ಏ.14ರಿಂದ ವಿಶೇಷ ಸುದರ್ಶನ ಕ್ರಿಯಾ ಶಿಬಿರ

KannadaprabhaNewsNetwork |  
Published : Apr 12, 2026, 01:30 AM IST
ಪೋಟೋ: 11ಎಸ್‌ಎಂಜಿಕೆಪಿ04ಶಿವಮೊಗ್ಗದ ಪತ್ರಿಕಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಹಿರಿಯ ತರಬೇತುದಾರ ಎಚ್.ಡಿ.ಚಂದ್ರಹಾಸ್ ಮಾತನಾಡಿದರು. | Kannada Prabha

ಸಾರಾಂಶ

ದಿ ಆರ್ಟ್ ಆಫ್ ಲಿವಿಂಗ್ ಶಿವಮೊಗ್ಗ ಶಾಖೆ ವತಿಯಿಂದ ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ ವರ್ಷಾಚರಣೆ ಪ್ರಯುಕ್ತ ಶಿವಮೊಗ್ಗ ನಗರದಲ್ಲಿ ಏ.14 ರಿಂದ ಏ.19 ರವರೆಗೆ ಆರು ದಿನಗಳ ವಿಶೇಷ ಸುದರ್ಶನ ಕ್ರಿಯಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಹಿರಿಯ ತರಬೇತುದಾರ ಎಚ್.ಡಿ.ಚಂದ್ರಹಾಸ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ದಿ ಆರ್ಟ್ ಆಫ್ ಲಿವಿಂಗ್ ಶಿವಮೊಗ್ಗ ಶಾಖೆ ವತಿಯಿಂದ ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ ವರ್ಷಾಚರಣೆ ಪ್ರಯುಕ್ತ ಶಿವಮೊಗ್ಗ ನಗರದಲ್ಲಿ ಏ.14 ರಿಂದ ಏ.19 ರವರೆಗೆ ಆರು ದಿನಗಳ ವಿಶೇಷ ಸುದರ್ಶನ ಕ್ರಿಯಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಹಿರಿಯ ತರಬೇತುದಾರ ಎಚ್.ಡಿ.ಚಂದ್ರಹಾಸ್ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ವೇಗದ ಜೀವನಶೈಲಿಯಲ್ಲಿ ಒತ್ತಡ, ಆತಂಕ, ಮಾನಸಿಕ ಅಶಾಂತಿ ಹಾಗೂ ದೈಹಿಕ ದೌರ್ಬಲ್ಯವು ಸಾಮಾನ್ಯವಾಗುತ್ತಿರುವ ಸಂದರ್ಭದಲ್ಲಿ, ವ್ಯಕ್ತಿಯ ಒಳಗಿನ ಶಾಂತಿ, ಆನಂದ ಮತ್ತು ಸಮತೋಲನವನ್ನು ಪುನಃ ಸ್ಥಾಪಿಸಲು ವಿಶ್ವಪ್ರಸಿದ್ಧ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಈ ಸಂದರ್ಭದಲ್ಲಿ ಜೀವನ ಕಲೆ-ಸುದರ್ಶನ ಕ್ರಿಯಾಶಿಬಿರ ಎಲ್ಲರಿಗೂ ಅವಶ್ಯವಿದೆ ಈ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಬೆಂಗಳೂರು ಆಶ್ರಮದ ಸಾಧ್ವಿ ಶುಭಕರಿ ಜೀ ಅವರ ದಿವ್ಯ ಸಾನ್ನಿಧ್ಯ ಮತ್ತು ಮಾರ್ಗದರ್ಶನದಲ್ಲಿ ಈ ಶಿಬಿರವು ನಡೆಯಲಿದ್ದು, ಭಾಗವಹಿಸುವ ಪ್ರತಿಯೊಬ್ಬರ ಜೀವನದಲ್ಲಿ ಹೊಸ ಉತ್ಸಾಹ ಮತ್ತು ಒಳಗಿನ ಶಾಂತಿಯನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿದೆ. ಇಂದಿನ ಮಾನವನಿಗೆ ಬಾಹ್ಯ ಯಶಸ್ಸಿನ ಜೊತೆಗೆ ಆಂತರಿಕ ಸಂತೋಷವೂ ಅತಿ ಮುಖ್ಯವಾಗಿದೆ. ಅದನ್ನು ಸಾಧಿಸಲು ಸರಳ ಮತ್ತು ಪರಿಣಾಮಕಾರಿ ಮಾರ್ಗವೇ ಸುದರ್ಶನ ಕ್ರಿಯೆ. ಶ್ರೀ ರವಿ ಶಂಕರ್ ಗುರೂಜಿಯವರಿಂದ ಅಭಿವೃದ್ಧಿಪಡಿಸಲ್ಪಟ್ಟ ಈ ವಿಶಿಷ್ಟ ಉಸಿರಾಟ ತಂತ್ರವು ದೇಹ, ಮನಸ್ಸು ಮತ್ತು ಭಾವನೆಗಳನ್ನು ಸಮನ್ವಯಗೊಳಿಸಿ, ಜೀವನವನ್ನು ಸಮೃದ್ಧಗೊಳಿಸುತ್ತದೆ ಎಂದರು.

ಬೆಳಗ್ಗೆ 6 ರಿಂದ 8 ಹೊಯ್ಸಳ ಫೌಂಡೇಶನ್ ಕಾರ್ಯಾಲಯ, ದುರ್ಗಿಗುಡಿ, ಬೆಳಗ್ಗೆ 11 ರಿಂದ 1 ಅಮೃತ ಯೋಗ ಕೇಂದ್ರ, ದುರ್ಗಿಗುಡಿ, ಮಧ್ಯಾಹ್ನ 3 ರಿಂದ 5 ಆರ್ಟ್ ಆಫ್ ಲಿವಿಂಗ್ ಜ್ಞಾನಕ್ಷೇತ್ರ, ನವುಲೆ, ಸಂಜೆ 6 ರಿಂದ 8 ಪಿ ಅಂಡ್‌ ಟಿ ಸಮುದಾಯ ಭವನ, ಪಿ ಅಂಡ್‌ ಟಿ ಕಾಲೋನಿ, ಶಿವಮೊಗ್ಗ ಇಲ್ಲಿ ಶಿಬಿರ ನಡೆಯಲಿದ್ದು, ಏ.19ರಂದು ಬೆಳಗ್ಗೆ 10 ಗಂಟೆಗೆ ಜ್ಞಾನಕ್ಷೇತ್ರದ ಧ್ಯಾನ ಮಂದಿರದಲ್ಲಿ ಗುರು ಪೂಜೆ ಹಾಗೂ ದಿವ್ಯ ಸತ್ಸಂಗ ನಡೆಯಲಿದೆ. ಇದು ಭಾಗವಹಿಸುವವರಿಗೆ ಆಧ್ಯಾತ್ಮಿಕ ಅನುಭವದ ಮಹೋತ್ಸವವಾಗಲಿದೆ ಎಂದು ಮಾಹಿತಿ ನೀಡಿದರು.

6 ದಿನಗಳ ಈ ಶಿಬಿರಕ್ಕೆ ಬೇರೆ ಸಂದರ್ಭಗಳಲ್ಲಿ 1200 ರು. ಆಜೀವ ಸದಸ್ಯ ಶುಲ್ಕವಿದ್ದು, ಗುರೂಜಿಯವರ ಹುಟ್ಟುಹಬ್ಬದ ಪ್ರಯುಕ್ತ ರಿಯಾಯಿತಿ 800 ರು. ನಿಗದಿಪಡಿಸಲಾಗಿದೆ. ಸದಸ್ಯರಾದವರು ಮುಂದಿನ ಸಂಸ್ಥೆಯ ಎಲ್ಲಾ ಶಿಬಿರಗಳಲ್ಲಿ ಉಚಿತವಾಗಿ ಭಾಗವಹಿಸಿ ಪ್ರಯೋಜನ ಪಡೆಯಬಹುದು ಎಂದರು.

18 ವರ್ಷ ಮೇಲ್ಪಟ್ಟವರು ಈ ಶಿಬಿರದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಚಂದ್ರಹಾಸ್, ಮೊ.94482 50026, ಶಬರೀಶ್ ಕಣ್ಣನ್, ಮೊ. 99640 72793ರಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಹಿರಿಯ ತರಬೇತುದಾರರಾದ ಶಬರೀಶ್ ಕಣ್ಣನ್, ಪಿ.ಆರ್. ಕೃಷ್ಣಪ್ಪ , ಶಶಿಭೂಷಣ್ ಶಾಸ್ತ್ರಿ, ಶಿವಮೂರ್ತಿ, ವಿನಯ್ ಶಿವಮೊಗ್ಗ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

16ಕ್ಕೆ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ರ್‍ಯಾಲಿ
ಸೃಜನಶೀಲ ಯೋಜನೆ‌ಗಳಿಗೆ ನಾವೀನ್ಯತೆ ಸ್ಪರ್ಶ