ದೊಡ್ಡಬಳ್ಳಾಪುರ: ಚಂದ್ರಗ್ರಹಣ ಮೋಕ್ಷವಾದ ಬಳಿಕ ತಾಲೂಕಿನ ಪ್ರಸಿದ್ದ ಯಾತ್ರಾಸ್ಥಳ ಹಾಗೂ ರಾಜ್ಯದ ಪ್ರಮುಖ ನಾಗಾರಾಧನಾ ಕ್ಷೇತ್ರಗಳಲ್ಲಿ ಒಂದಾದ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಸೋಮವಾರ ಬೆಳಗ್ಗೆ ವಿಶೇಷ ಪೂಜೆ ಬಳಿಕ ಭಕ್ತಾದಿಗಳಿಗೆ ದರ್ಶನದ ಅವಕಾಶ ಮಾಡಿಕೊಡಲಾಯಿತು.
. ದೇಶದಲ್ಲಿ ಚಂದ್ರಗ್ರಹಣ ಗೋಚರ ಹಿನ್ನಲೆ ದೇಗುಲಗಳಲ್ಲಿ ಗ್ರಹಣ ವೇಳೆ ಪೂಜೆ ಹಾಗೂ ದರ್ಶನ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು. ಗ್ರಹಣ ಮೋಕ್ಷವಾದ ಬಳಿಕ, ಸೋಮವಾರ ನಸುಕಿನ ಜಾವ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯಗಳು ನಡೆದವು. ನಂತರ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆಗಳು ನಡೆದವು.
ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ:ಗ್ರಹಣ ಮೋಕ್ಷಗೊಂಡ ಹಿನ್ನಲೆ ದೊಡ್ಡಬಳ್ಳಾಪುರ ತಾಲೂಕಿನ ಪ್ರಮುಖ ದೇಗುಲಗಳಾದ ತೇರಿನಬೀದಿ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯ, ತೂಬಗೆರೆಯ ವೆಂಕಟರಮಣ ದೇವಾಲಯ, ಕಾಡನೂರು ಚನ್ನಕೇಶವ ದೇವಾಲಯ, ಚಿಕ್ಕಮಧುರೆ ಶನೇಶ್ವರ ದೇವಾಲಯ, ಹುಲುಕುಡಿ ವೀರಭದ್ರೇಶ್ವರ ದೇವಾಲಯ, ದೊಡ್ಡಬಳ್ಳಾಪುರ ನಗರದ ನೆಲದಾಂಜನೇಯಸ್ವಾಮಿ ದೇವಾಲಯ, ಮುತ್ಯಾಲಮ್ಮ ದೇವಾಲಯ, ನಗರೇಶ್ವರ ದೇವಾಲಯ, ಕಾಳಿಕ ಕಮಟೇಶ್ವರ ದೇಗುಲ, ಅರುಣಾಚಲೇಶ್ವರ ದೇವಾಲಯ ಸೇರಿದಂತೆ ವಿವಿಧ ದೇಗುಲಗಳಲ್ಲಿ ಶುದ್ದೀಕರಣ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳು ಸೋಮವಾರ ನಡೆದವು.
8ಕೆಡಿಬಿಪಿ6-ಚಂದ್ರಗ್ರಹಣ ಮೋಕ್ಷವಾದ ಹಿನ್ನಲೆ ಸೋಮವಾರ ಬೆಳಗ್ಗೆ ಘಾಟಿ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು.