ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಹಾಯ ಕೇಂದ್ರ ಉದ್ಘಾಟನೆ

KannadaprabhaNewsNetwork |  
Published : Jul 16, 2026, 01:15 AM IST
9 | Kannada Prabha

ಸಾರಾಂಶ

2002ರ ಮತಪಟ್ಟಿಯಲ್ಲಿ ಹೆಸರು ಹುಡುಕಲು ಅನೇಕರಿಗೆ ಕಷ್ಟವಾಗುತ್ತಿರುವುದನ್ನು ಮನಗಂಡು ಬಿಜೆಪಿ ವತಿಯಿಂದ ಕ್ಷೇತ್ರದ ವಿವಿದೆಡೆ ಸಹಾಯ ಕೇಂದ್ರ ತೆರೆಯಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರುಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲ ವತಿಯಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಹಾಯ ಕೇಂದ್ರವನ್ನು ಶಾರದಾದೇವಿನಗರದಲ್ಲಿ ಮುಖಂಡ ಕವೀಶ್ ಗೌಡ ಉದ್ಘಾಟಿಸಿದರು.ನಂತರ ಮತದಾರರಿಗೆ ಬಿಎಲ್ಓಗಳ ಸಂಪರ್ಕ, 2002ರ ಮತ ಪಟ್ಟಿಯಲ್ಲಿ ಹೆಸರು ಹುಡುಕಲು, ಎನ್ಯೂಮರೇಷನ್ ಅರ್ಜಿ ಭರಿಸಲು ಸಹಾಯ ಮಾಡಲಾಯಿತು.ಸಹಾಯ ಕೇಂದ್ರ ಉದ್ಘಾಟಿಸಿ ಮಾತನಾಡಿದ ಕವೀಶ್ ಗೌಡ, 2002ರ ಮತಪಟ್ಟಿಯಲ್ಲಿ ಹೆಸರು ಹುಡುಕಲು ಅನೇಕರಿಗೆ ಕಷ್ಟವಾಗುತ್ತಿರುವುದನ್ನು ಮನಗಂಡು ಬಿಜೆಪಿ ವತಿಯಿಂದ ಕ್ಷೇತ್ರದ ವಿವಿದೆಡೆ ಸಹಾಯ ಕೇಂದ್ರ ತೆರೆಯಲಾಗುತ್ತಿದೆ. ಅದನ್ನು ಕ್ಷೇತ್ರದ ಮತದಾರರು ಸದುಪಯೋಗಿಸಿಕೊಳ್ಳಲು ಕರೆ ನೀಡಿದರು.ಚಾಮುಂಡೇಶ್ವರಿ ನಗರ ಮಂಡಲದ ಅಧ್ಯಕ್ಷ ರಾಕೇಶ್ ಭಟ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರ ಉಪಾಧ್ಯಕ್ಷ ಅರುಣ್ ಕುಮಾರ್ ಗೌಡ, ವಕ್ತಾರ ಎಂ.ಎ ಮೋಹನ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಆರ್. ಸೋಮಶೇಖರ್, ಈರೇಗೌಡ, ನಗರ ಪಾಲಿಕೆ ಮಾಜಿ ಸದಸ್ಯರಾದ ಜೆ.ಎಸ್. ಜಗದೀಶ್, ಎಂ.ಕೆ. ಶಂಕರ್, ಹೇಮಾ ಗಂಗಪ್ಪ, ಕಿರಣ್ ಮಾದೇಗೌಡ, ಚಾಮುಂಡೇಶ್ವರಿ ಗ್ರಾಮಾಂತರ ಮಂಡಲ ಅಧ್ಯಕ್ಷ ಪೈ.ಟಿ. ರವಿ, ಪದಾಧಿಕಾರಿಗಳಾದ ದಾರಿಪುರ ಸುನಿಲ್, ಎನ್. ಪ್ರತಾಪ್, ಶಿವು ಪಟೇಲ್, ಎಚ್.ಎಸ್. ಹಿರಿಯಣ್ಣ, ಬಿ.ಸಿ. ಶಶಿಕಾಂತ್, ಲಕ್ಷ್ಮಿ ಜಯಶಂಕರ್, ವಿಜಯ ಮಂಜುನಾಥ್, ನಾಗರಾಜ್ ಜನ್ನು, ಎ.ಎಂ.ಗಿರೀಶ್, ಪಿ. ಸೋಮಣ್ಣ, ರಾಚಪ್ಪಾಜಿ, ಮಧು ಸೋಮಶೇಖರ್, ಜೆ. ರಂಗೇಶ್, ಸಿ. ರಾಘವೇಂದ್ರ, ಎನ್. ಶುಭಶ್ರೀ, ಪುಟ್ಟಮ್ಮಣ್ಣಿ, ಪ್ರೇಮಾವತಿ, ರಾಹುಲ್, ಸಾಗರ್ ಸಿಂಗ್, ಕಾಂತರಾಜ ಅರಸ್, ವಸುಮತಿ, ಚೇತನಾ ಭೂಷಣ್, ಸಂಜಯ್ ಪ್ರಸನ್ನ, ಮಲ್ಲಣ್ಣ, ನವೀನ್, ಪ್ರಜ್ವಲ್, ಗೌತಮ್, ಅವಿನಾಶ್ ಮೊದಲಾದವರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲೆಯಲ್ಲಿ ಶೇ.98.16ರಷ್ಟು ಎನುಮೆರೇಶನ್ ಫಾರಂ ವಿತರಣೆ
ಬಡವರ ಹೆಸರಿನ ಖಾತೆಯ ಬಹುಕೋಟಿ ಹಗರಣ ತನಿಖೆಗೆ ಆಗ್ರಹ