ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಜಿಲ್ಲೆಗೆ ವಿಶೇಷ ಸ್ಥಾನಮಾನ: ಹಿರೇಮಗಳೂರು ಕಣ್ಣನ್

KannadaprabhaNewsNetwork |  
Published : Apr 08, 2025, 12:30 AM IST
ನಗರದ ಹಿರೇಮಗಳೂರು ಸಮೀಪ ಶ್ರೀ ಕೋದಂಡರಾಮ ಸಮುದಾಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಮಹಿಳಾ ಘಟಕದ ಸೇವಾದೀಕ್ಷೆ ಸಮಾರಂಭ ಮತ್ತು ದತ್ತಿ ಉಪನ್ಯಾಸ ಕಾರ್ಯ ಕ್ರಮವನ್ನು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಕನ್ನಡನಾಡು ಸಾಹಿತ್ಯ, ಸಂಗೀತ, ಕಲೆಗಳಿಗೆ ಜೀವತುಂಬಿದ ಬೀಡು. ಕವಿಸಂತರು, ಕೀರ್ತನೆಕಾರರ ಕೊಡುಗೆಯಿಂದ ಕನ್ನಡ ಭಾಷೆ ದೇಶಾದ್ಯಂತ ಮನ್ನಣೆ ಪಡೆದುಕೊಂಡಿದೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.

ಶ್ರೀ ಕೋದಂಡರಾಮ ಸಮುದಾಯ ಭವನದಲ್ಲಿ ತಾಲೂಕು ಮಹಿಳಾ ಘಟಕದ ಸೇವಾದೀಕ್ಷೆ ಸಮಾರಂಭ/ ದತ್ತಿ ಉಪನ್ಯಾಸ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕನ್ನಡನಾಡು ಸಾಹಿತ್ಯ, ಸಂಗೀತ, ಕಲೆಗಳಿಗೆ ಜೀವತುಂಬಿದ ಬೀಡು. ಕವಿಸಂತರು, ಕೀರ್ತನೆಕಾರರ ಕೊಡುಗೆಯಿಂದ ಕನ್ನಡ ಭಾಷೆ ದೇಶಾದ್ಯಂತ ಮನ್ನಣೆ ಪಡೆದುಕೊಂಡಿದೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.

ನಗರದ ಹಿರೇಮಗಳೂರು ಸಮೀಪ ಶ್ರೀ ಕೋದಂಡರಾಮ ಸಮುದಾಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಮಹಿಳಾ ಘಟಕದ ಸೇವಾದೀಕ್ಷೆ ಸಮಾರಂಭ ಮತ್ತು ದತ್ತಿ ಉಪನ್ಯಾಸ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಹಿತ್ಯ ಕ್ಷೇತ್ರದಲ್ಲಿ ಚಿಕ್ಕಮಗಳೂರು ವಿಶೇಷ ಸ್ಥಾನಮಾನವಿದೆ. ರಾಷ್ಟ್ರಕವಿ ಕುವೆಂಪು ಜನಿಸಿದ ಊ ರಿನಲ್ಲಿ ಸಾಹಿತ್ಯಕ್ರಾಂತಿ ಯಥೇಚ್ಚವಾಗಿದೆ. ಅಲ್ಲದೇ ಪೂರ್ಣಚಂದ್ರ ತೇಜಸ್ವಿ ಕಥೆ, ಕಾದಂಬರಿಗಳು ಓದುಗರರಿಗೆ ವಿಶೇಷ ಅನುಭವ ನೀಡುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಇತ್ತೀಚಿನ ಆಂಗ್ಲಭಾಷೆ ವ್ಯಾಮೋಹಕ್ಕೆ ಯುವಪೀಳಿಗೆ ದಾಸರಾಗುತ್ತಿದ್ದಾರೆ. ಎಡವಿ ಬಿದ್ದಾಗ ಬರುವಂಥ ಕನ್ನಡ ಪದ, ದೈನಂದಿನ ಕಾರ್ಯಗಳಲ್ಲಿ ತೋರುತ್ತಿಲ್ಲ. ಹೀಗಾಗಿ ಪಾಲಕರು ಮನೆಯಿಂದಲೇ ಭಾಷಾ ಸಂಸ್ಕೃತಿ, ಪರಂಪರೆ ಹಾಗೂ ಇತಿಹಾಸ ತಿಳಿಸುವ ಕಾರ್ಯವಾಗಬೇಕು ಎಂದರು.ಜಿಲ್ಲೆಯ ಕಸಾಪದಲ್ಲಿ ಮಹಿಳಾ ಘಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ. ಅಡುಗೆ ಅಥವಾ ಕೆಲಸಕ್ಕೆ ಸೀಮಿತ ರಾಗದೇ ನಾಡಿನ ಸೌಗಂಧ ಪರಿಚಯಿಸುವ ಕಾರ್ಯ ಶ್ಲಾಘನೀಯ. ಹೀಗಾಗಿ ಕನ್ನಡ ಕೆಲಸದಲ್ಲಿ ಹೆಚ್ಚು ಮಹಿಳಾ ಮಣಿಯರು ತೊಡಗಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.ಹಿರಿಯ ವೈದ್ಯ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ ಕನ್ನಡವೆಂದರೆ ಕೇವಲ ಭಾಷೆಯಲ್ಲ, ಉಸಿರೆಂದು ಭಾವಿಸಬೇಕು. ಪ್ರತಿ ನಿತ್ಯದ ಕೆಲಸ-ಕಾರ್ಯಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆ ಮಾಡಬೇಕು. ಈ ನಡೆಯಿಂದಲೇ ಕನ್ನಡ ಸೊಗಡನ್ನು ಎಲ್ಲೆಡೆ ಪಸರಿಸಲು ಸಾಧ್ಯ. ನೂತನ ಮಹಿಳಾ ಅಧ್ಯಕ್ಷರು ನಾಡಿನ ಸೇವೆಗೆ ತಮ್ಮ ಕೆಲಸ ಮುಡಿಪಿಡಬೇಕು ಎಂದು ಸಲಹೆ ನೀಡಿದರು.ತಾಲೂಕು ಮಹಿಳಾ ಘಟಕದ ನೂತನ ಅಧ್ಯಕ್ಷೆ ನಿರ್ಮಲ ಮಂಚೇಗೌಡ ಮಾತನಾಡಿ ನಾಡಿನ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸದಾ ಕಾರ್ಯೋನ್ಮುಖರಾಗುತ್ತೇನೆ. ಜೊತೆಗೆ ಹಿರಿಯರ, ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಕನ್ನಡಾಭಿಮಾನಗಳ ಋಣ ತೀರಿಸುವ ಕೆಲಸ ಮಾಡುವುದಾಗಿ ತಿಳಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ರಾಜ್ಯದಲ್ಲಿ ಮೊದಲ ಬಾರಿಗೆ ಚಿಕ್ಕಮಗಳೂರು ಜಿಲ್ಲೆ ಕಸಾಪ ಮಹಿಳಾ ಸ್ಥಾಪಿಸಿ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ಇದೀಗ ಮೈಸೂರು, ಬೀದ ರ್ ಜಿಲ್ಲೆಗಳಲ್ಲಿ ಮಹಿಳಾ ಘಟಕ ಸ್ಥಾಪಿಸು ತ್ತಿವೆ. ಹೀಗಾಗಿ ಮಹಿಳೆಯರು ಕನ್ನಡದ ತೇರು ಎಳೆದು ಭಾಷಾ ಸಂಸ್ಕೃತಿ ಬೆಳವಣಿಗೆಗೆ ಸಹಕರಿಸಬೇಕು ಎಂದು ಕಿವಿಮಾತು ಹೇಳಿದರು.ಮಹಿಳಾ ಘಟಕದ ಪದಾಧಿಕಾರಿಗಳು : ನಿರ್ಮಲ ಮಂಚೇಗೌಡ (ಅಧ್ಯಕ್ಷೆ), ಸುಜಾತಾ ಶಿವಕಮಾರ್ (ಗೌ.ಅಧ್ಯಕ್ಷ), ರೂಪ ನಾಯ್ಕ್ (ಗೌ.ಕಾರ್ಯದರ್ಶಿ), ಆರಾಧನಾ ಸೋಮಶೇಖರ್ (ಕೋಶಾಧ್ಯಕ್ಷ), ರೇಖಾ ಹುಲಿಯಪ್ಪಗೌಡ, ಜಸಂತಾ ಅನಿಲ್‌ ಕುಮಾರ್ (ಕಾಯಾಧ್ಯಕ್ಷರು), ಕಲಾವತಿ ರಾಜಣ್ಣ, ಕವಿತಾ ಶೇಖರ್ (ಪ್ರಧಾನ ಸಂಚಾಲಕಿ), ವಿಶಾಲ ನಾಗರಾಜ್, ಪುಷ್ಪಾ ರಾಜೇಂದ್ರ (ಸಂಘಟನಾ ಕಾರ್ಯದರ್ಶಿ) ಮತ್ತಿತರರು ಆಯ್ಕೆಯಾದರು.

ಸರ್ಕಾರಿ ಪಾಲಿಟೆಕ್ನಿಕ್ ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್ ಉಪಪನ್ಯಾಸ ನೀಡಿದರು. ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಸೇವಾಧೀಕ್ಷೆ ಬೋಧಿಸಿದರು. ನಿಕಟಪೂರ್ವ ಅಧ್ಯಕ್ಷೆ ಸವಿತಾ ಸತ್ಯನಾರಾಯಣ್, ತಾಲೂಕು ಕಸಾಪ ಅಧ್ಯಕ್ಷ ದಯಾನಂದ್ ಮಾವಿನಕೆರೆ, ನಗರಾಧ್ಯಕ್ಷ ಸಚಿನ್‌ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ