ತರೀಕೆರೆ: ಯರೆಹಳ್ಳಿ ಗ್ರಾಮ ದೇವತೆ ಅಪ್ಪಣೆ ಮೇರೆಗೆ ತಾಲೂಕಿನ ಋಷಿಪುರದ ಋಷ್ಯಶೃಂಗೇಶ್ವರ ಬೆಟ್ಟದಲ್ಲಿ ಹಾಗೂ ಹಣ್ಣೆ ಬೆಟ್ಟದ ಋಷ್ಯಶೃಂಗೇಶ್ವರ, ರಂಗನಾಥ ಸ್ವಾಮಿ, ಗಂಗಮ್ಮನ ಕೊಳ್ಳದಲ್ಲಿ ಮಳೆಗಾಗಿ ಪ್ರಾರ್ಥಿಸಿ ಐದು ಹಳ್ಳಿ ಗ್ರಾಮಸ್ಥರು ಏಕಕಾಲದಲ್ಲಿ ಎರಡು ಕಡೆ ಪೊಜೆ ಸಲ್ಲಿಸಿದರು.ಗ್ರಾಮಸ್ಥರು ಗ್ರಾಮ ದೇವಾಲಯಗಳಲ್ಲಿ ಗಂಗಾ ಪೂಜೆ ಸಲ್ಲಿಸಿ, ಪೂಜಿಸಿದ ಗಂಗೆಯನ್ನು ತೆಗೆದುಕೊಂಡು ಹೋಗಿ ಬೆಟ್ಟದಲ್ಲಿರುವ ಋಷ್ಯಶೃಂಗೇಶ್ವರ ದೇವರಿಗೆ ಅಭಿಷೇಕ ಮಾಡಲಾಯಿತು. ದೇವರಿಗೆ,ಪಂಚಾಮೃತ, ರುದ್ರಾಭಿಷೇಕ , ಅಷ್ಟೋತ್ತರ ಪೊಜೆ ಸಲ್ಲಿಸಿದರು, ನಂತರ ದಿವಟಿಗೆ ಸೇವೆ ಸಲ್ಲಿಸಿದರು.
13ಕೆಟಿಆರ್.ಕೆ.2ಃ ತರೀಕೆರೆ ಸಮೀಪದ ಋಷಿಪುರದ ಋಷ್ಯಶೃಂಗೇಶ್ವರ ಬೆಟ್ಟದಲ್ಲಿ ಹಾಗೂ ಹಣ್ಣೆ ಬೆಟ್ಟದ ಋಷ್ಯ ಶೃಂಗೇಶ್ವರ,ರಂಗನಾಥ ಸ್ವಾಮಿ, ಗಂಗಮ್ಮನ ಕೊಳ್ಳದಲ್ಲಿ ಮಳೆಗಾಗಿ ಪ್ರಾರ್ಥಿಸಿ ಐದು ಹಳ್ಳಿ ಗ್ರಾಮಸ್ಥರು ಏಕಕಾಲದಲ್ಲಿ ಎರಡು ಕಡೆ ಪೂಜೆ ಸಲ್ಲಿಸಿದರು.