ಸಮಾಜ ಹರಿಯುವ ನೀರಾಗಬೇಕು: ಹರಪಳ್ಳಿ ರವೀಂದ್ರ

KannadaprabhaNewsNetwork |  
Published : Oct 20, 2026, 02:00 AM IST
. | Kannada Prabha

ಸಾರಾಂಶ

ಸ್ಥಳೀಯ ಕೆಂಪೇಗೌಡ ಒಕ್ಕಲಿಗರ ಸಂಘದ ವತಿಯಿಂದ ಮೊದಲನೇ ವರ್ಷದ ಒಕ್ಕಲಿಗರ ಕ್ರೀಡಾಕೂಟ ಸ್ಥಳೀಯ ಭಾರತಿ ವಿದ್ಯಾ ಸಂಸ್ಥೆ ಮೈದಾನದಲ್ಲಿ ನಡೆಯಿತು.

ಶನಿವಾರಸಂತೆ : ಸ್ಥಳೀಯ ಕೆಂಪೇಗೌಡ ಒಕ್ಕಲಿಗರ ಸಂಘದ ವತಿಯಿಂದ ಮೊದಲನೇ ವರ್ಷದ ಒಕ್ಕಲಿಗರ ಕ್ರೀಡಾಕೂಟ ಸ್ಥಳೀಯ ಭಾರತಿ ವಿದ್ಯಾ ಸಂಸ್ಥೆ ಮೈದಾನದಲ್ಲಿ ನಡೆಯಿತು.ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಉದ್ಘಾಟಿಸಿ ಮಾತನಾಡಿ, ಒಕ್ಕಲಿಗರ ಸಮಾಜದಲ್ಲಿ ಶ್ರೀಮಂತರಿಂದ ಹಿಡಿದು ಬಡವ ಬಲ್ಲಿಗರು ಇದ್ದಾರೆ. ಶ್ರೀಮಂತರಾದವರು ಸಮಾಜದ ಬಾಂಧವರನ್ನು ಸಂಘಟಿಸುವಲ್ಲಿ ಹಿಂದೆ ಉಳಿದಿದ್ದಾರೆ. ಮಧ್ಯಮ ವರ್ಗದವರು ಸಮಾಜ ಬಾಂಧವರನ್ನ ಒಗ್ಗೂಡಿಸುವಲ್ಲಿ ಇಂದು ಮುಂದೆ ಬಂದಿರುವುದು ಹೆಮ್ಮೆಯ ಸಂಗತಿ ಎಂದರು.ಶನಿವಾರಸಂತೆ ಕೆಂಪೇಗೌಡ ಒಕ್ಕಲಿಗರ ಸಂಘವು ಹೆಮ್ಮರವಾಗಿ ಬೆಳೆದು ಸಮಾಜಕ್ಕೆ ಮಾರ್ಗ ದರ್ಶಕರಾಗಲಿ, ಇಂತಹ ಕ್ರೀಡಾಕೂಟ ಆಯೋಜನೆ ಮಾಡುವ ಮೂಲಕ ಸಮಾಜ ಒಗ್ಗೂಡಿಸುವ ಕೆಲಸ ಆಗುತ್ತದೆ. ಇದರ ಜೊತೆಗೆ ಸಮಾಜಮುಖಿ ಕೆಲಸಗಳು ಆಗಿಂದಾಗ್ಗೆ ಆಗುತ್ತಿರಬೇಕು ನಮ್ಮ ಸಮಾಜ ನಿಂತ ನೀರಾಗದೆ ಹರಿಯುವ ನೀರಾಗಬೇಕು ಎಂದರು.ಕರ್ನಾಟಕ ರಾಜ್ಯ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ಬೆಕ್ಕನಹಳ್ಳಿ ನಾಗರಾಜ್ ಮಾತನಾಡಿ, ಸಮಾಜ ಬಾಂಧವರಲ್ಲಿ ಒಗ್ಗಟ್ಟು ಕಮ್ಮಿಯಾಗಿದೆ. ಎಲ್ಲರನ್ನ ಒಗ್ಗಟ್ಟಿಸುವ ಕಾರ್ಯ ಶನಿವಾರಸಂತೆ ಒಕ್ಕಲಿಗರ ಸಂಘದಿಂದ ಆಗಬೇಕಿದೆ ಎಂದರು.ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ಕೇಶವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಸಂಘ ಹೆಮ್ಮರವಾಗಿ ಬೆಳೆಯುವ ಯೋಜನೆ ರೂಪಿಸಲಾಗಿದ್ದು ಈ ಸಮಾಜದ ಭವ್ಯ ಕಟ್ಟಡ ನಿರ್ಮಾಣ ಮಾಡುವ ಯೋಜನೆ ಇದ್ದು ಸಮಾಜದ ಸರ್ವರೂ ಸಹಕಾರ ಅತ್ಯವಶ್ಯಕ ಎಂದರು.

ಹಿರಿಯರಾದ ಕಳಲೆ ಕೃಷ್ಣೇಗೌಡ, ನಿವೃತ್ತ ಶಿಕ್ಷಕರಾದ ಗುಂಡೇಗೌಡ ಮುಂತಾದವರಿದ್ದರು. ಕೆಂಪೇಗೌಡ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಸ್ವಾಗತಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾದಾಪುರ: ಆರನೇ ವರ್ಷದ ಸಾರ್ವಜನಿಕ ಆಯುಧಪೂಜೆ ಇಂದು
ಮೈಸೂರು ಕೊಡಗು ಗೌಡ ಸಮಾಜ ಕಾವೇರಿ ತೀರ್ಥ ವಿತರಣೆ