- ಮಾತೃ ಮಂಡಳಿ ಮಾತೆಯರಿಂದ ಸೌಂದರ್ಯ ಲಹರಿ ಸಾಮೂಹಿಕ ಪಠಣ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ಹರಿಹರ
ನಗರದ ನಡವಲ ಪೇಟೆಯ ನಾಮದೇವ ಕಲ್ಯಾಣ ಮಂಟಪದಲ್ಲಿ 21ನೇ ವರ್ಷದ ಸಾಮೂಹಿಕ ದಸರಾ ಮತ್ತು ಬನ್ನಿ ಮುಡಿಯುವ ಕಾರ್ಯಕ್ರಮ ನಿಮಿತ್ತ ಇತ್ತೀಚೆಗೆ ನಡೆದ ದುರ್ಗಾ ಪೂಜೆ, ಮಾತೃ ಮಂಡಳಿ ಮಾತೆಯರಿಂದ ಶ್ರೀಆದಿಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿ ಸಾಮೂಹಿಕ ಪಠಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸೌಂದರ್ಯ ಲಹರಿ ಕಾವ್ಯ, 100 ಶ್ಲೋಕಗಳನ್ನು ಹೊಂದಿದೆ. ಕಾವ್ಯ ಮತ್ತು ಅಧ್ಯಾತ್ಮ ದೃಷ್ಠಿಯಿಂದ ಅತ್ಯುತ್ತಮವಾಗಿದ್ದು, ಪುರುಷಾರ್ಥ ಮತ್ತು ಪಾರಮಾರ್ಥ ಎರಡರ ಬಗ್ಗೆ ಸಮನ್ವಯ ನೀಡುತ್ತದೆ. ಎಂದರು.
ತಾಯಿ ಜಗನ್ಮಾತೆ ಹಾಗೂ ಸರ್ವಶಕ್ತೆ. ಆಕೆಯ ಆರಾಧನೆ ಜಗತ್ತಿನ ಸರ್ವಶಕ್ತಿಯ ಆರಾಧನೆಯಾಗಿದೆ. ಸೌಂದರ್ಯ ಲಹರಿಯನ್ನು ನಿತ್ಯ ಪಾರಾಯಣ ಮಾಡುವುದರಿಂದ ಎಲ್ಲ ಭವಬಂಧನಗಳು ಕಳಚುತ್ತವೆ. ಲಿಂಗಭೇದವಿಲ್ಲದೇ, ಪುರುಷ ಹಾಗೂ ಮಹಿಳೆಯರು ಪಠಣ ಮಾಡಬಹುದು. ಗುರುಮುಖೇನ ಕಲಿತು, ಪಠಣ ಮಾಡುವುದು ಉತ್ತಮ. ಉಚ್ಛಾರ ದೋಷದಿಂದ ಮೂಲ ಅರ್ಥ ಅನರ್ಥವಾಗುವ ಜತೆಗೆ ವ್ಯತಿರಿಕ್ತ ಅಥವಾ ವಿರುದ್ಧ ಪರಿಣಾಮ ಬೀರುತ್ತದೆ ಎಂದರು.ನಗರದ ವಿವಿಧ ಸಮಾಜದ ಮಹಿಳಾ ಸಂಘಟನೆಗಳ ಮಹಿಳೆಯರು ಹಾಗೂ ಸಾಮೂಹಿಕ ದಸರಾ ಮಹೋತ್ಸವ ಸಮಿತಿಯ 100ಕ್ಕೂ ಹೆಚ್ಚು ಮಹಿಳೆಯರು ಸೌಂದರ್ಯ ಲಹರಿಯನ್ನು ಸಾಮೂಹಿಕ ಪಠಣದಲ್ಲಿ ಭಾಗವಹಿಸಿದ್ದರು. ಅನಂತರ ಪ್ರತಿಯೊಬ್ಬ ಮಹಿಳೆಯರಿಗೂ ಉಡಿ ತುಂಬ ಕಾರ್ಯಕ್ರಮ ನೆರವೇರಿತು.
- - -
- ನಾಗಮಣಿ ಶಾಸ್ತ್ರಿ, ನಿವೃತ್ತ ಶಿಕ್ಷಕಿ
ಹರಿಹರದಲ್ಲಿ ಸಾಮೂಹಿಕ ದಸರಾ ಮತ್ತು ಬನ್ನಿ ಮುಡಿಯುವ ಕಾರ್ಯಕ್ರಮ ನಿಮಿತ್ತ ಇತ್ತೀಚೆಗೆ ನಡೆದ ಶ್ರೀಆದಿಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿ ಸಾಮೂಹಿಕ ಪಠಣ ಕಾರ್ಯಕ್ರಮದಲ್ಲಿ ವಿವಿಧ ಮಾತೃ ಮಂಡಳಿ ಸದಸ್ಯರು ಭಾಗವಹಿಸಿದ್ದರು.