ಕನ್ನಡಪ್ರಭ ವಾರ್ತೆ ರಾಯಬಾಗಲೋಕಸಭೆ ಚುನಾವಣೆ ಫಲಿತಾಂಶ ನಂತರ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಎಲ್ಲ ಸಮಸ್ಯೆಗಳನ್ನು ಪರಿಹರಿಸುವೆ ಎಂದು ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.
ಮುಂಬರುವ ದಿನಗಳಲ್ಲಿ ರಾಯಬಾಗ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೂತಮಟ್ಟದಿಂದ ಬಲಿಷ್ಠವಾಗಿ ಕಟ್ಟಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಎಸ್.ಬಿ.ಘಾಟಗೆ, ಬಿಡಿಸಿಸಿ ನಿರ್ದೇಶಕ ಅಪ್ಪಾಸಾಬ ಕುಲಗುಡೆ, ಡಾ.ಎನ್.ಎ.ಮಗದುಮ್ಮ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೊಹಿತೆ, ಕಾಂಗ್ರೆಸ್ ರಾಯಬಾಗ ಬ್ಲಾಕ್ ಅಧ್ಯಕ್ಷ ಸಿದ್ದು ಬಂಡಗರ, ಅರ್ಜುನ ನಾಯಕವಾಡಿ, ಸದಾಶಿವ ದೇಶಿಂಗೆ, ಅಬ್ದುಲಸತ್ತಾರ ಮುಲ್ಲಾ, ಹಾಜಿ ಮುಲ್ಲಾ, ದಿಲೀಪ ಜಮಾದಾರ, ಬಾಹುಸಾಹೇಬ ಪಾಟೀಲ, ಡಿ.ಎಸ್.ನಾಯಿಕ, ಶಂಕರಗೌಡ ಪಾಟೀಲ, ಶಿವು ಪಾಟೀಲ, ನಾಮದೇವ ಪಾಟೀಲ, ಸಿದ್ದು ಮರ್ಯಾಯಿ, ಮಧುಸೂದನ ಬಿಳಗಿ ಸೇರಿ ನೂರಾರು ಕಾರ್ಯಕರ್ತರು ಇದ್ದರು.