ಕೊಳ್ಳೇಗಾಲದ ಎಂಜಿಎಸ್‌ವಿ ಕಾಲೇಜಿನಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತ ತಂಡಕ್ಕೆ ಶಾಸಕ ಎ ಆರ್ ಕೃಷ್ಣಮೂರ್ತಿ ಬಹುಮಾನ ವಿತರಿಸಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ನನ್ನ ಕಾಲೇಜು ಜೀವನದಲ್ಲಿ ನಾನು ಸಹಾ ಉತ್ತಮ ಕ್ರೀಡಾಪಟುವಾಗಿದ್ದೆ, 1978ರಲ್ಲಿ ಮೈಸೂರು ವಿಭಾಗೀಯ ಕ್ರೀಡಾಕೂಟದಲ್ಲಿ ಎಂಜಿಎಸ್‌ವಿ ಕಾಲೇಜಿನ ಆವರಣದಲ್ಲಿ ಶಾಟ್ ಪುಟ್, ಡಿಸ್ಕಸ್ ಥ್ರೋಗಳಲ್ಲಿ ಪಾಲ್ಗೊಂಡಿದ್ದೆ. ಹಾಗಾಗಿ ಕ್ರೀಡೆ ಎಂದರೆ ನನಗೆ ಅಚ್ಚುಮೆಚ್ಚು ಎಂದು ಶಾಸಕ ಎ ಆರ್ ಕೃಷ್ಣಮೂರ್ತಿ ಹೇಳಿದರು.ಅವರು ಪಟ್ಟಣದ ಎಂಜಿಎಸ್ ವಿ ಮೈದಾನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ರೀಡಾ ಅಕಾಡೆಮಿ ಸಹಯೋಗದೊಂದಿಗೆ ನಡೆದ ಕ್ರೀಡಾಕೂಟದಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿ, ಚಾಮರಾಜನಗರ ಜಿಲ್ಲೆಯಲ್ಲಿ ಕೊಳ್ಳೇಗಾಲ ತಾಲೂಕಿನಲ್ಲೆ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹವಿದೆ. ಇದು ನಿರಂತರವಾಗಿ ಸಾಗಿ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುವಂತಾಗಲಿ ಎಂದು ಆಶಿಸಿದರು.ಇಂದಿನ ಕ್ರೀಡಾಕೂಟದಲ್ಲಿ ಹಿರಿಯ ಕ್ರೀಡಾಪಟುಗಳು ಆಸಕ್ತಿಯಿಂದ ಭಾಗವಹಿಸಿದ ಕ್ರೀಡಾಪಟುಗಳಿಗೆ ಹೆಚ್ಚಿನ ತರಬೇತಿ ನೀಡುತ್ತಿರುವುದು ಹೆಮ್ಮೆಯ ವಿಚಾರ, ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಸಾಧ್ಯವಾಗಲಿದೆ. ಸೋಲು ಗೆಲುವು ಸಾಮಾನ್ಯ ಪ್ರತಿಯೊಬ್ಬರು ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದರು. ಈ ಹಿಂದೆ ಇದ್ದ ಶಾಸಕರಾಗಿದ್ದ ಜಯಣ್ಣರವರು ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಆ ಕ್ರೀಡಾಂಗಣ ಪೂರ್ಣಗೊಳ್ಳಲು ನನ್ನ ಅವಧಿಯಲ್ಲಿ ಶ್ರಮಿಸುತ್ತೇನೆ. ಬ್ಯಾಸ್ಕೆಟ್ ಬಾಲ್ ಕೋರ್ಟ್ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಗಾಗಿ ಸರ್ಕಾರದಲ್ಲಿ ಮನವಿ ಮಾಡುವೆ ಎಂದರು. ವಿಜೇತ ತಂಡಗಳ ವಿವರ:ಇಂದಿನ ಪಂದ್ಯಾವಳಿಯಲ್ಲಿ ಒಟ್ಟು ಹತ್ತು ಬಾಯ್ಸ್ ತಂಡ ಹಾಗೂ ಮೂರು ಗರ್ಲ್ಸ್ ತಂಡ ಪಾಲ್ಗೊಂಡಿತ್ತು. ಈ ಪೈಕಿ ಬಾಲಕರ ವಿಭಾಗದಲ್ಲಿ ವಿಸ್ಡಮ್ ಶಾಲೆ ಪ್ರಥಮ ಸ್ಥಾನ, ಆದರ್ಶ ಶಾಲೆ ದ್ವೀತಿಯ ಸ್ಥಾನ ಗಳಿಸಿತು. ವೈಯಕ್ತಿಕ ಪ್ರಶಸ್ತಿಯನ್ನು ಅತ್ಯುತ್ತಮ ಆಟಗಾರರಾಗಿ ಪಾರ್ಥ ಉಪೇಂದ್ರ ಎಸ್.ಡಿ.ಎ ಶಾಲೆ, ಬೆಸ್ಟ್ ಡಿಪೆಂಡರ್ ಸಮೃದ್ದ ಮೋದಿ ಹಾಗೂ ವಿವಿಧ ಕ್ರೀಡೆಗಳಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳು ಪ್ರಶಸ್ತಿ ಹಾಗೂ ಪ್ರಮಾಣ ಪತ್ರವನ್ನು ಶಾಸಕರಿಂದ ಪಡೆದುಕೊಂಡರು. ಬಾಲಕಿಯರ ವಿಭಾಗದಲ್ಲಿ ಕಾರ್ನರ್ ಸ್ಟೋನ್ ಕಾಲೇಜು ಪ್ರಥಮ ಸ್ಥಾನ, ಕೊಳ್ಳೇಗಾಲ ಬಾಸ್ಕೆಟ್ ಬಾಲ್ ಟೀಮ್ ದ್ವೀತಿಯ ಸ್ಥಾನ , ಅದೇ ರೀತಿಯಲ್ಲಿ ಅತ್ಯುತ್ತಮ ಆಟಗಾರ್ತಿಯಾಗಿ ಕಾರ್ನರ್ ಸ್ಟೋನ್ ಕಾಲೇಜು ವಿದ್ಯಾರ್ತಿ ನಿಶಾ, ಬೆಸ್ಟ್ ಡಿಪೆಂಡರ್ ವಿಸ್ಡಮ್ ಅರ್ಪಿತ್ ರವರು ಪ್ರಶಸ್ತಿ, ಪ್ರಮಾಣ ಪತ್ರವನ್ನು ಸ್ವೀಕರಿಸಿದರು.ಈ ವೇಳೆ ಗ್ಯಾರಂಟಿಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಜಿಲ್ಲಾ ಬ್ಯಾಸ್ಕೆಟ್ ಬಾಲ್ ಟೀಂ ಅಧ್ಯಕ್ಷ ಚೇತನ್ ದೊರೆರಾಜು, ಉಪಾಧ್ಯಕ್ಷ ಮಹೇಶ್ ಕುಮಾರ್ , ಕಾರ್ಯದರ್ಶಿ ಸುಮನ್, ನಗರಸಭೆ ಸದಸ್ಯ ಮಂಜುನಾಥ್, ನಾಗರೀಕ ಸಮಿತಿಯ ನಟರಾಜು ಮಾಳಿಗೆ, ಮಾಂಬಳ್ಳಿ ಮೋಹನ್, ಪುಟ್ಟಸ್ವಾಮಿ, ಮಹದೇವ, ಸಿದ್ದಾರ್ಥ್, ಚಿನ್ನಸ್ವಾಮಿ ಮಾಳಿಗೆ, ಸ್ವಾಮಿ ನಂಜಪ್ಪ, ಡಾ.ಸ್ಯಾಮ್ಸನ್, ಮೂರ್ತಿ ಇನ್ನಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.