ಸ್ಥಳೀಯ ಮೂಲ ಸಮಸ್ಯೆ ಬಗೆಹರಿಸಿ: ಶಾಸಕ ಜಿ.ಟಿ. ದೇವೇಗೌಡ ಸೂಚನೆ

KannadaprabhaNewsNetwork |  
Published : Aug 27, 2024, 01:35 AM IST
12 | Kannada Prabha

ಸಾರಾಂಶ

ರಾಜಾಜಿನಗರ ಆಶ್ರಯ ಬಡಾವಣೆ ರಸ್ತೆ ಮತ್ತು ಒಳಚರಂಡಿಗೆ ಸಂಬಂಧಿಸಿದಂತೆ ಸರ್ವೆ ಮಾಡಿಸಬೇಕು. ಆಶ್ರಯ ಬಡಾವಣೆಗಳನ್ನು ಪಾಲಿಕೆ ವತಿಯಿಂದ ನಿರ್ಮಿಸಿದ್ದು, ಪಾಲಿಕೆ ವತಿಯಿಂದ ಅಭಿವೃದ್ಧಿ ಪಡಿಸಿ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡುವಂತೆ ಅವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರುವಿಜಯನಗರ 4ನೇ ಹಂತದಲ್ಲಿ ಕಳೆದ ನಾಲ್ಕು ತಿಂಗಳಿಂದ ಸರಿಯಾದ ರೀತಿಯಲ್ಲಿ ಕಸ ವಿಲೇವಾರಿಯಾಗುತ್ತಿಲ್ಲ. ಸ್ಥಳೀಯ ಮೂಲ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಸೂಚಿಸಿದರು.ನಗರದ ಜಲದರ್ಶಿನಿ ಅತಿಥಿಗೃಹದಲ್ಲಿರುವ ತಮ್ಮ ಕಚೇರಿಯಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಸ ವಿಲೇವಾರಿ ಮತ್ತು ಒಳಚರಂಡಿ ದುರಸ್ತಿ ಕೈಗೊಳ್ಳುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ದೂರುತ್ತಿದ್ದಾರೆ. ಕೂಡಲೇ ಸಮಸ್ಯೆಗಳ ಪಟ್ಟಿ ಮಾಡಿಕೊಂಡು ಬಗೆಹರಿಸುವಂತೆ, ಹೂಟಗಳ್ಳಿ ನಗರಸಭೆ ಪೌರಾಯುಕ್ತರು, ಎಂಡಿಎ ಆಯುಕ್ತರು ಜಂಟಿಯಾಗಿ ಸಭೆ ನಡೆಸಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.ವಿಜಯನಗರ 4ನೇ ಹಂತದ ನಿರ್ವಹಣೆಗೆ ಅಗತ್ಯ ಇರುವ ಅನುದಾನವನ್ನು ಬಿಡುಗಡೆ ಕ್ರಮ ಕೈಗೊಳ್ಳುವುದಾಗಿ ಎಂಡಿಎ ಆಯುಕ್ತ ರಘುನಂದನ್ ತಿಳಿಸಿದರು.ದಾಸನಕೊಪ್ಪಲು, ರೂಪಾ ನಗರ, ಮರಟಿಕ್ಯಾತನಹಳ್ಳಿ ಒಳಚರಂಡಿ ಸಮಸ್ಯೆ ಬಗೆಹರಿಸಲು ಈಗಾಗಲೇ 25 ಕೋಟಿ ಕ್ರೀಯಾ ಯೋಜನೆ ತಯಾರಾಗಿದ್ದು ಅನುಮೋದನೆ ಹಂತದಲ್ಲಿದೆ. ತಾತ್ಕಾಲಿಕವಾಗಿ ಈ ಗ್ರಾಮಗಳ ಒಳಚರಂಡಿ ಸಮಸ್ಯೆಯನ್ನು ಬಗೆಹರಿಸಲು ಸಂಬಂಧಟ್ಟವರು ಕ್ರಮ ವಹಿಸಲು ಶಾಸಕರು ಸೂಚಿಸಿದರು.ರಾಜಾಜಿನಗರ ಆಶ್ರಯ ಬಡಾವಣೆ ರಸ್ತೆ ಮತ್ತು ಒಳಚರಂಡಿಗೆ ಸಂಬಂಧಿಸಿದಂತೆ ಸರ್ವೆ ಮಾಡಿಸಬೇಕು. ಆಶ್ರಯ ಬಡಾವಣೆಗಳನ್ನು ಪಾಲಿಕೆ ವತಿಯಿಂದ ನಿರ್ಮಿಸಿದ್ದು, ಪಾಲಿಕೆ ವತಿಯಿಂದ ಅಭಿವೃದ್ಧಿ ಪಡಿಸಿ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡುವಂತೆ ಅವರು ತಿಳಿಸಿದರು.ಖಾಸಗಿ ಬಡಾವಣೆಗಳಿಗೆ ಕುಡಿಯುವ ನೀರುಪ್ರಾಧಿಕಾರದಿಂದ ಅನುಮೋದನೆಗೊಂಡು ನಿರ್ಮಾಣಗೊಂಡಿರುವ ಕೆ.ಬಿ.ಎಲ್. ಬಡಾವಣೆ, ಆಲನಹಳ್ಳಿ, ದಟ್ಟಗಳ್ಳಿಯ ಕಾರ್ತಿಕ ಬಡಾವಣೆ, ಆರ್.ಟಿ. ನಗರದ ನಿವಾಸಿಗಳು ಕುಡಿಯುವ ನೀರನ್ನು ಒದಗಿಸಲು ಮನವಿ ಸಲ್ಲಿಸಿದ್ದು, ಈ ಬಡಾವಣೆಗಳಿಗೆ ಪ್ರೋರೇಟಾ ಪಾವತಿಸಿಕೊಂಡು ಮೀಟರ್ ಅಳವಡಿಸಿ ಕುಡಿಯುವ ನೀರನ್ನು ಒದಗಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.ಪಾಲಿಕೆ ಆಯುಕ್ತ ಆಸಾದ್ ಉರ್ ರೆಹಮಾನ್ ಷರೀಫ್, ಅಧೀಕ್ಷಕ ಎಂಜಿನಿಯರ್ ಸಿಂಧು, ಮುರುಳಿಧರ್, ಬೋಗಾದಿ ಪಪಂ ಮುಖ್ಯಾಧಿಕಾರಿ ಬಸವರಾಜು, ರಮ್ಮನಹಳ್ಳಿ ಮುಖ್ಯಾಧಿಕಾರಿ ರವಿಕೀರ್ತಿ ಮೊದಲಾದವರು ಇದ್ದರು,

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''