ಹೊಳೆಹೊನ್ನೂರು: ಕ್ರೀಡೆಗಳಿಂದ ಹೆಚ್ಚಿನ ಆರೋಗ್ಯ ದೊರೆಯುತ್ತದೆ. ಉತ್ತಮ ಆರೋಗ್ಯಕ್ಕಾಗಿ ಕ್ರೀಡೆ ಅತ್ಯವ್ಯಶಕ ಎಂದು ಕೊಪ್ಪಳದ ನಿವೃತ್ತ ಸಹಾಯಕ ಕಾರ್ಯಕಾರಿ ಅಭಿಯಂತರ ಎಂ ಬಸವರಾಜಪ್ಪ ತಿಳಿಸಿದರು.
ಶ್ರೀ ಅರಬಿಂದೊ ಫೌಂಡೇಶನ್ ಫಾರ್ ಎಜುಕೇಶನ್ ಹಾಗೂ ಜ್ಞಾನದೀಪ ವಿದ್ಯಾ ಸಂಸ್ಥೆಯ ಅಧ್ಯಕ್ಷ ತಲವಾನೆ ಪ್ರಕಾಶ್ ಮಾತನಾಡಿ, ಚಿಣ್ಣರ ಆಟ ನೋಡಲು ಚೆಂದ. ಆಟ ಎನ್ನುವುದು ಕೇವಲ ಮಕ್ಕಳಿಗಷ್ಟೇ ಸೀಮಿತವಾಗಿಲ್ಲ ಮನೆಯಲ್ಲಿರುವ ದೊಡ್ಡವರೂ ಸಹ ಮಕ್ಕಳ ಜೊತೆ ಸೇರಿ ಆಟವಾಡಿ ಅವರಿಗೂ ಸಹಕಾರ ನೀಡಬೇಕು. ಮನುಷ್ಯನಿಗೆ ಆಟಗಳು ಅನೇಕ ಪಾಠಗಳನ್ನು ಕಲಿಸುತ್ತವೆ. ಮಕ್ಕಳು ಆಟವಾಡುವುದರಿಂದ ಸೃಜನಶೀಲತೆ, ಸಾಮಾಜಿಕ ಪ್ರಜ್ಞೆ, ಚಿಂತನಶೀಲತೆಯ ಅರಿವು ಮೂಡುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಶ್ರೀಕಾಂತ್ ಎಂ.ಹೆಗಡೆ ಮಾತನಾಡಿ, ನಮ್ಮ ಶಾಲೆಯು ಕ್ರೀಡೆಗಳಿಗೆ ಅತ್ಯಂತ ಪ್ರಮುಖವಾದ ಸ್ಥಾನವನ್ನು ನೀಡುತ್ತಿದೆ. ವರ್ಷದಿಂದ ವರ್ಷಕ್ಕೆ ವಿಭಿನ್ನವಾದ ಪರಿಕಲ್ಪನೆಗಳೊಂದಿಗೆ ಈ ಕ್ರೀಡಾಕೂಟ ನಡೆದು ಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಈ ದಿನದ ಕ್ರೀಡಾಕೂಟದಲ್ಲಿ ಎಲ್ಲಾ ಮಕ್ಕಳು ತುಂಬಾ ಸಂತೋಷದಿಂದ ಪಾಲ್ಗೊಳ್ಳಬೇಕು. ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.ಜ್ಞಾನದೀಪ ವಿದ್ಯಾ ಸಂಸ್ಥೆಯ ಖಜಾಂಚಿಗಳಾದ ಡಾ.ಕೆ.ಆರ್.ಶ್ರೀಧರ್, ಕಾರ್ಯದರ್ಶಿ ಬಿ.ಎಲ್.ನೀಲಕಂಠ ಮೂರ್ತಿ, ಶೈಕ್ಷಣಿಕ ನಿರ್ದೇಶಕ ಎಚ್.ಎನ್.ಎಸ್.ರಾವ್, ಶಾಲೆಯ ಹಿರಿಯ ಉಪ ಪ್ರಾಂಶುಪಾಲ ಡಾ.ರೆಜಿ ಜೋಸೆಫ್, ವಾಣಿ ಕೃಷ್ಣಪ್ರಸಾದ್, ಶ್ರೀ ಅರಬಿಂದೊ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಎಂ.ಜೋಸೆಫ್ ಉಪಸ್ಥಿತರಿದ್ದರು.