ಏಲಕ್ಕಿ, ಕಾಫಿ ಬೆಳೆಗಳ ಕೃಷಿ ಮಾಹಿತಿ ಕಾರ್ಯಕ್ರಮ ಉದ್ಘಾಟನೆ

KannadaprabhaNewsNetwork |  
Published : Nov 07, 2026, 02:45 AM IST
ಕೃಷಿ ಮಾಹಿತಿ | Kannada Prabha

ಸಾರಾಂಶ

ಭಾರತ ಸರ್ಕಾರದ ಸಾಂಬಾರ ಮಂಡಳಿ, ಮೂಡಿಗೆರೆ ಮತ್ತು ಬೆಳ್ತಂಗಡಿಯ ಅಳದಂಗಡಿ ತೋಟಗಾರಿಕೆ ರೈತ ಉತ್ಪಾದಕ ಸಂಸ್ಥೆ ಜಂಟಿಯಾಗಿ, ಗ್ರಾಮ ಪಂಚಾಯತ್ ಬೆಳಾಲು ಹಾಗೂ ನಾಗಾಂಬಿಕ ಸಂಜೀವಿನಿ ಒಕ್ಕೂಟ ರಿ. ಬೆಳಾಲು ಸಹಯೋಗದೊಂದಿಗೆ ಬೆಳಾಲು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ ಕಾಳುಮೆಣಸು, ಏಲಕ್ಕಿ, ಕಾಫಿ ಬೆಳೆಗಳ ಕೃಷಿ ಮಾಹಿತಿ ಕಾರ್ಯಕ್ರಮ ನ. 4 ರಂದು ನಡೆಯಿತು.

ಬೆಳ್ತಂಗಡಿ: ಭಾರತ ಸರ್ಕಾರದ ಸಾಂಬಾರ ಮಂಡಳಿ, ಮೂಡಿಗೆರೆ ಮತ್ತು ಬೆಳ್ತಂಗಡಿಯ ಅಳದಂಗಡಿ ತೋಟಗಾರಿಕೆ ರೈತ ಉತ್ಪಾದಕ ಸಂಸ್ಥೆ ಜಂಟಿಯಾಗಿ, ಗ್ರಾಮ ಪಂಚಾಯತ್ ಬೆಳಾಲು ಹಾಗೂ ನಾಗಾಂಬಿಕ ಸಂಜೀವಿನಿ ಒಕ್ಕೂಟ ರಿ. ಬೆಳಾಲು ಸಹಯೋಗದೊಂದಿಗೆ ಬೆಳಾಲು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ ಕಾಳುಮೆಣಸು, ಏಲಕ್ಕಿ, ಕಾಫಿ ಬೆಳೆಗಳ ಕೃಷಿ ಮಾಹಿತಿ ಕಾರ್ಯಕ್ರಮ ನ. 4 ರಂದು ನಡೆಯಿತು.ಸಾಂಬಾರು ಮಂಡಳಿಯ ಪ್ರಾದೇಶಿಕ ಕಚೇರಿ, ಸಕಲೇಶಪುರದ ಉಪ ನಿರ್ದೇಶಕ ಸುಂದರೇಶನ್, ಕೃಷಿ ಅಧಿಕಾರಿ ಮತ್ತು ಪಂ. ಆಡಳಿತಾಧಿಕಾರಿ ಗಣೇಶ್ ಅಡಿಗ, ಅಳದಂಗಡಿ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಹರಿದಾಸ್, ಆರ್‌ಪಿಎಸ್‌ ಅಧ್ಯಕ್ಷ ದಾಮೋದರ ಗೌಡ, ಬೆಳಾಲ ಗ್ರಾ.ಪಂ. ಪಿ.ಡಿ.ಓ.ಜಗದೀಶ್, ವಲಯ ಮೇಲ್ವಿಚಾರ ಸ್ವಸ್ತಿಕ್ ಜೈನ್, ನಾಗಾಂಬಿಕಾ ಸಂಜೀವಿನಿ ಒಕ್ಕೂಟ ಬೆಳಾಲು ಅಧ್ಯಕ್ಷೆ ಸೌಮ್ಯ ಅವರು ಉದ್ಘಾಟನೆ ಮಾಡಿದರು.

ಕೃಷಿ ಅಧಿಕಾರಿ ಹಾಗೂ ಪಂಚಾಯತ್ ಆಡಳಿತ ಅಧಿಕಾರಿ ಗಣೇಶ್ ಅಡಿಗರವರು ರೈತರಿಗೆ ಇರುವ ಹಲವಾರು ತರಬೇತಿಗಳ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು. ಬೆಳಾಲು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಪದ್ಮಗೌಡರವರು ಕಾರ್ಯಕ್ರಮ ಆಯೋಜಿಸಿದ ಅಭಿಪ್ರಾಯ ವ್ಯಕ್ತಪಡಿಸಿದರು. ಅಳದಂಗಡಿ ತೋಟಗಾರಿಕೆ ಉತ್ಪಾದನೆ ಸಂಸ್ಥೆಯ ಅಧ್ಯಕ್ಷರು ಹರಿದಾಸ್ ರವರು ತರಬೇತಿ ಕಾರ್ಯಾಗಾರ ನಡೆಸುವ ಮತ್ತು ಅದರ ಸಾಧಕ ಬಾದಕಗಳ ಕುರಿತು ಮಾತನಾಡಿದರು.ಸಂಜೀವಿನಿ ಯೋಜನೆಯ ವಲಯ ಮೇಲ್ವಿಚಾರಕರಾದ ಸ್ವಸ್ತಿಕ್ ಜೈನ್ ರವರು ಇದೊಂದು ಉತ್ತಮ ತರಬೇತಿಯಾಗಿದ್ದು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ಕೃಷಿಯಲ್ಲಿ ಉತ್ತಮ ಬೆಳವಣಿಗೆ ಆಗಲಿ ಎಂದು ತಿಳಿಸಿದರು. ಪಿಡಿಒ ಜಗದೀಶ್ ಇವರು ಕೃಷಿ ತರಬೇತಿಯ ಸದುಪಯೋಗದ ಬಗ್ಗೆ ತಿಳಿಸಿದರು.

ಕರಿಮೆಣಸು ಮತ್ತು ಮಸಾಲೆ ಬೆಳೆಗಳ ಕೃಷಿ (ಕಾಫಿ, ಏಲಕ್ಕಿ ಇತ್ಯಾದಿ) ಹಾಗೂ ರೈತರಿಗೆ ಲಭ್ಯವಿರುವ ಸಾಂಬಾರು ಮಂಡಳಿಯ ಸೌಲಭ್ಯಗಳು ಮತ್ತು ಸಹಾಯಧನಗಳ ಕುರಿತು ದೋಣಿಗಲ್ ಐಸಿಆರ್‌ಐ ನ ವಿಜ್ಞಾನಿ ಡಾ. ಹರ್ಷರವರು ವೈಜ್ಞಾನಿಕ ಮಾಹಿತಿಯನ್ನು ಪಿಪಿಟಿ ಮೂಲಕ ವಿವರವಾಗಿ ನೀಡಿದರು.ಕರಿಮೆಣಸು ಹಾಗೂ ಮಸಾಲೆ ಬೆಳೆಗಳನ್ನು ಬೆಳೆಯುವ ಬೆಳಾಲು ಮತ್ತು ದೂರದ ಮಡಂತ್ಯಾರ್, ಗೇರುಕಟ್ಟೆ, ವೇಣೂರು ಭಾಗದ ಆಸಕ್ತಿಯುಳ್ಳ ರೈತರು ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ವೈಜ್ಞಾನಿಕ ಕೃಷಿ ಪದ್ಧತಿಗಳು ಮತ್ತು ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಇದರೊಂದಿಗೆ ಆರ್ಥಿಕ ಸಾಕ್ಷರತಾ ಕೇಂದ್ರದ ಉಷಾರವರು ಸುರಕ್ಷಿತ ಬ್ಯಾಂಕಿಂಗ್ ವ್ಯವಹಾರದ ಕುರಿತು ಮಾಹಿತಿ ನೀಡಿದರು.

ಜೂಲಿಯಟ್ ಜಾಯ್ ಸ್ವಾಗತಿಸಿದರು. ಈ ಮಾಹಿತಿ ಕಾರ್ಯಕ್ರಮವನ್ನು ಬೆಳಾಲಿನಲ್ಲಿ ಯಶಸ್ವಿಯಾಗಿ ಸಂಘಟಿಸಿದ ಸುಲೈಮಾನ್ ಬೆಳಾಲು ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

ಸಂಜೀವಿನಿ ಒಕ್ಕೂಟದ ಸಿಬ್ಬಂದಿ, ಪದಾಧಿಕಾರಿಗಳು, ಪಂಚಾಯತ್ ಸಿಬ್ಬಂದಿ ಕಾರ್ಯಕ್ರಮಕ್ಕೆ ಸಹಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ