂಬ ತತ್ವವನ್ನು ಸಾರಿದವರು ಮೇಲ್ ಜಾತಿಗೆ ಇರುವ ಸ್ಥಾನಮಾನ ಹಕ್ಕು ಎಲ್ಲರಿಗೂ ಸಮವಾಗಿ ಸಿಗಬೇಕು. ಜಾತಿ ಅಸಮಾನತೆಯನ್ನು ದೂರ ಮಾಡಬೇಕು. ಶೋಷಿತ ವರ್ಗದ ಹಕ್ಕುಗಳ ಸಂರಕ್ಷಣೆ ಮಾಡಬೇಕು ಎಂದು ಸಾರಿದರು. ದೇವರನ್ನು ಪೂಜಿಸುವುದು ಸ್ವಹಿತಕ್ಕಾಗಿ. ದೇಶ ಸೇವೆಗಾಗಿ ನಮ್ಮ ಜೀವನವನ್ನು ಮೀಸಲಿಡಬೇಕು ಎಂದರು.

ನಾರಾಯಣ ಗುರು ಶೋಷಿತ ಸಮಾಜದ ಏಳಿಗೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಯುವ ಸಮೂಹಕ್ಕೆ ಉತ್ತಮ ಶಿಕ್ಷಣ ನೀಡಬೇಕು. ಅದು ಸಮಾಜದ ಕಲ್ಯಾಣಕ್ಕಾಗಿ ಉಪಯೋಗವಾಗಬೇಕು ಎಂದು ಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳ ಬಗ್ಗೆ ಬೆಳಕು ಚೆಲ್ಲಿ ತಮ್ಮ ಜೀವನ ದಲ್ಲಿಯೂ ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.ಮತ್ತೋರ್ವ ಮುಖ್ಯ ಅತಿಥಿ ಎನ್ ಸಿ ಸಿ ನಿವೃತ್ತ ಅಧಿಕಾರಿ ಡಾ. ಗಣೇಶ್ ಗೋಣಿಕೊಪ್ಪ ಮಾತನಾಡಿ, ನಾರಾಯಣ ಗುರು ಯೋಗ, ಧ್ಯಾನ. ಸಂಸ್ಕೃತ ಕಲಿತ ಪರಿಣಿತರಾಗಿದ್ದರು. ಶಾಲೆಯನ್ನು ತೆರೆದರು ಒಂದೇ ಜಾತಿ ಧರ್ಮ ದೇವರು ಎನ್ನುವ ಸಂದೇಶವನ್ನು ಮನುಕುಲಕ್ಕೆ ಸಾರಿದರು ಅವರ ತತ್ವ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಂಘಟನೆ ಮಾಡಬೇಕು. ಇಲ್ಲಿಯ ಸಂಘ ಉತ್ತಮ ಕಾರ್ಯದಕ್ಷತೆಯಿಂದ ಮುನ್ನಡೆಯುತ್ತಿದ್ದು ಇಂತಹ ಸಂಘಟನೆಯಿಂದ ಜನಾಂಗ ಬಲಿಷ್ಠರಾಗಲು ಸಾಧ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಾರಾಯಣ ಗುರುಗಳು ಸ್ಥಾಪಿಸಿದ ಮಠ ಮಂದಿರಗಳು ಹಾಗೂ ವಿದ್ಯಾಲಯ, ಅವರು ತಪೋನಿರತ ಪುಣ್ಯಭೂಮಿಯನ್ನು ನಾವೆಲ್ಲರೂ ವೀಕ್ಷಿಸಬೇಕೆಂದು ತಮ್ಮ ಅನುಭವವನ್ನು ಹಂಚಿಕೊಂಡರು.ಸಹಕಾರ ಅವಶ್ಯ:

ನಾಪೋಕ್ಲು ಬಿಲ್ಲವ ಸಮಾಜದ ಅಧ್ಯಕ್ಷ ಪ್ರತೀಪ ಬಿ. ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಯೊಬ್ಬ ಸದಸ್ಯನ ಸಹಕಾರ ಅವಶ್ಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದು ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಬಿಲ್ಲವ ಸಮಾಜದ ಉಪ ಅಧ್ಯಕ್ಷ ವಿಠಲ ಪೂಜಾರಿ, ಇಲ್ಲಿಯ ಬಿಲ್ಲವ ಸಮಾಜದ ಉಪ ಅಧ್ಯಕ್ಷ ವಸಂತ ಬಿ. ಆರ್., ಜಗ್ಗನಾಥ್ ಪಾಲೂರು ಹಾಗೂ ಸಮಾಜದ ನಿರ್ದೇಶಕರು ಸದಸ್ಯರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಶ್ರೀ ಬ್ರಹ್ಮರ್ಷಿ ನಾರಾಯಣ ಗುರು ಅವರ ಭಾವಚಿತ್ರಕ್ಕೆ ಎಲ್ಲರೂ ಪುಷ್ಪಾರ್ಚನೆ ಮಾಡುವುದರೊಂದಿಗೆ ಗೌರವ ಸಮರ್ಪಿಸಲಾಯಿತು.ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಶಿಕ್ಷಕಿ ವನಜ ಎಂ, ಡಾ. ಗಣೇಶ್ ಅವರನ್ನು ಇಲ್ಲಿಯ ಬಿಲ್ಲವ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ವಿವಿಧ ಮನೋರಂಜನ ಕಾರ್ಯಕ್ರಮಗಳನ್ನು ಆಯೋಜಿಸಿ ವಿಜೇತರವರಿಗೆ ಮತ್ತು ಕಾರ್ಯಕ್ರಮಕ್ಕೆ ವಿವಿಧ ರೀತಿಯಲ್ಲಿ ಸಹಕರಿಸಿ ಪ್ರೋತ್ಸಾಹಿಸಿದ ಸದಸ್ಯರಿಗೆ ವೇದಿಕೆಯಲ್ಲಿದ್ದ ಗಣ್ಯರು ನೆನಪಿನ ಕಾಣಿಕೆ ಹಾಗೂ ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಬಾಲಕಿ ದೃತಿ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಸಮಾಜದ ಕಾರ್ಯದರ್ಶಿ ಲೋಹಿತ್ ಕೆ.ಎಸ್ ಸ್ವಾಗತಿಸಿ ಖಜಾಂಜಿ ದೀಪಕ್ ಬಿ.ಡಿ ನಿರೂಪಿಸಿ ವಂದಿಸಿದರು.

PREV

Recommended Stories

2026ನೇ ವರ್ಷದ 20 ಸಾರ್ವತ್ರಿಕ ರಜೆಗಳ ಪಟ್ಟಿ ಪ್ರಕಟಿಸಿದ ಸರ್ಕಾರ
ಮಧುಮೇಹ ಎಂದರೆ ಏನು? ಯಾರಿಗೆ ಬರಬಹುದು ? ಲಕ್ಷಣ ಹಾಗೂ ಚಿಕಿತ್ಸೆ ಹೇಗೆ ?