ರಾಣಿಬೆನ್ನೂರು: ದೈಹಿಕ ಮತ್ತು ಮಾನಸಿಕ ಕ್ಷಮತೆಗೆ ಕ್ರೀಡೆಗಳು ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಅಧ್ಯಯನಕ್ಕೆ ನೀಡುವಷ್ಟೇ ಮಹತ್ವವನ್ನು ಕ್ರೀಡೆಗಳಿಗೂ ನೀಡಬೇಕು ಎಂದು ಧಾರವಾಡದ ಜೆಎಸ್ಎಸ್‌ಆರ್‌ಎಸ್ ಹುಕ್ಕೇರಿಕರ್ ಪಪೂ ಮಹಾವಿದ್ಯಾಲಯ ದೈಹಿಕ ಶಿಕ್ಷಣ ನಿರ್ದೇಶಕ ಬಾಹುಬಲಿ ಚೌಗಲಾ ತಿಳಿಸಿದರು.ನಗರದ ಕೆಎಲ್‌ಇ ಸಂಸ್ಥೆಯ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಭಾರತದದ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ರೀಡೆಗಳು ನಮ್ಮನ್ನು ಒಂದು ಸಮುದಾಯವಾಗಿ ಹೇಗೆ ಒಗ್ಗೂಡಿಸುತ್ತವೆ ಎಂದರು. ಪ್ರಾ. ಪ್ರೊ. ನಾರಾಯಣ ನಾಯಕ ಎ. ಅಧ್ಯಕ್ಷತೆ ವಹಿಸಿದ್ದರು. ಛಾಯಾ ಹುಳ್ಳೇರ, ಪ್ರೊ. ಮಂಜಪ್ಪ ಸಣ್ಣಬಸಪ್ಪನವರ, ಅಫ್ರೀನ್ ಕಿತ್ತೂರ, ಚಂದ್ರಕಲಾ ಗಾಳೇರ, ಅಶ್ವಿನಿ ಮೆಹರವಾಡೆ, ಶ್ರೇಯಾ ಬಣ್ಣದ, ಕೌಶಲ್ಯ ರಾಮಪ್ಪನವರ, ಪ್ರೊ. ನಾಗರಾಜ ಗವಿಯಪ್ಪನವರ, ಸುನಿತಾ ಕ್ಯಾತಾರಿ, ಹಾಗೂ ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿ ಉಪಸ್ಥಿತರಿದ್ದರು. ಸೇಂಟ್ ಪಾಲ್ ಶಾಲೆಗೆ ವೀರಾಗ್ರಣಿ ಪ್ರಶಸ್ತಿ
ಬಾಲಕರ ವೈಯಕ್ತಿಕ ಆಟ: 100 ಮೀ. ಓಟ ಯೋಗೇಶ್ ಚಾವಡಿ ಪ್ರಥಮ, ಸುಲೇಮಾನ್ ಚೌಧರಿ ದ್ವಿತೀಯ. 80 ಮೀ. ಅಡೆತಡೆ ಓಟದಲ್ಲಿ ಯೋಗೇಶ್ ಚಾವಡಿ ಪ್ರಥಮ, ಸುಲೇಮಾನ್ ಚೌಧರಿ ದ್ವಿತೀಯ. 400 ಮೀ. ಓಟ ಶಂಕರ ಒಂಟೆತ್ತಿನವರ್ ತೃತೀಯ, ಉದ್ದ ಜಿಗಿತದಲ್ಲಿ ಯೋಗೇಶ್ ಚಾವಡಿ ಪ್ರಥಮ, 4x100 ಮೀ. ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಬಾಲಕರ ಗುಂಪು ಆಟ: ಕಬಡ್ಡಿ ಪ್ರಥಮ ಸ್ಥಾನ, ವಾಲಿಬಾಲ್ ಪ್ರಥಮ ಸ್ಥಾನ, ಥ್ರೋಬಾಲ್ ಪ್ರಥಮ ಸ್ಥಾನ.ಬಾಲಕಿಯರ ವೈಯಕ್ತಿಕ ಆಟ: ಸ್ವಾತಿ ಆರಾಧ್ಯಮಠ ಗುಂಡು ಎಸೆತದಲ್ಲಿ ತೃತೀಯ, ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ.
ಬಾಲಕಿಯರ ಗುಂಪು ಆಟ: ವಾಲಿಬಾಲ್ ಪ್ರಥಮ ಸ್ಥಾನ, ಥ್ರೋಬಾಲ್ ಪ್ರಥಮ ಸ್ಥಾನ ಪಡೆದಿದ್ದಾರೆ.