ದೈಹಿಕ ಕ್ಷಮತೆ, ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿ: ಹರ್ಷಲ್ ಬೊಯರ್

KannadaprabhaNewsNetwork |  
Published : Nov 28, 2026, 12:45 AM IST
 ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ಜಿಲ್ಲಾಧಿಕಾರಿ ಹರ್ಷಲ್ ಬೊಯರ್ ನೀಡಿದರು.  | Kannada Prabha

ಸಾರಾಂಶ

ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ದೈನಂದಿನ ಕರ್ತವ್ಯದ ಒತ್ತಡಗಳ ನಡುವೆ ತಮಗಾಗಿ ಸಮಯ ಮೀಸಲಿಟ್ಟು, ಒಟ್ಟಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ವಾರ್ಷಿಕ ಕ್ರೀಡಾಕೂಟದ ವೇದಿಕೆ ಸಹಕಾರಿಯಾಗಿದೆ.

ಕಾರವಾರ: ಪೊಲೀಸ್ ಇಲಾಖೆಯಲ್ಲಿ ಬಿಡುವಿಲ್ಲದ ಕಾರ್ಯಭಾರವಿದ್ದು, ಜಿಲ್ಲೆಯಲ್ಲಿ ಗಡಿ ಹಾಗೂ ಕರಾವಳಿ ಭಾಗದ ಸೂಕ್ಷ್ಮ ಕರ್ತವ್ಯಗಳ ನಿರ್ವಹಣೆಯ ನಡುವೆ ಪೊಲೀಸ್ ಸಿಬ್ಬಂದಿಗೆ ತಮ್ಮ ದೈಹಿಕ ಆರೋಗ್ಯ ಮತ್ತು ಫಿಟ್ನೆಸ್ ಕಡೆಗೆ ಗಮನಹರಿಸಲು ಪೊಲೀಸ್ ವಾರ್ಷಿಕ ಕ್ರೀಡಾಕೂಟವು ಅತ್ಯುತ್ತಮ ಅವಕಾಶವನ್ನು ಕಲ್ಪಿಸಿದ್ದು, ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಒತ್ತಡ ನಿವಾರಣೆ ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಹರ್ಷಲ್ ಬೊಯರ್ ಹೇಳಿದರು.ಅವರು ಶುಕ್ರವಾರ ಪೊಲೀಸ್ ಪೆರೇಡ್ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ದೈನಂದಿನ ಕರ್ತವ್ಯದ ಒತ್ತಡಗಳ ನಡುವೆ ತಮಗಾಗಿ ಸಮಯ ಮೀಸಲಿಟ್ಟು, ಒಟ್ಟಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ವಾರ್ಷಿಕ ಕ್ರೀಡಾಕೂಟದ ವೇದಿಕೆ ಸಹಕಾರಿಯಾಗಿದೆ. ಈ ಭಾಗದ ಹವಾಮಾನ ಮತ್ತು ಉತ್ತಮ ಕ್ರೀಡಾಂಗಣವು ಕ್ರೀಡಾಕೂಟಕ್ಕೆ ಪೂರಕವಾಗಿದ್ದು, ಸಿಬ್ಬಂದಿ ಒಂದು ತಂಡವಾಗಿ, ಉತ್ಸಾಹ ಮತ್ತು ಹೆಚ್ಚಿನ ಆಸಕ್ತಿಯಿಂದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ತಮ್ಮ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದರು. 2014ನೇ ಬ್ಯಾಚ್‌ನಲ್ಲಿ ತಾನು ಮೊದಲ ಯುಪಿಎಸ್‌ಸಿ ಆಯ್ಕೆಯಲ್ಲಿ ಜಮ್ಮು- ಕಾಶ್ಮೀರ ಕೇಡರ್‌ನ ಪೊಲೀಸ್ ಸೇವೆಗೆ ಸೇರಿ ಎಎಸ್‌ಪಿ ಆಗಿ ಕರ್ತವ್ಯ ನಿರ್ವಹಿಸಿದ್ದನ್ನು ಸ್ಮರಿಸಿದ ಅವರು, ನಂತರ 2016ರಲ್ಲಿ ಐಎಎಸ್‌ಗೆ ಆಯ್ಕೆಯಾದರೂ, ಪೊಲೀಸ್ ಇಲಾಖೆಯಲ್ಲಿ ಪಡೆದ ತರಬೇತಿ ಮತ್ತು ಸಲ್ಲಿಸಿದ ಸೇವೆಯ ನೆನಪುಗಳು ಸದಾ ಹಸಿರಾಗಿವೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಕೈಗಾ ಸಿಐಎಸ್‌ಎಫ್ ಕಮಾಂಡೆಂಟ್ ಅಜಯ್ ಕುಮಾರ್‌ಝಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಇದ್ದರು.

ಕಾರ್ಯಕ್ರಮದಲ್ಲಿ ಕಳೆದ ಬಾರಿಯ ಕ್ರೀಡಾಕೂಟದ ಚಾಂಪಿಯನ್ ನಾಗರಾಜ್ ಹೊರಗುಂದಿ ಕ್ರೀಡಾಜ್ಯೋತಿ ಬೆಳಗಿಸಿದರು. ಬಾಕ್ಸಿಂಗ್ ಕ್ರೀಡೆಯಲ್ಲಿ ಸಾಧನೆ ಮಾಡುತ್ತಿರುವ ಜಿಲ್ಲೆಯ ಕ್ರೀಡಾಪಟುಗಳಾದ ದರ್ಶನ್ ಸಿದ್ದಿ, ಪವನ್ ಸಿದ್ದಿ, ದಿನೇಶ ಸಿದ್ದಿ, ಕುಮಾರ್ ಸೋನಲ್, ಅರ್ಪಿತಾ, ನೇಹಾ ಅವರನ್ನು ಅಭಿನಂದಿಸಲಾಯಿತು.ನ. 27ರಿಂದ 3 ದಿನಗಳ ಕಾಲ ನಡೆಯುವ ಪೊಲೀಸ್ ಕ್ರೀಡಾಕೂಟದಲ್ಲಿ ಡಿಎಆರ್ ತಂಡ, ಕಾರವಾರ ವಿಭಾಗ, ಶಿರಸಿ ವಿಭಾಗ, ಭಟ್ಕಳ ವಿಭಾಗ, ದಾಂಡೇಲಿ ವಿಭಾಗ ಮತ್ತು ಮಹಿಳಾ ಪೊಲೀಸ್ ತಂಡಗಳ ಕ್ರೀಡಾಪಟುಗಳು ಭಾಗವಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನಕದಾಸರ ಸಮಾನತೆ, ಮಾನವೀಯ ಸಂದೇಶ ಇಂದಿಗೂ ಪ್ರಸ್ತುತ: ಜಯರಾಮ್
ಕನಕದಾಸರ ಸಮಾಜಮುಖಿ ಸಂದೇಶಗಳು ಸಾರ್ವಕಾಲಿಕ ಸತ್ಯ-ಶಾಸಕ ಮಾನೆ