ಕೋಟೆ ಮಾರಮ್ಮದೇವಿಗೆ ವಿಶೇಷ ಪೂಜೆ ಹೂವಿನ ಪಲ್ಲಕ್ಕಿ

KannadaprabhaNewsNetwork | Published : Oct 13, 2024 1:09 AM

ಸಾರಾಂಶ

ಮಾಗಡಿ: ಪಟ್ಟಣದ ಶಕ್ತಿ ದೇವತೆ ಕೋಟೆ ಮಾರಮ್ಮ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅದ್ಧೂರಿಯಾಗಿ ನೆರವೇರಿದ್ದು, ಕೊನೆಯ ದಿನ ವಿಜಯದಶಮಿಯಂದು ದೇವಿಗೆ ಚಾಮುಂಡೇಶ್ವರಿ ಅಲಂಕಾರ ಮಾಡಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಉತ್ಸವ ಮೂರ್ತಿಯನ್ನು ಹೂವಿನ ಪಲ್ಲಕ್ಕಿಯಲ್ಲಿ ಅದ್ಧೂರಿ ಮೆರವಣಿಗೆ ಮಾಡಲಾಯಿತು.

ಮಾಗಡಿ: ಪಟ್ಟಣದ ಶಕ್ತಿ ದೇವತೆ ಕೋಟೆ ಮಾರಮ್ಮ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅದ್ಧೂರಿಯಾಗಿ ನೆರವೇರಿದ್ದು, ಕೊನೆಯ ದಿನ ವಿಜಯದಶಮಿಯಂದು ದೇವಿಗೆ ಚಾಮುಂಡೇಶ್ವರಿ ಅಲಂಕಾರ ಮಾಡಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಉತ್ಸವ ಮೂರ್ತಿಯನ್ನು ಹೂವಿನ ಪಲ್ಲಕ್ಕಿಯಲ್ಲಿ ಅದ್ಧೂರಿ ಮೆರವಣಿಗೆ ಮಾಡಲಾಯಿತು.

ಶ್ರೀ ಕೋಟೆ ಮಾರಮ್ಮ ದೇವಿ ನವರಾತ್ರಿ ಉತ್ಸವ ಸೇವಾ ಟ್ರಸ್ಟ್ ನಿಂದ 9 ದಿನಗಳ ಕಾಲ ದೇವಿಗೆ ವಿಶೇಷ ಅಲಂಕಾರ ಏರ್ಪಡಿಸಿ ಸಂಜೆ ರಸಮಂಜರಿ ಕಾರ್ಯಕ್ರಮ ಹಾಗೂ ಪ್ರಸಾದ ವಿನಿಯೋಗ ನೆರವೇರಿತು. ಶನಿವಾರ ವಿಜಯದಶಮಿ ಪ್ರಯುಕ್ತ ದೇವಿಗೆ ವಿಶೇಷ ಪೂಜೆ ಹಾಗೂ ಚಾಮುಂಡೇಶ್ವರಿ ಅಲಂಕಾರ ಮಾಡಲಾಗಿತ್ತು. ಶಾಸಕ ಬಾಲಕೃಷ್ಣ ಸೇರಿದಂತೆ ಅನೇಕ ಗಣ್ಯರು, ಕೋಟೆ ಮಾರಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಮಧ್ಯಾಹ್ನ ಉತ್ಸವ ಮೂರ್ತಿಯನ್ನು ವಿಶೇಷ ಹೂವಿನ ಪಲ್ಲಕ್ಕಿಯೊಂದಿಗೆ ಕೋಟೆ ಮಾರಮ್ಮ ದೇವಸ್ಥಾನದಿಂದ ಹಳೆ ಬಸ್ ನಿಲ್ದಾಣ ಮೂಲಕ ಕೆಂಪೇಗೌಡ ವೃತ್ತ, ಡೂಂಲೈಟ್ ವೃತ್ತದಿಂದ ಡಾ.ರಾಜಕುಮಾರ್ ರಸ್ತೆ ಮೂಲಕ ಕಲ್ಯಾಗೇಟ್ ನಿಂದ ಕೋಟೆ ಮಾರಮ್ಮ ದೇವಸ್ಥಾನದವರೆಗೂ ಮೆರವಣಿಗೆ ಮಾಡಲಾಯಿತು. ಕೇರಳ ಚಂಡೆ ಮದ್ದಳೆ, ನವದುರ್ಗ ವೇಷ, ಮೈಸೂರು ನಗಾರಿ, ಹುಲಿವೇಷ, ಡೊಳ್ಳು ಕುಣಿತ, ವೀರಗಾಸೆ, ಗಾರುಡಿ ಗೊಂಬೆ ಕುಣಿತ ಹಾಗೂ ವಿವಿಧ ಗೊಂಬೆಗಳ ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು.

ಟ್ರಸ್ಟ್ ಗೌರವಾಧ್ಯಕ್ಷ ಎನ್.ನಾಗರಾಜು ಅಧ್ಯಕ್ಷ ಎಂ.ಆರ್. ಗುರುಸ್ವಾಮಿ, ಕಾರ್ಯದರ್ಶಿ ಪ್ರವೀಣ್, ಉಪಾಧ್ಯಕ್ಷ ಎಂ.ಎಲ್. ನರಸಿಂಹಮೂರ್ತಿ, ಎಂ.ಆರ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಕೆ. ಕಿರಣ್ ಕುಮಾರ್, ಸಹಕಾರ್ಯದರ್ಶಿ ಜಿ. ಮಂಜುನಾಥ್, ಖಜಾಂಚಿ ಆರ್. ಅನಿಲ್ ಕುಮಾರ್, ಸಂಘಟನಾ ಕಾರ್ಯದರ್ಶಿ ರಮೇಶ್, ಸಹ ಸಂಘಟನಾ ಕಾರ್ಯದರ್ಶಿ ರಾಜಣ್ಣ, ಟ್ರಸ್ಟಿಗಳಾದ ತೇಜಸ್ ಕುಮಾರ್, ಆನಂದ್ ಕುಮಾರ್, ಹನುಮಂತರಾಜು, ವಿ.ಎಸ್.ಲೋಕೇಶ್ ಇತರರು ಭಾಗವಹಿಸಿದ್ದರು.

Share this article