ಸಮಾಜ ಮಹಿಳೆಯರಿಗೂ ನಾಯಕತ್ವ ನೀಡಲಿ

KannadaprabhaNewsNetwork |  
Published : May 10, 2026, 02:15 AM IST
9ಕೆಪಿಎಲ್2::ಕುಕನೂರು ಪಟ್ಟಣದಲ್ಲಿ ಕೆ.ಎಚ್.ಪಿ.ಟಿ ಸಂಸ್ಥೆಯಿಂದ  ಸ್ಪೂರ್ತಿ  ಯೋಜನೆಯಲ್ಲಿ  ಮಹಿಳೆಯರ ನಾಯಕತ್ವ ಮತ್ತು ಸಂವಹನ ಕಾರ್ಯಕ್ರಮ ಜರುಗಿತು. | Kannada Prabha

ಸಾರಾಂಶ

ಕುಟುಂಬ ನಿರ್ವಹಣೆ ಮಾಡುವ ಮಹಿಳೆ ಸಮಾಜದ ನಿರ್ವಹಣೆಗೆ ಬರಬೇಕು. ಹೆಣ್ಣು ಮಕ್ಕಳು ನಾಯಕತ್ವ ಸ್ಥಾನ ಬಂದಾಗ ಎಂದಿಗೂ ಹಿಂಜರಿಯಬಾರದು

ಕುಕನೂರು: ಸಮಾಜ ಮಹಿಳೆಯರಿಗೂ ಹೆಚ್ಚಿನ ರೀತಿಯಲ್ಲಿ ನಾಯಕತ್ವ ಸ್ಥಾನ ನೀಡಬೇಕು ಎಂದು ಸಿಡಿಪಿಒ ಬೆಟದಪ್ಪ ಮಾಳೆಕೊಪ್ಪ ಹೇಳಿದರು.

ಪಟ್ಟಣದಲ್ಲಿ ಕೆ.ಎಚ್.ಪಿ.ಟಿ ಸಂಸ್ಥೆಯಿಂದ ಸ್ಫೂರ್ತಿ ಯೋಜನೆಯಲ್ಲಿ ಜರುಗಿದ ಮಹಿಳೆಯರ ನಾಯಕತ್ವ ಮತ್ತು ಸಂವಹನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಮಹಿಳೆ ಸದಾ ಪುರುಷನ ಶಕ್ತಿಯಾಗಿ ಕೆಲಸ ಮಾಡುತ್ತಾಳೆ. ಕುಟುಂಬ ನಿರ್ವಹಣೆ ಮಾಡುವ ಮಹಿಳೆ ಸಮಾಜದ ನಿರ್ವಹಣೆಗೆ ಬರಬೇಕು. ಹೆಣ್ಣು ಮಕ್ಕಳು ನಾಯಕತ್ವ ಸ್ಥಾನ ಬಂದಾಗ ಎಂದಿಗೂ ಹಿಂಜರಿಯಬಾರದು, ಮಹಿಳಾ ನಾಯಕತ್ವ ಅಂದರೆ ದೂರ ದೃಷ್ಟಿಯತ್ತ ಪ್ರೇರೇಪಿಸುವ ಮತ್ತು ಮಾರ್ಗದರ್ಶನ ನೀಡುವ ಸ್ಥಾನ. ಮಹಿಳೆ ಕೇವಲ ಅಧಿಕಾರ ಅಥವಾ ಉನ್ನತ ಸ್ಥಾನ ಹೊಂದಿರುವುದು ಮಾತ್ರವಲ್ಲ, ಪರಿಣಾಮಕಾರಿ ಬೆಳವಣಿಗೆ ಸಹ ನೀಡಬಲ್ಲರು. ಮಹಿಳೆಯಿಂದ ಹೊಸ ನಾವೀನ್ಯತೆ ಪ್ರೋತ್ಸಾಹಿಸುತ್ತಾರೆ ಮತ್ತು ದೀರ್ಘಕಾಲೀನ ಯಶಸ್ಸನ್ನು ಸಾಧಿಸಲು ಬೆಂಬಲ ಮಹಿಳಾ ನಾಯಕತ್ವ ನೀಡುತ್ತದೆ. ಪ್ರಭಾವ ಬೀರುವ ಮತ್ತು ಜವಾಬ್ದಾರಿ ತೆಗೆದುಕೊಳ್ಳುವ ಸಾಮರ್ಥ್ಯದಿಂದ ಮಹಿಳೆ ನಾಯಕತ್ವ ಸದಾ ಸಬಲಳು ಎಂದರು. ಈ ಸಂದರ್ಭದಲ್ಲಿ ಕೆ.ಎಚ್.ಪಿ.ಟಿ. ಸಂಸ್ಥೆಯವರು, ಮಹಿಳೆಯರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

₹1 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ: ಕನಕ ಶ್ರೀ
ತೆಗ್ಗಿನಮಠದಿಂದ ಅನ್ನ, ಅಕ್ಷರ ಜತೆ ಧರ್ಮಕಾರ್ಯ: ಸಂಸದ ಇ.ತುಕಾರಾಂ