ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಪ್ರಥಮ ವರ್ಷದ ಪ್ರೊ.ಜಯಪ್ರಕಾಶ್ ಗೌಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ, ವಿಜ್ಞಾನ, ತಂತ್ರಜ್ಞಾನ, ಜಗತ್ತಿನಲ್ಲಿ ಯಾವ ಯಾವ ವಿವಿಧ ಮಜಲುಗಳು ಇವೆಯೆ ಅವುಗಳು ಮಾಸದೆ ನಿಂತ ನೀರಾಗದೆ ಸದಾ ಚಲಿಸುವಂತೆ ಆಗಬೇಕಾದರೆ ಒಂದು ಪರಂಪರೆಯಿಂದ ಇನ್ನೊಂದು ಪರಂಪರೆಗೆ ರವಾನಿಸಬೇಕಾದರೆ ಪ್ರೊ.ಜೆಪಿಯಂತಹ ವ್ಯಕ್ತಿಗಳು ಸೃಷ್ಟಿಯಾಗಬೇಕು. ಇಲ್ಲದಿದ್ದರೆ ಎಲ್ಲವೂ ಅಳಿದು ಹಾಳಾಗುತ್ತದೆ ಎಂದರು.ಪ್ರೊ.ಜೆಪಿ ಅವರ ಒಳಗಡೆ ಕಟು ಮನಸ್ಸಿನವರಾದರೂ ಹೊರಗೆ ಅವರ ಕಾಳಜಿ, ಜಡ್ಡುಗಟ್ಟಿದ ಸಮಾಜಕ್ಕೆ ಚಾಲಕ ಶಕ್ತಿ ಕೊಡುವ ಹಂಬಲ ನನಗೆ ಇಷ್ಟವಾಗಿದೆ. ಸಮಾಜಕ್ಕೆ ಏನನ್ನಾದರೂ ಕೊಡಬೇಕು ಎಂಬ ಹಂಬಲ ಅವರಲ್ಲಿದೆ ಎಂದು ತಿಳಿಸಿದರು.
15 ರಿಂದ 20 ವರ್ಷಗಳ ಹಿಂದೆ ನಾನು ಚಿಕ್ಕಬಳ್ಳಾಪುರ ಶಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಪ್ರೊ.ಜಯಪ್ರಕಾಶ್ ಗೌಡರನ್ನು ನೋಡಿದ್ದೇನೆ. ಅವರಲ್ಲಿನ ನಿಖರ, ನಿರ್ಭೀತಿಯ ಮಾತುಕತೆ ನನಗೆ ಇಷ್ಟವಾಗಿತ್ತು. ಈಗ 75 ವರ್ಷ ತುಂಬಿದೆ. ಅವರ ಸಂತೋಷ, ಜ್ಞಾನ, ಪರಂಪರೆ ನಿಲ್ಲದೆ ಮುಂದುವರೆಯಬೇಕು. ಇಂತಹವರು 100 ವರ್ಷಗಳ ಜೀವನ ಪೂರೈಸಬೇಕು ಎಂದು ಹಾರೈಸಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಮಾಜಿ ಸದಸ್ಯರಾದ ಬಿ.ರಾಮಕೃಷ್ಣ, ಕೆ.ಟಿ.ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ಕೆ.ಎಸ್.ಮಂಜುಳಾ ಪ್ರೊ.ಜಯಪ್ರಕಾಶ್ ಗೌಡ, ತಗ್ಗಹಳ್ಳಿ ವೆಂಕಟೇಶ್, ವಿಜಯಲಕ್ಷ್ಮಿ ರಘುನಂದನ್ ಸೇರಿದಂತೆ ಕರ್ನಾಟಕ ಸಂಘದ ಪದಾಧಿಕಾರಿಗಳು ಇದ್ದರು.