ಯರಗನಾಳಿನಲ್ಲಿ ದೀಪಾವಳಿ ವಿಶೇಷ ರಥೋತ್ಸವ ಆಚರಣೆ

KannadaprabhaNewsNetwork |  
Published : Nov 16, 2026, 01:15 AM IST
ತಾಲೂಕಿನ ಯರಗನಾಳ್‌ ಗ್ರಾಮದ ಜೋಡಿ ಶ್ರೀ ವೀರಭದ್ರೇಶ್ವರಸ್ವಾಮಿಯ ಹೂವಿನ ರಥೋತ್ಸವವ ಭಕ್ತರ ಸಮ್ಮುಖದಲ್ಲಿ ನಡೆಯಿತು. | Kannada Prabha

ಸಾರಾಂಶ

ದೀಪಾವಳಿ ವಿಶೇಷ ಆಚರಣೆಗಳಾದ ತಾಲೂಕಿನ ಯರಗನಾಳು ಗ್ರಾಮದ ಜೋಡಿ ವೀರಭದ್ರ ಸ್ವಾಮಿಯ ಹೂವಿನ ರಥೋತ್ಸವ, ಬಿದರಹಳ್ಳಿ ಗ್ರಾಮದ ಸಿದ್ದೇಶ್ವರ ಸ್ವಾಮಿ ರಥೋತ್ಸವ ಭಕ್ತರ ಸಮ್ಮುಖ ವಿಜೃಂಭಣೆಯಿಂದ ನೆರವೇರಿತು. ಭಕ್ತರು ಸಮೃದ್ಧ ಮಳೆ-ಬೆಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ನ್ಯಾಮತಿ

ದೀಪಾವಳಿ ವಿಶೇಷ ಆಚರಣೆಗಳಾದ ತಾಲೂಕಿನ ಯರಗನಾಳು ಗ್ರಾಮದ ಜೋಡಿ ವೀರಭದ್ರ ಸ್ವಾಮಿಯ ಹೂವಿನ ರಥೋತ್ಸವ, ಬಿದರಹಳ್ಳಿ ಗ್ರಾಮದ ಸಿದ್ದೇಶ್ವರ ಸ್ವಾಮಿ ರಥೋತ್ಸವ ಭಕ್ತರ ಸಮ್ಮುಖ ವಿಜೃಂಭಣೆಯಿಂದ ನೆರವೇರಿತು. ಭಕ್ತರು ಸಮೃದ್ಧ ಮಳೆ-ಬೆಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದರು.

ಗ್ರಾಮದ ಜೋಡಿ ವೀರಭದ್ರಸ್ವಾಮಿ ಹೂವಿನ ರಥೋತ್ಸವ, ಬಿದರಹಳ್ಳಿ ಶ್ರೀ ಸಿದ್ದೇಶ್ವರ ರಥೋತ್ಸವ ಅಂಗವಾಗಿ, ಶುಕ್ರವಾರ ಬೆಳಗಿನ ಜಾವಾ ಅಲಂಕೃತ ರಥಕ್ಕೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಬಲಿ ಅನ್ನ, ಸಾಂಪ್ರದಾಯಿಕ ಪೂಜಾ ವಿಧಾನ ನೆರವೇರಿಸಿ, ನೇವೈದ್ಯ ಸಮರ್ಪಣೆ ಮಾಡಲಾಯಿತು. ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ಅಲಂಕೃತ ರಥದಲ್ಲಿ ರಥಾರೋಹಣ ಮಾಡುತ್ತಿದ್ದಂತೆ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಜೈ, ಶ್ರೀ ಸಿದ್ದೇಶ್ವರ ಸ್ವಾಮಿಗೆ ಜೈಎನ್ನುತ್ತಾ ಭಕ್ತರು ರಥಕ್ಕೆ ಹೂವು, ಉತ್ತತ್ತಿ, ಮಂಡಕ್ಕಿ ತೂರಿ ಹರಕೆ ತೀರಿಸಿ ರಥವನ್ನು ಎಳೆದರು.

ದೀಪಾವಳಿ ವಿಶೇಷವಾಗಿ ಯರಗನಾಳ್‌ ಗ್ರಾಮದ ಜೋಡಿ ಶ್ರೀ ವೀರದ್ರೇಶ್ವರ ಹೂವಿನ ರಥೋತ್ಸವ, ಬಿದರಹಳ್ಳಿಯ ಶ್ರೀ ಸಿದ್ದೇಶ್ವರ ರಥೋತ್ಸವ ಅಂಗವಾಗಿ ಶಿಲಾ ಮೂರ್ತಿಗಳಿಗೆ ಭಕ್ತರು ಹಾಲು, ಮೊಸರು, ತುಪ್ಪ, ಸಕ್ಕರೆ, ಎಳನೀರು, ಕಬ್ಬಿನ ಹಾಲು, ಹಣ್ಣು, ಕಾಯಿ, ಹೂವು, ಊದಬತ್ತಿ, ಕರ್ಪೂರ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಬಿಲ್ವಾರ್ಚನೆ, ಮಂಗಳಾರತಿ ಸೇರಿದಂತೆ ವಿವಿಧ ಧಾಮಿಕ ಪೂಜಾ ಕೈಂಕರ್ಯಗಳು ಜರುಗಿದವು. ಬಳಿಕ ಭಕ್ತರು ಒಣಕೊಬ್ಬರಿಯ ದೀಪಬೆಳಗುವ ಮೂಲಕ ದೇವರ ದರ್ಶನ ಪಡೆದು ಮಳೆಗಾಗಿ ಪ್ರಾರ್ಥಿಸಿದರು.

ಬಿದರಹಳ್ಳಿಯ ಶ್ರೀ ಸಿದ್ದೇಶ್ವರಸ್ವಾಮಿಯ ಉತ್ಸವ ಮೂರ್ತಿಯೊಂದಿಗೆ, ಶ್ರೀ ಆಂಜನೇಯ ಸ್ವಾಮಿ, ಕೊಡಚಗೊಂಡನಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ, ಕುಂಕುವ ಹಾಗೂ ಚಿನ್ನಿಕಟ್ಟೆ ಗ್ರಾಮದ ಶ್ರೀ ರಂಗನಾಥ ಸ್ವಾಮಿ ಉತ್ಸವ ಮೂರ್ತಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದವು.

- - -

-ಚಿತ್ರ: ನ್ಯಾಮತಿ ತಾಲೂಕಿನ ಯರಗನಾಳು ಗ್ರಾಮದ ಜೋಡಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಹೂವಿನ ರಥೋತ್ಸವವ ಭಕ್ತರ ಸಮ್ಮುಖ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಸಂಪರ್ಕ ಹೆಚ್ಚಳದಿಂದ ಅಭಿವೃದ್ಧಿಗೆ ಪೂರಕ: ಶಾಸಕ ದಿನಕರ ಶೆಟ್ಟಿ
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಕೆ.ರುದ್ರಪ್ಪ ಆಯ್ಕೆ