ಸೋಮವಾರಪೇಟೆ: ಪ್ರತೀಕ್ಷ, ವಿಲೋಕನ ಕೃತಿ ಬಿಡುಗಡೆ

KannadaprabhaNewsNetwork | Published : Jun 20, 2024 1:05 AM

ಸಾರಾಂಶ

ಕೊಡಗು ಜಿಲ್ಲಾ ಮತ್ತು ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ , ಮಹಿಳಾ ಸಹಕಾರ ಸಮಾಜ, ಅಕ್ಕನ ಬಳಗ ಆಶ್ರಯದಲ್ಲಿ ಕವಯತ್ರಿ ಜಲಜಾಶೇಖರ್ ಅವರ ‘ಪ್ರತೀಕ್ಷ’ ಮತ್ತು ‘ವಿಲೋಕನ’ ಕೃತಿಗಳ ಬಿಡುಗಡೆ ಸಮಾರಂಭ ಮಂಗಳವಾರ ಮಹಿಳಾ ಸಹಕಾರ ಸಮಾಜದಲ್ಲಿ ನಡೆಯಿತು. ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ, ನಿವೃತ್ತ ಪ್ರಾಂಶುಪಾಲ ಪ್ರೊ.ಧರ್ಮಪ್ಪ ಕೃತಿ ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಕೊಡಗು ಜಿಲ್ಲಾ ಮತ್ತು ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ , ಮಹಿಳಾ ಸಹಕಾರ ಸಮಾಜ, ಅಕ್ಕನ ಬಳಗ ಆಶ್ರಯದಲ್ಲಿ ಕವಯತ್ರಿ ಜಲಜಾಶೇಖರ್ ಅವರ ‘ಪ್ರತೀಕ್ಷ’ ಮತ್ತು ‘ವಿಲೋಕನ’ ಕೃತಿಗಳ ಬಿಡುಗಡೆ ಸಮಾರಂಭ ಮಂಗಳವಾರ ಮಹಿಳಾ ಸಹಕಾರ ಸಮಾಜದಲ್ಲಿ ನಡೆಯಿತು.

ವಿಲೋಕನ ಕೃತಿಯನ್ನು ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಬಿಡುಗಡೆಗೊಳಿಸಿ ಮಾತನಾಡಿ, 22 ಲೇಖನಗಳನ್ನು ಹೊಂದಿರುವ ವಿಲೋಕನ ಒಂದು ಸುಂದರ ಪುಸ್ತಕವಾಗಿದ್ದು, ವಿವಿಧ ವಿಚಾರಗಳಿದ್ದು, ಸಂಗ್ರಹಕ್ಕೆ ಯೋಗ್ಯವಾಗಿದೆ ಎಂದು ಹೇಳಿದರು.

ನಿವೃತ್ತ ಪ್ರಾಂಶುಪಾಲ ಪ್ರೊ.ಧರ್ಮಪ್ಪ ಪ್ರತೀಕ್ಷ ಕವನ ಸಂಕಲನವನು ಬಿಡುಗಡೆಗೊಳಿ ಮಾತನಾಡಿ, ಅಣ್ಣ ಬಸವಣ್ಣ ಮತ್ತು ಅಕ್ಕಮಹಾದೇವಿ ಮೇಲಿನ ಕವನಗಳು ಗಮನ ಸೆಳೆಯುತ್ತವೆ. ಕವಿಗಳ ತಲೆಯಲ್ಲಿ ಯಾವಾಗಲು ಕಲ್ಪನಾಲೋಕದಲ್ಲಿ ಇದ್ದು, ಅವರ ತಲೆಯಲ್ಲಿ ಯೋಚನಾಲಹರಿ ಹರಿಯತ್ತಿರಬೇಕು. ಆಗಾದಾಗ ಮಾತ್ರ ಕನವ ಸಂಕಲನಗಳು ಮೂಡಿಬರಲು ಸಾಧ್ಯ ಎಂದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಜಿಲ್ಲೆಯಲ್ಲಿ ಸಾಹಿತ್ಯಾಸಕ್ತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದರು ಆಶಾದಾಯಕ ಬೆಳವಣಿಗೆಯಾಗಿದೆ. ಇಂದು 60ಕ್ಕೂ ಹೆಚ್ಚಿನ ಸಾಹಿತ್ಯಗಳು ಜಿಲ್ಲೆಯಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಮಹಿಳೆಯರಲ್ಲಿ ಸಾಹಿತ್ಯಾಭಿರುಚಿ ಹೆಚ್ಚಳದಿಂದ ಸಾಹಿತ್ಯ ಕ್ಷೇತ್ರ ಬೆಳವಣಿಗೆಯಾಗುತ್ತಿದೆ ಎಂದು ಹೇಳಿದರು.

ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಕೊಡ್ಲಿಪೇಟೆ ಕಿರಿಕೊಡ್ಲಿ ಮಾಠದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್‌ ಅಧ್ಯಕ್ಷತೆ ವಹಿಸಿದ್ದರು.

ತಾಲೂಕು ಘಟಕದ ಅಧ್ಯಕ್ಷ ಎಸ್.ಡಿ.ವಿಜೇತ್, ಹಿರಿಯ ಅಕ್ಕನ ಬಳಗ ಅಧ್ಯಕ್ಷೆ ಚಂದ್ರಕಲಾ ಗಿರೀಶ್, ಕಸಾಪ ಮಾಜಿ ತಾಲೂಕು ಅಧ್ಯಕ್ಷ ಜೆ.ಸಿ.ಶೇಖರ್ ಮತ್ತು ಕೊಡಗು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಶಿವಪ್ಪ ಇದ್ದರು.

Share this article