ಬೀರೂರು ಅಭಿವೃದ್ಧಿಗೆ ವಿಶೇಷ ಒತ್ತು: ಶಾಸಕ ಕೆ.ಎಸ್.ಆನಂದ್

KannadaprabhaNewsNetwork |  
Published : Apr 13, 2025, 02:07 AM IST
12 ಬೀರೂರು 02 ಬೀರೂರಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ಸಂಘಕ್ಕೆ ನೂತನ ಟ್ಯಾಕ್ಸಿ ಸ್ಟಾಂಡ್ನ್ನು ಶನಿವಾರ ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಸದಾಶಿವ, ಪುರಸಭೆ ಅಧ್ಯಕ್ಷೆ ವನಿತಾಮಧು, ಬಿ.ಕೆ.ಶಶಿಧರ್, ಬಿ.ಪಿ.ನಾಗರಾಜ್ ಇದ್ದರು. | Kannada Prabha

ಸಾರಾಂಶ

ಬೀರೂರು, ಯಾವ ರಾಜಕೀಯ ಹಿನ್ನಲೆ ಇಲ್ಲದ ಬಡರೈತ ಕುಟುಂಬದ ಮಗನನ್ನು ಚುನಾವಣೆಯಲ್ಲಿ ಅತಿಹೆಚ್ಚು ಮತನೀಡುವ ಮೂಲಕ ಗೆಲ್ಲಿಸಿದ ಬೀರೂರಿನ ಜನತೆ ಬಗ್ಗೆ ವಿಶೇಷ ಕಾಳಜಿ ಇದ್ದು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವ ಜೊತೆ ಬೀರೂರಿನ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ನೂತನ ಟ್ಯಾಕ್ಸಿ ಸ್ಟಾಂಡ್ ಉದ್ಘಾಟನೆ: ₹25ಲಕ್ಷದಲ್ಲಿ ವಿನೂತನ ಜರ್ಮನ್ ಟೆಂಟ್

ಕನ್ನಡಪ್ರಭ ವಾರ್ತೆ, ಬೀರೂರುಯಾವ ರಾಜಕೀಯ ಹಿನ್ನಲೆ ಇಲ್ಲದ ಬಡರೈತ ಕುಟುಂಬದ ಮಗನನ್ನು ಚುನಾವಣೆಯಲ್ಲಿ ಅತಿಹೆಚ್ಚು ಮತನೀಡುವ ಮೂಲಕ ಗೆಲ್ಲಿಸಿದ ಬೀರೂರಿನ ಜನತೆ ಬಗ್ಗೆ ವಿಶೇಷ ಕಾಳಜಿ ಇದ್ದು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವ ಜೊತೆ ಬೀರೂರಿನ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು. ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ಸಂಘಕ್ಕೆ ಶಾಸಕರ ವಿಶೇಷ ₹ 25ಲಕ್ಷ ವೆಚ್ಚದಲ್ಲಿ ಅನುದಾನದಲ್ಲಿ ಕೆ.ಎಆರ್.ಡಿ.ಎಲ್ ನಿರ್ಮಾಣ ಮಾಡಿದ್ದ ನೂತನ ಟ್ಯಾಕ್ಸಿ ಸ್ಟಾಂಡನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಟ್ಯಾಕ್ಸಿ ಚಾಲಕರು ಬಡವರ್ಗದದವರಾಗಿದ್ದರೂ ಕೂಡ ದುಡಿಯುವ ವರ್ಗಗಳಿಗೆ ನೆರವಾಗುವುದು ಶಾಸಕನಾದ ನನ್ನ ಮೊದಲ ಆದ್ಯತೆಯಾಗಿದೆ. ಕ್ಷೇತ್ರದಲ್ಲಿ ಕೋಟಿ ರೂ ಕಾಮಗಾರಿ ನೀಡಿದ್ದರು. ಸಿಗದ ಖುಷಿ ಇಂದು ಚಾಲಕರು ಮತ್ತು ಮಾಲೀಕರು ತೋರಿದ ಪ್ರೀತಿ ಮುಂದೆ ಅದು ಲೆಕ್ಕಕ್ಕಿಲ್ಲದಂತಾಯಿತು. ಸದ್ಯ ಬೀರೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣದ ತಂಗುದಾಣಕ್ಕೆ ₹12ಲಕ್ಷ ನೀಡಿದ್ದು ಕಾಮಗಾರಿ ನಡೆಯುತ್ತಿದೆ. ಬೀದಿ ಬದಿ ವ್ಯಾಪಾರಿಗಳಾದ ಹೂವು ಮಾರುವವರು, ಬೀದಿ ಬದಿ ಕೈಗಾಡಿ ಕ್ಯಾಂಟೀನ್ ಗಳಿಗೆ ಪುರಸಭೆ ಜಾಗ ನೀಡಿದರೆ ಅವರಿಗೂ ಹೂವಿನ ಸ್ಟಾಲ್ ಮತ್ತು ಪುಡ್ ಕೋರ್ಟನ್ನು ಶೀಘ್ರದಲ್ಲೇ ನಿರ್ಮಾಣ ಮಾಡಿಕೊಡಲಾಗುವುದು ಎಂದರು. ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ತರಳುಬಾಳು ಕಲ್ಯಾಣ ಮಂದಿರದಿಂದ ಪತ್ರೆ ಕಲ್ಯಾಣ ಮಂದಿರದ ಹೆದ್ದಾರಿ ರಸ್ತೆಗೆ ಡಿವೈಡರ್ ಹಾಕಿ ಡಬಲ್ ರಸ್ತೆ ನಿರ್ಮಾಣ ಮಾಡಲು ಈ ವರ್ಷ ಅನುದಾನವಿಲ್ಲ. ಕಾಮಗಾರಿ ನಡೆಸಲು ಅಂದಾಜು ವೆಚ್ಚ ತಯಾರಾಗಿದ್ದು ಒಟ್ಟು ₹ 27ಕೋಟಿ ಬೇಕಾಗುತ್ತದೆ ಎಂದರು. ಉಳಿದಂತೆ ಅಜ್ಜಂಪುರ ರಾಜ್ಯ ಹೆದ್ದಾರಿ ಮತ್ತು ಲಿಂಗದಹಳ್ಳಿ ರಸ್ತೆಗೆ ಎತ್ತರದ ವಿದ್ಯುತ್ ದೀಪಗಳನ್ನು ಅಳವಡಿಸಲು ಈಗಾಗಲೇ ₹ 4 ಕೋಟಿ ಮಂಜೂರಾಗಿದ್ದು ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು. ಪುರಸಭೆ ಅಧ್ಯಕ್ಷೆ ವನಿತಾ ಮಧು ಬಾವಿಮನೆ ಮಾತನಾಡಿ, ಚಾಲಕರು ಪ್ರಯಾಣಿಕರನ್ನು ರಕ್ಷಿಸುವ ರಕ್ಷಕರು. ದಿನ ಆರಂಭವಾಗುವುದೇ ಚಾಲಕರಿಂದ, ನಿಮ್ಮ ಆರೋಗ್ಯವನ್ನು ಸದಾ ಕಾಪಾಡಿಕೊಳ್ಳಿ. ಚಾಲನೆಯಲ್ಲಿ ಅತೀ ವೇಗ ಬೇಡ ತಾಳ್ಮೆ ಇದ್ದರೆ ಕುಟುಂಬದವರು ಸಹ ನೆಮ್ಮದಿಯಿಂದಿರುತ್ತಾರೆ. ನಮ್ಮ ರಾಜ್ಯ ಅಪರಾಧ ಮುಕ್ತವಾಗಲು ಚಾಲಕರು ಶ್ರಮಿಸಬೇಕೆಂದರು. ಪುರಸಭೆ ಸದಸ್ಯ ಬಿ.ಕೆ.ಶಶಿಧರ್ ಮಾತನಾಡಿ, ಇಲ್ಲಿನ ಚಾಲಕರ ಅನೇಕ ವರ್ಷಗಳ ಕನಸನ್ನು ಶಾಸಕ ಆನಂದ್ ನನಸು ಮಾಡಿರುವುದು ನಮ್ಮಗೆಲ್ಲ ಸಂತಸ ತಂದಿದ್ದು, ಶ್ರಮಿಕರ ಬಾಳಿನ ಬೆನ್ನೆಲುಬಾಗಿ ನಿಲ್ಲಲಿ ಎಂದರು. ಟ್ಯಾಕ್ಸಿ ಸ್ಟಾಂಡ್ ಗೌರವಾಧ್ಯಕ್ಷ ಬಿ.ಪಿ.ನಾಗರಾಜ್ ಮಾತನಾಡಿ, ಬೀರೂರು ಕ್ಷೇತ್ರ ಕಳೆದುಕೊಂಡ ನಂತರ ಅಭಿವೃದ್ಧಿ ಕೆಲಸಗಳು ನೆನೆಗುದಿಗೆ ಬಿದ್ದಿದ್ದವು, ಯಾವ ರಾಜಕಾರಣಿಗಳು ಪಟ್ಟಣದ ಸಾರ್ವಜನಿಕರಿಗೆ ಉಪಯುಕ್ತವಾದಂತಹ ಕಾಮಕಾರಿಗಳನ್ನು ತಮ್ಮ ಅವಧಿಯಲ್ಲಿ ಉಳಿದರೆ ಅವು ಶಾಶ್ವತವಾಗಿ ಉಳಿಯುತ್ತವೆ ಎನ್ನುವುದಕ್ಕೆ ಶಾಸಕ ಆನಂದ್ ಮಾಡಿರುವ ಈ ವಿನೂತನ ಜರ್ಮನ್ ಟೆಂಟ್ ಸಾಕ್ಷಿಯಾಗಿದೆ. ಚಾಲಕರ ಪರವಾಗಿ ಅಭಿನಂದನೆಗಳು ಎಂದರು. ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಆಸಂದಿ ಕಲ್ಲೇಶ್, ಪುರಸಭೆ ಮಾಜಿ ಅಧ್ಯಕ್ಷೆ ಸವಿತಾರಮೇಶ್, ಸಂಘದ ಅಧ್ಯಕ್ಷ ಸದಾಶಿವ, ಬಿ.ಟಿ.ಚಂದ್ರಶೇಖರ್ ಮಾತನಾಡಿದರು. ವೇದಿಕೆಯಲ್ಲಿ ಪುರಸಭೆ ಆಶ್ರಯ ಸಮಿತಿ ನೂತನ ಸದಸ್ಯರಾದ ಮುಬಾರಕ್, ಉಮೇಶ್, ಸೊಪ್ಪು ವಿನಾಯಕ್, ನಾಮಿನಿ ಸದಸ್ಯ ಮೋಹನ್, ಆಟೋ ಸಂಘದ ಅಧ್ಯಕ್ಷ ಶ್ರೀನಿವಾಸ್, ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಶಂಕರ್, ಸಿಪಿಐ ಶ್ರೀ ಕಾಂತ್, ಪಿಎಸೈ ಸಚಿತ್ ಕುಮಾರ್, ಟ್ಯಾಕ್ಸಿ ಸ್ಟಾಂಡ್ ನ ಉಪಾಧ್ಯಕ್ಷ ಶ್ರೀಧರ್, ಖಜಾಂಚಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಕೇಶವಮೂರ್ತಿ, ಸುನೀಲ್ ಮೋಹನ್, ಮಾಜಿ ಅಧ್ಯಕ್ಷರಾದ ಅಶೋಕ್, ಬೇಳೆರಾಜು, ಮಂಜುನಾಥ್, ಇಪ್ಪಿ ರಮೇಶ್, ಪೂಜಾ ಹೋಟೆಲ್ ರಾಮು ಸೇರಿದಂತೆ ಮತ್ತಿತರ ಸದಸ್ಯರು ಇದ್ದರು. 12 ಬೀರೂರು 02 ಬೀರೂರಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ಸಂಘಕ್ಕೆ ನೂತನ ಟ್ಯಾಕ್ಸಿ ಸ್ಟಾಂಡ್‌ ಶನಿವಾರ ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಸದಾಶಿವ, ಪುರಸಭೆ ಅಧ್ಯಕ್ಷೆ ವನಿತಾಮಧು, ಬಿ.ಕೆ.ಶಶಿಧರ್, ಬಿ.ಪಿ.ನಾಗರಾಜ್ ಇದ್ದರು.

PREV

Recommended Stories

ಕಡ್ಡಾಯವಾಗಿ ಆಂತರಿಕಾ ದೂರು ನಿವಾರಣಾ ಸಮಿತಿ ರಚಿಸಿ
ನಾಳೆಯಿಂದ ರಾಜ್ಯಮಟ್ಟದ ಮೂರು ನಾಟಕಗಳ ಪ್ರದರ್ಶನ