ಜಿಲ್ಲೆಯ ರೈಲ್ವೆ ಯೋಜನೆಗಳ ಕಾಮಗಾರಿಗಳಿಗೆ ವೇಗ: ಸಂಸದ

KannadaprabhaNewsNetwork |  
Published : Feb 27, 2024, 01:32 AM IST
26ಕೆಪಿಆರ್‌ಸಿಆರ್‌01: | Kannada Prabha

ಸಾರಾಂಶ

ರಾಜ್ಯದ 11 ಮತ್ತು ದೇಶದ 553 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ ಹಾಗೂ ಸುಮಾರು 1500 ಕ್ಕೂ ಅಧಿಕ ಸೇತುವೆಗಳನ್ನು ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು

ಕನ್ನಡಪ್ರಭ ವಾರ್ತೆ ರಾಯಚೂರು

ಅಮೃತ ಭಾರತ ಯೋಜನೆಯಡಿ ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಸಿ (ವಿಡಿಯೋ ಕಾನ್ಫರೆನ್ಸ್) ಮುಖಾಂತರ ಸೋಮವಾರ ಶಂಕುಸ್ಥಾನ ನೆರವೇರಿಸಿದರು.

ಜಿಲ್ಲೆ ಸೇರಿದಂತೆ ರಾಜ್ಯದ 11 ಮತ್ತು ದೇಶದ 553 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ ಹಾಗೂ ಸುಮಾರು 1500 ಕ್ಕೂ ಅಧಿಕ ಸೇತುವೆಗಳನ್ನು ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಇದೇ ಸಮಯದಲ್ಲಿ ಸ್ಥಳೀಯ ರೈಲ್ವೆ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಸಂಸದ ರಾಜಾ ಅಮರೇಶ್ವರ ನಾಯಕ ಅವರು ಸಾಂಕೇತಿಕವಾಗಿ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಸಂಸದರು, ಪ್ರಧಾನಿ ಮೋದಿ ಅವರು ನಿರಂತರ ದೇಶದ ಅಭಿವೃದ್ಧಿಯತ್ತ ಗಮನ ಹರಿಸುತ್ತಿದ್ದಾರೆ. ಅವರ ದೇಶ ಸೇವೆ, ಕಾರ್ಯಕ್ಕೆ ಜನರು ಶ್ಲಾಘಿಸಿದ್ದಾರೆ ಎಂದರು. ರಾಯಚೂರು ಜಿಲ್ಲಾ ಕೇಂದ್ರದ ರೈಲ್ವೆ ನಿಲ್ದಾಣ ಗುಂತಕಲ್ ವಿಭಾಗದ ಪ್ರಮುಖ ರೈಲ್ವೆ ನಿಲ್ದಾಣವಾಗಿದ್ದು, ಅಮೃತ ಭಾರತ ಯೋಜನೆಯಡಿ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಕಾಮಗಾರಿಗಳಿಗಾಗಿ ₹21 ಕೋಟಿ ಮಂಜೂರು ಮಾಡಲಾಗಿದೆ. ಈ ಯೋಜನೆಯಡಿ ರೈಲ್ವೆ ನಿಲ್ದಾಣದ ಮುಂಭಾಗ ಮತ್ತು ಪ್ರವೇಶದ್ವಾರಗಳ ಸುಧಾರಣೆ, ರೈಲ್ವೆ ಫ್ಲಾಟ್ ಫಾರಂ ವಿಸ್ತರಣೆ, ಪಾರ್ಕಿಂಗ್ ಸೌಲಭ್ಯ, ತೋಟಗಾರಿಕೆ ಸೇರಿದಂತೆ ಪ್ರವೇಶ ಕಮಾನು ನಿರ್ಮಾಣಗೊಳ್ಳಲಿದೆ ಎಂದು ಹೇಳಿದರು. ವಾಡಿ, ಶಾಹಪುರ ಭಾಗದಲ್ಲಿಯೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಅಕ್ಕಲಕೋಟೆ ಬೆಳಗಾವಿ ರಸ್ತೆ ಕಾಮಗಾರಿಗೆ ₹551 ಕೋಟಿ ಮೀಸಲಿಡಲಾಗಿದೆ. ತುಂಗಭದ್ರಾ, ಕಲ್ಮಾಲಾ ಮಧ್ಯೆ ರಸ್ತೆ ನಿರ್ಮಿಸಲಾಗುತ್ತದೆ ಎಂದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ವಿಶ್ವ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಅಮೃತ ಭಾರತ ಯೋಜನೆಯಡಿ ರಾಯಚೂರು ಮತ್ತು ಯಾದಗಿರಿ ರೈಲ್ವೆ ನಿಲ್ದಾಣಗಳನ್ನು ನವೀಕರಣ ಮಾಡುತ್ತಿರುವುದು ದೇಶದ ಅಭಿವೃದ್ಧಿ ಪ್ರಗತಿ ಮೋದಿ ಹೊಸ ಇತಿಹಾಸ ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸ್ವಾತಂತ್ರ ಹೋರಾಟಗಾರ ಪಂಪಣ್ಣ, ಬಿಜೆಪಿ ಮುಖಂಡರ ಎನ್ ಶಂಕ್ರಪ್ಪ, ಸಲಹಾ ಸಮತಿ ಸದ್ಯಸರಾದ ಡಾ. ಬಾಬುರಾವ, ಬ್ರಹ್ಮಕುಮಾರಿಯ ಸ್ಮಿತಾ ಅಕ್ಕ, ರೈಲ್ವೆ ಅಧಿಕಾರಿಗಳಾದ ರಾಮಕೃಷ್ಣ, ಅಶೋಕ ಕುಮಾರ ಸೇರಿ ಇತರರು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...