ವಿಜೃಂಭಣೆಯ ಟ್ಯಾಲೆಂಟ್ ವಿದ್ಯಾಸಂಸ್ಥೆ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ

KannadaprabhaNewsNetwork |  
Published : Dec 06, 2024, 08:56 AM IST
64 | Kannada Prabha

ಸಾರಾಂಶ

ಸ್ವರಚಿತ ಕವನ ವಾಚನ, ಕವಿಗೋಷ್ಠಿ, ಭರತ ನಾಟ್ಯ ಮತ್ತು ಜಾನಪದ ನೃತ್ಯ ಮತ್ತು ಜಾನಪದಗೀತ ಗಾಯನದ ಮೂಲಕ ಹಲವು ಶಾಲೆಗಳ ಮಕ್ಕಳು ನೆರದಿದ್ದವರನ್ನು ರಂಜಿಸಿದರು.

ಕನ್ನಡಪ್ರಭ ವಾರ್ತೆ ಹುಣಸೂರುಪಟ್ಟಣದ ಟ್ಯಾಲೆಂಟ್ ವಿದ್ಯಾಸಂಸ್ಥೆ ಹಾಗೂ ಮಕ್ಕಳ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲಾ ಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಕೆ. ಮಹದೇವ್ ಮತ್ತು ಸಮ್ಮೇಳನಾಧ್ಯಕ್ಷೆ ಗಾನವಿ ಉದ್ಘಾಟಿಸಿದರು.ಪಟ್ಟಣದ ಸಂವಿಧಾನ ವೃತ್ತದಿಂದ ಕನ್ನಡ ರಥದ ಮೆರವಣಿಗೆ ಪ್ರಾರಂಭವಾಗಿ ಕೋಟೆ ವೃತ್ತದ ಮಾರ್ಗವಾಗಿ ಸಾಗಿ ಕಾರ್ಖಾನೆ ರಸ್ತೆ ಮೂಲಕ ಕಲ್ಪತರು ವೃತ್ತದ ಹಾದಿಯಾಗಿ ಸಾವಿರಾರು ವಿದ್ಯಾರ್ಥಿಗಳು, ಜಾನಪದ ಕಲಾತಂಡಗಳಾದ ವೀರಗಾಸೆ, ಹುಲಿವೇಷದೊಂದಿಗೆ ವಿದ್ಯಾರ್ಥಿಗಳು ಕನ್ನಡದ ಜಯಘೋಷಗಳೊಂದಿಗೆ, ಹೆಣ್ಣು ಮಕ್ಕಳು ಕಳಸದೊಂದಿಗೆ ಟ್ಯಾಲೆಂಟ್ ವಿದ್ಯಾಸಂಸ್ಥೆ ಆವರಣಕ್ಕೆ ಆಗಮಿಸಿದರು.ಅತಿಥಿಗಳೊಂದಿಗೆ ಕುವೆಂಪು ಕಲಾ ವೇದಿಕೆಯಲ್ಲಿ ದೀಪ ಹಚ್ಚುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು.ಮುಖ್ಯಅತಿಥಿಯಾಗಿ ಉಡುಪಿ ಮೂಲದ ಭರತನಾಟ್ಯ ಕಲಾವಿದೆ, ಕಾಂತಾರ ಚಿತ್ರದ ನಟಿ ಮಾನಸಿ ಸುಧೀರ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯದ ಮಾತುಗಳನ್ನು ಹೇಳಿದರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಧ್ವಜಾರೋಹಣ ನೆರವೇರಿಸಿದರು.ಅತಿಥಿಗಳಾಗಿ ಎಚ್.ಕೆ. ಮಹದೇವ್, ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ನವೀನ್ ರೈ, ವಿ.ಪಿ. ಶ್ರೀನಾಥ್ ಸಾಯಿನಾಥ, ಆರ್. ಆನಂದ, ಕೆ.ಎಸ್. ರೇಣುಕಾ ಪ್ರಸಾದ್, ಸಾಹಿತಿ ಜೆ. ಮಹದೇವ್ ಭಾಗವಹಿಸಿದ್ದರು.ಸ್ವರಚಿತ ಕವನ ವಾಚನ, ಕವಿಗೋಷ್ಠಿ, ಭರತ ನಾಟ್ಯ ಮತ್ತು ಜಾನಪದ ನೃತ್ಯ ಮತ್ತು ಜಾನಪದಗೀತ ಗಾಯನದ ಮೂಲಕ ಹಲವು ಶಾಲೆಗಳ ಮಕ್ಕಳು ನೆರದಿದ್ದವರನ್ನು ರಂಜಿಸಿದರು.ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಎಚ್.ಎನ್. ಗಿರೀಶ್ ಮತ್ತು ಕಲಾವಿದ ಕುಮಾರ್ ಅರಸೆಗೌಡ ಅವರನ್ನು ಸನ್ಮಾನಿಸಲಾಯಿತು.ಸಂಸ್ಥೆಯ ನಿರ್ದೇಶಕರಾದ ಶ್ರೀನಾಥ್, ಆರ್.ಎನ್. ಮಂಜುನಾಥ್, ಶಾಲಾ ಪ್ರಾಂಶುಪಾಲ ಎಂ.ಟಿ. ಮಂಜುನಾಥ್, ಪ್ರಾಂಶುಪಾಲ ಗುಲ್ನಾಜ್, ಜಗದೀಶ್, ಶಶಿಕಲಾ, ಮಂಜುನಾಥ್, ಸುಧಾಕರ್, ಪ್ರಸನ್ನ, ಮಹದೇವ್, ಕನ್ನಿಕಾ, ಶಾಲಾ ಶಿಕ್ಷಕ, ಶಿಕ್ಷಕಿಯರು ಭಾಗವಹಿಸಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...