ರಾಜ್ಯಶಾಸ್ತ್ರ ಮೂಲ ಭಾರತ: ಡಾ.ಸುಧಾಕರ್ ಹೊಸಳ್ಳಿ

KannadaprabhaNewsNetwork |  
Published : Jul 22, 2025, 12:00 AM IST
1 | Kannada Prabha

ಸಾರಾಂಶ

ರಾಜ್ಯಶಾಸ್ತ್ರವು ಎಲ್ಲಾ ಶೈಕ್ಷಣಿಕ ವಿಷಯಗಳ ತಾಯಿ, ಕರುಳಬಳ್ಳಿ ಸಂಬಂಧ ಹೊಂದಿದೆ. ರಾಜ್ಯಶಾಸ್ತ್ರವೂ ಎಲ್ಲಾ ವಿಷಯಗಳೊಂದಿಗೆ ಸಂಪರ್ಕ ಹೊಂದಿದೆ. ಶೈಕ್ಷಣಿಕ ವಿಷಯಗಳಲ್ಲಿ ಪ್ರತಿ ಚಿಂತನೆಗಳು ಮುಖ್ಯವಾಗಿದೆ. ವಸತಿ ಮತ್ತು ಆಹಾರದಲ್ಲಿ ಎಲ್ಲರೂ ಸಮಾನರು ಎಂಬ ಅಂಶ ಯಜುರ್ ವೇದದಲ್ಲಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯಶಾಸ್ತ್ರದ ಮೂಲ ಗ್ರೀಸ್, ರೋಮ್ ಅಲ್ಲ. ರಾಜ್ಯಶಾಸ್ತ್ರ ಮೂಲ ಭಾರತ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಬೆಂಗಳೂರು ಪ್ರಾದೇಶಿದ ಕೇಂದ್ರದ ನಿರ್ದೇಶಕ ಡಾ.ಸುಧಾಕರ್ ಹೊಸಳ್ಳಿ ತಿಳಿಸಿದರು.

ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪಿಜಿ ಸೆಮಿನಾರ್ ಹಾಲ್ ನಲ್ಲಿ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಗ ಮತ್ತು ಐಕ್ಯೂಎಸಿ ಸಂಯುಕ್ತವಾಗಿ ಸೋಮವಾರ ಆಯೋಜಿಸಿದ್ದ ಇಂಡಕ್ಷನ್ ಕಾರ್ಯಕ್ರಮ ಮತ್ತು ದೇಶದ ಪರಮಾಧಿಕಾರದ ಸ್ಥಿರತೆಯಲ್ಲಿ ರಾಜ್ಯಶಾಸ್ತ್ರದ ಅಧ್ಯಯನ ಮತ್ತು ಸಂಶೋಧನೆಯ ಅಗತ್ಯತೆ ಕುರಿತು ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ರಾಜ್ಯಶಾಸ್ತ್ರವು ಎಲ್ಲಾ ಶೈಕ್ಷಣಿಕ ವಿಷಯಗಳ ತಾಯಿ, ಕರುಳಬಳ್ಳಿ ಸಂಬಂಧ ಹೊಂದಿದೆ. ರಾಜ್ಯಶಾಸ್ತ್ರವೂ ಎಲ್ಲಾ ವಿಷಯಗಳೊಂದಿಗೆ ಸಂಪರ್ಕ ಹೊಂದಿದೆ. ಶೈಕ್ಷಣಿಕ ವಿಷಯಗಳಲ್ಲಿ ಪ್ರತಿ ಚಿಂತನೆಗಳು ಮುಖ್ಯವಾಗಿದೆ. ವಸತಿ ಮತ್ತು ಆಹಾರದಲ್ಲಿ ಎಲ್ಲರೂ ಸಮಾನರು ಎಂಬ ಅಂಶ ಯಜುರ್ ವೇದದಲ್ಲಿದೆ. ಕಾನೂನು ಮುಂದೆ ಎಲ್ಲರೂ ಸಮಾನರು ಎಂದು ಡಾ. ಅಂಬೇಡ್ಕರ್ ರಚಿಸಿರುವ ಭಾರತ ಸಂವಿಧಾನದಲ್ಲಿದೆ ಎಂದರು.

ನಾಗರಿಕತೆ, ಆರ್ಥಿಕತೆ ಸೇರಿದಂತೆ ಹಲವುದರ ಮೂಲ ಭಾರತವಾಗಿದೆ. ಆದರೆ, ನಮ್ಮ ಶಿಕ್ಷಣ ವ್ಯವಸ್ಥೆ ಕುಬ್ಜ ಮನಸ್ಥಿತಿಯನ್ನು ಕಟ್ಟಿಕೊಟ್ಟಿದೆ. ರಾಜ್ಯಶಾಸ್ತ್ರದ ಪಿತಾಮಹ ಅರಿಸ್ಟಾಟಲ್ ಅಲ್ಲ. ಅವರು ಬರುವ ಮೊದಲೇ ರಾಜ್ಯಶಾಸ್ತ್ರವು ಅಸ್ತಿತ್ವದಲ್ಲಿತ್ತು. ಒಂದು ದೇಶದ ಭವಿಷ್ಯ ನಿರ್ಮಿಸುವಲ್ಲಿ ರಾಜ್ಯಶಾಸ್ತ್ರವು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಎಸ್. ರಾಜಶೇಖರಮೂರ್ತಿ, ಐಕ್ಯೂಎಸಿ ಸಂಯೋಜಕ ಡಾ.ಎನ್. ಪ್ರಕಾಶ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಿ.ಟಿ. ರಜನಿಕಾಂತ್, ಸ್ನಾತಕೋತ್ತರ ರಾಜ್ಯಶಾಸ್ತ್ರ ವಿಭಾಗದ ಸಂಯೋಜಕ ಡಾ.ಎಸ್. ಸುನಿಲ್ ಕುಮಾರ್, ಸಹ ಪ್ರಾಧ್ಯಾಪಕರಾದ ಡಾ.ಜಿ. ಬಾಲಾಜಿ, ಎ.ಎನ್. ರಾಜೇಶ್ವರಿ ಇದ್ದರು.

ನಾಳೆ ಶುಂಠಿ ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿಗಳು ಕುರಿತು ರೈತರಿಗೆ ತರಬೇತಿ

ಮೈಸೂರು: ಮೈಸೂರು ತಾಲೂಕಿನ ಇಲವಾಲದ ಹತ್ತಿರದ ಯಲಚಹಳ್ಳಿಯಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಜು.23ರ ಬೆಳಗ್ಗೆ 10.30ಕ್ಕೆ ಶುಂಠಿ ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿಗಳು ಕುರಿತಾದ ತರಬೇತಿ ಕಾರ್ಯಕ್ರಮವನ್ನು ರೈತರಿಗೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ನುರಿತ ವಿಜ್ಞಾನಿಗಳು ಹಾಗೂ ಅನುಭವಿ ಕೃಷಿಕರು, ಗುಣಮಟ್ಟದ ಉತ್ಪಾದನೆ, ಸಂಸ್ಕರಣೆ ಮತ್ತು ಮಾರಾಟದಲ್ಲಿ ಎದುರಿಸುವ ಹಲವಾರು ಸಮಸ್ಯೆ ಮತ್ತು ಅದರ ಪರಿಹಾರದ ಕುರಿತು ರೈತರಿಗೆ ಮಾಹಿತಿ ನೀಡಲಿದ್ದಾರೆ. ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಮತ್ತು ಇತರೆ ಜಿಲ್ಲೆಗಳಿಗೆ ಸೇರಿದ ಆಸಕ್ತ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಲು ಪೂರ್ವ ನೋಂದಣಿ ಮಾಡಿಸಬಹುದಾಗಿದೆ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ನೋಂದಣಿಗಾಗಿ ಮೊ. 81479 59226, 93419 97297 ಸಂಪರ್ಕಿಸಬಹುದು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ