ಹೋಮದಿಂದ ಆಧ್ಯಾತ್ಮಿಕತೆ ಬೆಳವಣಿಗೆ

KannadaprabhaNewsNetwork |  
Published : Dec 16, 2024, 12:45 AM IST
ಲಕ್ಷ್ಮೇಶ್ವರ ಪಟ್ಟಣದ ಶಂಕರಭಾರತಿ ಮಠದಲ್ಲಿ ದತ್ತ ಜಯಂತಿ ನಿಮಿತ್ತ ಬಾಲಚಂದ್ರಭಟ್ ಹುಲಮನಿ ನೇತೃತ್ವದಲ್ಲಿ ವಿಶ್ವಶಾಂತಿಗಾಗಿ ನಡೆದ ಶ್ರೀ  ದತ್ತಾತ್ರೇಯ ಹೋಮದಲ್ಲಿ ಪೂರ್ಣಾಹುತಿ ಅರ್ಪಿಸಲಾಯಿತು.  | Kannada Prabha

ಸಾರಾಂಶ

ಹೋಮದ ಮಹತ್ವ ಅಪಾರವಾಗಿದ್ದು, ನಮ್ಮಲ್ಲಿರುವ ನಕಾರಾತ್ಮಕ ಶಕ್ತಿ ಕಡಿಮೆಗೊಳಿಸಿ ಸಕಾರಾತ್ಮಕ ಶಕ್ತಿ ಪ್ರೇರೆಪಿಸುವ ಶಕ್ತಿ ಹೋಮದಲ್ಲಿರುತ್ತದೆ.

ಲಕ್ಷ್ಮೇಶ್ವರ: ಪಟ್ಟಣದ ಶಂಕರಭಾರತಿ ಮಠದಲ್ಲಿ ಬ್ರಹ್ಮವೃಂದ (ಬ್ರಾಹ್ಮಣ ಸಮಾಜ)ದ ವತಿಯಿಂದ ದತ್ತ ಜಯಂತಿ ಅಂಗವಾಗಿ ಡಿ. ೮ ರಿಂದ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಶನಿವಾರ ದತ್ತಾತ್ರೇಯ ತೊಟ್ಟಿಲೊತ್ಸವ ಜರುಗಿದ್ದು, ಭಾನುವಾರ ವಿಶ್ವಶಾಂತಿಗಾಗಿ ದತ್ತ ಹೋಮವನ್ನು ಶಾಸ್ತ್ರಕ್ತವಾಗಿ ನೆರವೇರಿಸಲಾಯಿತು.

ದತ್ತ ಜಯಂತಿ ನಿಮಿತ್ತ ನಿತ್ಯ ಭಜನೆ, ರುದ್ರಾಭಿಷೇಕ, ವಿಶೇಷ ಅಲಂಕಾರ, ಭಜನೆ, ಗುರುಚರಿತ್ರೆ ಪಾರಾಯಣ, ಮಹಿಳೆಯರಿಂದ ಭಜನಾ ಕಾರ್ಯಕ್ರಮಗಳು ಸಾಂಗವಾಗಿ ನೆರವೇರುತ್ತಿದ್ದು, ಭಾನುವಾರ ಭಗವಾನ್ ದತ್ತಾತ್ರೇಯ ಹೋಮವನ್ನು ಬಾಲಚಂದ್ರಭಟ್ ಹುಲಮನಿ ನೇತೃತ್ವದಲ್ಲಿ ಋತ್ವಿಜರ ವೇದಘೋಷಗಳ ಮದ್ಯ ಭಗವಾನ್ ದತ್ತಾತ್ರೇಯನ ಮಂತ್ರ ಪಠಿಸುವ ಮೂಲಕ ಸಂಪ್ರದಾಯದಂತೆ ನೆರವೇರಿಸಿದರು. ಮದ್ಯಾಹ್ನದ ವೇಳೆಗೆ ಸಮಾಜದ ಹಿರಿಯ ಮುಖಂಡ ವಿ.ಎಲ್. ಪೂಜಾರ ದಂಪತಿಗಳು ಹೋಮದ ಪವಿತ್ರ ಅಗ್ನಿಕುಂಡದಲ್ಲಿ ಪೂರ್ಣಾಹುತಿ ಅರ್ಪಿಸಿದರು.

ಬಾಲಚಂದ್ರಭಟ್ ಹುಲಮನಿ ಹೋಮದ ಮಹತ್ವ ಕುರಿತು ಮಾತನಾಡಿ, ಹೋಮದ ಮಹತ್ವ ಅಪಾರವಾಗಿದ್ದು, ನಮ್ಮಲ್ಲಿರುವ ನಕಾರಾತ್ಮಕ ಶಕ್ತಿ ಕಡಿಮೆಗೊಳಿಸಿ ಸಕಾರಾತ್ಮಕ ಶಕ್ತಿ ಪ್ರೇರೆಪಿಸುವ ಶಕ್ತಿ ಹೋಮದಲ್ಲಿರುತ್ತದೆ. ಭಗವಾನ್ ದತ್ತಾತ್ರೇಯ ಹೋಮ ಆಚರಣೆಯು ಆಧ್ಯಾತ್ಮಿಕ ಜ್ಞಾನೋದಯ ಮತ್ತು ಜ್ಞಾನಕ್ಕಾಗಿ ಆಶೀರ್ವಾದ ಬಯಸುತ್ತದೆ. ಆಧ್ಯಾತ್ಮಿಕ ಬೆಳವಣಿಗೆ ಮತ್ತು ಬುದ್ಧಿವಂತಿಕೆ ಹೆಚ್ಚಿಸುತ್ತದೆ ಮತ್ತು ಮಾನಸಿಕ ಶಾಂತಿ ಮತ್ತು ಸ್ಥಿರತೆ ಪೋಷಿಸುತ್ತದೆ. ಇದು ನಕಾರಾತ್ಮಕ ಪ್ರಭಾವಗಳಿಂದ ರಕ್ಷಿಸುತ್ತದೆ ಮತ್ತು ಕುಟುಂಬ ಸಾಮರಸ್ಯ ಸುಧಾರಿಸುತ್ತದೆ. ಈ ಹೋಮವು ಆರೋಗ್ಯ ಮತ್ತು ಸಮೃದ್ಧಿ ದಯಪಾಲಿಸುವ ಅಪಾರ ಶಕ್ತಿ ಹೊಂದಿದೆ, ದತ್ತ ಜಯಂತಿಯಂದು ಪೂಜಾ ವಿಧ ಮಾಡುವುದರಿಂದ ಜೀವನದ ಪ್ರತಿಯೊಂದು ಹಂತದಲ್ಲೂ ಪ್ರತಿಫಲ ಪಡೆಯಬಹುದು ಎಂದು ನುಡಿದರು.

ನಂತರ ಗಾಯತ್ತಿ ಕುಲಕರ್ಣಿ ಅವರಿಂದ ಸಂಗೀತ ಸೇವೆ ಜರುಗಿತು. ಇವರಿಗೆ ಕೃಪಾ ಕುಲಕರ್ಣಿ, ಕೃಷ್ಣಕುಮಾರ ಕುಲಕರ್ಣಿ ಮತ್ತು ಶ್ರೀಹರಿ ಕ್ಷತ್ರಿಯ ಸಾಥ್ ನೀಡಿದರು.

ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಕೃಷ್ಣ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್, ಕಾರ್ಯದರ್ಶಿ ಅರವಿಂದ ದೇಶಪಾಂಡೆ, ತಾಲೂಕು ಉಪಾಧ್ಯಕ್ಷ ಸಂಜಯ ಪಾಟೀಲ, ಶಂಕರ ಬೆಟಗೇರಿ, ಗುರಣ್ಣ ಪಾಟೀಲಕುಲರ್ಣಿ, ಎಸ್.ಜಿ. ಹೊಂಬಳ, ಕೆ.ಎಸ್. ಕುಲಕರ್ಣಿ, ನಾರಾಯಣಭಟ್ ಪುರಾಣಿಕ, ದೃವ ಬೆಟಗೇರಿ, ಡಾ. ಪ್ರಸನ್ನ ಕುಲಕರ್ಣಿ, ನಾರಾಯಣ ಪಾಟೀಲ, ಅನಂತ ತೇಲಂಗ್, ಆರ್.ಎನ್. ಪಂಚಬಾವಿ, ಆರ್.ಎಚ್. ಕುಲಕರ್ಣಿ(ಸೂರಣಗಿ) ಪವನ್ ಕುಲಕರ್ಣಿ, ಅನಿಲ ಕುಲಕರ್ಣಿ, ಬಿ.ಕೆ. ಕುಲಕರ್ಣಿ, ರಾಜು ಹುಲಮನಿ, ರಮೇಶ ಕುಲಕರ್ಣಿ ಹಾಗೂ ಸಮಾಜ ಬಾಂಧವರು, ವಿಪ್ರ ಮಹಿಳೆಯರು ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌