ಸಿ.ಟಿ.ರವಿ ಜನ್ಮದಿನದ ಅಂಗವಾಗಿ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ

KannadaprabhaNewsNetwork |  
Published : Jul 19, 2026, 02:15 AM IST
ಷಷಷ | Kannada Prabha

ಸಾರಾಂಶ

ಹೋಲಿ ಫ್ಯಾಮಿಲಿ ಚರ್ಚ್‌ನಲ್ಲಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಮುಖಂಡರು ಸಿ.ಟಿ.ರವಿ ಅವರ ದೀರ್ಘಾಯುಷ್ಯ ಹಾಗೂ ಭವಿಷ್ಯದಲ್ಲಿ ಉತ್ತಮ ಅಧಿಕಾರ ಲಭಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಅವರ 59ನೇ ಜನ್ಮದಿನದ ಪ್ರಯುಕ್ತ ಶನಿವಾರ ನಗರದ ವಿಜಯಪುರ ಸಮೀಪದ ಹೋಲಿ ಫ್ಯಾಮಿಲಿ ಚರ್ಚ್‌ನಲ್ಲಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಮುಖಂಡರು ಸಿ.ಟಿ.ರವಿ ಅವರ ದೀರ್ಘಾಯುಷ್ಯ ಹಾಗೂ ಭವಿಷ್ಯದಲ್ಲಿ ಉತ್ತಮ ಅಧಿಕಾರ ಲಭಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಕನ್ನಡಪ್ರಭ ಪತ್ರಿಕೆ ಹಸ್ತಾಂತರಿಸಿದ್ದು ವಿಶೇಷವಾಗಿತ್ತು. ಈ ವೇಳೆ ಮೋರ್ಚಾದ ಜಿಲ್ಲಾಧ್ಯಕ್ಷ ಕಬೀರ್, ಪ್ರಧಾನ ಕಾರ್ಯದರ್ಶಿಗಳಾದ ರಾಬರ್ಟ್, ನಜೀರ್, ಮುಖಂಡರಾದ ಬೆನಡಿಕ್ಟ್ ಜೇಮ್ಸ್, ಜೋಸೆಫ್, ಡ್ಯಾನಿ, ಗೀತಾ, ಆನಂದ್ ಉಪಸ್ಥಿತರಿದ್ದರು.

-- ಶಾಲಾ ಮಕ್ಕಳಿಗೆ ನೋಟ್‌ಪುಸ್ತಕ ವಿತರಿಸಿ ಜನ್ಮದಿನ ಆಚರಣೆಚಿಕ್ಕಮಗಳೂರು: ಸಖರಾಯಪಟ್ಟಣ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ೫೯ನೇ ಜನ್ಮದಿನದ ಪ್ರಯುಕ್ತ ಮಹಾಶಕ್ತಿ ಕೇಂದ್ರದಿಂದ ಶಾಲಾ ಮಕ್ಕಳಿಗೆ ಉಚಿತ ನೋಟ್‌ಪುಸ್ತಕ, ಲೇಖನಿ ಸಾಮಾಗ್ರಿ ಹಾಗೂ ಸಿಹಿಹಂಚುವ ಮೂಲಕ ಜನ್ಮದಿನವನ್ನು ಮುಖಂಡರು ಅರ್ಥಪೂರ್ಣವಾಗಿ ಆಚರಿಸಿದರು.ಈ ಸಂದರ್ಭದಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಗೌಡ, ಬಿಜೆಪಿ ಜಿಲ್ಲಾ ಎಸ್.ಸಿ.ಮೋರ್ಚಾ ಉ ಪಾಧ್ಯಕ್ಷ ಎಸ್.ಟಿ. ಕೋಲ್ಲಾಬೋವಿ, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ನಂದೀಶ್ ಮದಕರಿ, ಗ್ರಾ.ಪಂ. ಮಾಜಿ ಅಧ್ಯ ಕ್ಷ ರಮೇಶ್, ಮುಖಂಡರುಗಳಾದ ಉಮೇಶ್, ಜಗನ್ನಾಥ್, ಯೋಗೇಂದ್ರಗೌಡ, ಲೋಕೇಶ್, ಪಾದಮನೆ ದಿನೇಶ್, ಉಮೇಶ್, ವಿಜಯ್, ಚಂದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗೆ ಬಿಲ್ಡರ್‌ಗಳು ಎಲ್ಲಾ ದಾಖಲೆ ನೀಡಬೇಕು
ಸಂಪುಟಕ್ಕೆ ಈಗ ಕೋಟಾ ಸಂಕಟ ! - ರಾಜ್ಯದಿಂದ 3, ವರಿಷ್ಠರಿಂದ 2 ಪಟ್ಟಿ