ತರೀಕೆರೆ ಕ್ಷೇತ್ರಕ್ಕೆ ವಿಶೇಷ ಅನುದಾನ : ಶಾಸಕ ಶ್ರೀನಿವಾಸ್

KannadaprabhaNewsNetwork | Published : Aug 20, 2024 1:04 AM

ಸಾರಾಂಶ

ತರೀಕೆರೆ, ತರೀಕೆರೆ ಕ್ಷೇತ್ರಕ್ಕೆ ವಿಶೇಷ ಅನುದಾನಗಳನ್ನು ತರಲಾಗಿದ್ದು ಅಗತ್ಯ ಅಭಿವೃದ್ಧಿ ಕಾರ್ಯಕೈಗೊಳ್ಳುವುದಾಗಿ ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ದೋರನಾಳು ಗ್ರಾಮದಲ್ಲಿ ಭಾರತ್ ನಿರ್ಮಾಣ್ ಸೇವಾ ಕೇಂದ್ರ । ಘನತ್ಯಾಜ್ಯ ವಿಲೇವಾರಿ ಘಟಕ ವಿವಿಧ ಕಟ್ಟಡಗಳ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ತರೀಕೆರೆ

ತರೀಕೆರೆ ಕ್ಷೇತ್ರಕ್ಕೆ ವಿಶೇಷ ಅನುದಾನಗಳನ್ನು ತರಲಾಗಿದ್ದು ಅಗತ್ಯ ಅಭಿವೃದ್ಧಿ ಕಾರ್ಯಕೈಗೊಳ್ಳುವುದಾಗಿ ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಸೋಮವಾರ ದೋರನಾಳು ಗ್ರಾಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪಂಚಾಯತ್ ರಾಜ್ ಉಪ ವಿಭಾಗ, ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸಮೀಪದ ದೋರನಾಳು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಭಾರತ್ ನಿರ್ಮಾಣ್ ಸೇವಾ ಕೇಂದ್ರ, ಘನತ್ಯಾಜ್ಯ ವಿಲೇವಾರಿ ಘಟಕ, ದಾಸೋಹ ಭವನ, ಅಂಗನವಾಡಿ ಕೇಂದ್ರ, ಸರ್ಕಾರಿ ಪ್ರೌಢಶಾಲೆ ವಿವೇಕ ಕೊಠಡಿ ಉದ್ಘಾಟಿಸಿ ಮಾತನಾಡಿದರು.ಎಲ್ಲ ಕೆರೆಗಳಿಗೆ ನೀರು ತುಂಬಿಸಲಾಗುವುದು, ಮುಂದಿನ ಬೇಸಿಗೆ ಸಮಯದಲ್ಲಿ ಕ್ಷೇತ್ರದಲ್ಲಿ ಖಂಡಿತ ನೀರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ, ಎಷ್ಟು ನೀರು ಅಗತ್ಯ ಇದೆಯೋ ಅಷ್ಟು ನೀರನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಮತ್ತಿತರ ಕಟ್ಟಡಗಳು ಬಹಳ ಚೆನ್ನಾಗಿ ನಿರ್ಮಾಣವಾಗಿದೆ. ಶಾಲೆಗೆ ಬೋರ್ ವೆಲ್ ಮತ್ತು ಇತರ ಸಾಮಗ್ರಿಗಳನ್ನು ಒದಗಿಸಿ, ಶೀಘ್ರದಲ್ಲೇ ರಂಗಮಂದಿರ ನಿರ್ಮಿಸಲಾಗುವುದು. ಶಿವಾಜಿನಗರದ ನಗರದ ರಸ್ತೆ ಅಭಿವೃದ್ಧಿ ಪಡಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಅವರು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಸೂಕ್ತ ರಸ್ತೆ ಸಂಪರ್ಕ ಕಲ್ಪಿಸಿ, ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಹೇಳಿದರು.

ದಾನಿ ದೋರನಾಳು ಪರಮೇಶ್ ಮಾತನಾಡಿ ದೋರನಾಳು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಭಾರತ್ ನಿರ್ಮಾಣ್ ಸೇವಾ ಕೇಂದ್ರ, ಘನ ತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆ ಸಂತೋಷ ತಂದಿದೆ, ಸರ್ಕಾರಿ ಕಚೇರಿ ಊರಿಗೆ ಘನತೆ ತಂದುಕೊಡುತ್ತದೆ. ಎಲ್ಲ ಕಟ್ಟಡಗಳು ಬಹು ಸುಂದರವಾಗಿ ನಿರ್ಮಾಣವಾಗಿದೆ. ಸಭಾ ಭವನ ನಿರ್ಮಾಣವೂ ಕೂಡ ಸಂತೋಷ ತಂದಿದೆ ಎಂದರು.

ತಾಪಂ ಮಾಜಿ ಸದಸ್ಯ ಅಸ್ಲಾಂಖಾನ್ ಮಾತನಾಡಿ ದೋರನಾಳು ಗ್ರಾಮದಲ್ಲಿ ಅನೇಕ ಕಟ್ಟಡಗಳು ಉದ್ಘಾಟನೆಯಿಂದ ಗ್ರಾಮದಲ್ಲಿ ಹಬ್ಬದವಾತಾವರಣ ಇದೆ. ಶಾಸಕ ಜಿ.ಎಚ್.ಶ್ರೀನಿವಾಸ್ ಅವರು ಗ್ರಾಮಕ್ಕೆ ಬೋರ್ ವೆಲ್, ಗಂಗಾಕಲ್ಯಾಣ ಇತ್ಯಾದಿ ಅನೇಕ ಯೋಜನೆ ದೊರಕಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಗ್ರಾಪಂ ಸದಸ್ಯೆ ಚಂದ್ರಮ್ಮ, ತಾಪ.ಕಾರ್ಯನಿರ್ವಹಣಾಧಿಕಾರಿ ಡಾ.ದೇವೇಂದ್ರಪ್ಪ, ಸಿಡಿಪಿಒ ಚರಣ್ ರಾಜ್, ಭಾವಿಕೆರೆ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಗಣೇಶ್, ಗ್ರಾಪಂ ಅಭಿವೃದ್ದಿ ಅಧಿಕಾರಿ ಸಿ.ಟಿ.ಯೋಗೀಶ್, ದೋರನಾಳು ಗ್ರಾಪಂ ಅದ್ಯಕ್ಷ ಮಲ್ಲಪ್ಪ ಡಿ.ಆರ್. ಉಪಾಧ್ಯಕ್ಷ ನಾಗರಾಜು, ದೋರನಾಳು ಗ್ರಾಪಂ ಮಾಜಿ ಅಧ್ಯಕ್ಷೆ ರಾಜೇಶ್ವರಿ ರಾಜಶೇಖರ್, ಶಾಲೆ ಎಸ್ ಡಿಎಂಸಿ ಅಧ್ಯಕ್ಷ ರೋಹಿತ್ ಸದಸ್ಯರು, ಮತ್ತಿತರರು ಭಾಗವಹಿಸಿದ್ದರು. 19ಕೆಟಿಆರ್.ಕೆ.10ಃ

ತರೀಕೆರೆ ಸಮೀಪದ ದೋರನಾಳು ಗ್ರಾಮದಲ್ಲಿ ಭಾರತ್ ನಿರ್ಮಾಣ್ ಸೇವಾ ಕೇಂದ್ರ, ಘವ ತ್ಯಾಜ್ಯ ವಿಲೇವಾರಿ ಘಟಕ, ದಾಸೋಹ ಭವನ, ವನ್ನು ಶಾಸಕ ಜಿ.ಹೆಚ್. ಶ್ರೀನಿವಾಸ್ ಉದ್ಘಾಟಿಸಿದರು. ದೋರನಾಳು ಗ್ರಾಪಂ ಅಧ್ಯಕ್ಷ ಮಲ್ಲಪ್ಪ ಡಿ.ಆರ್. ದಾನಿ ದೋರನಾಳು ಪರಮೇಶ್, ತಾಪಂ ಮಾಜಿ ಸದಸ್ಯ ಅಸ್ಲಾಂಖಾನ್ ಮತ್ತಿತರರು ಇದ್ದರು.

Share this article