ಕ್ರೀಡೆಗಳು ಆರೋಗ್ಯಕರ ಜೀವನಕ್ಕೆ ಸಹಕಾರಿ

KannadaprabhaNewsNetwork |  
Published : Dec 03, 2025, 02:00 AM IST
ವಿಜೆಪಿ ೦೧ವಿಜಯಪುರ ಪಟ್ಟಣದ ಚಂದೆನಹಳ್ಳಿ ಗೇಟ್ ಬಳಿ ಇರುವ ಶ್ರೀ ಸಾಯಿ ಜ್ಞಾನಗಂಗಾ ಪದವಿ ಕಾಲೇಜಿನ ಆವರಣದಲ್ಲಿ ಸಂಸತ್ ಕ್ರೀಡಾ ಮಹೋತ್ಸವದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಪಾರಿತೋಷಕ, ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿದ ದೇವನಹಳ್ಳಿಯ ಶ್ರೀ ವೆಂಕಟೇಶ್ವರ ವಾಣಿಜ್ಯ ವಿದ್ಯಾ ಶಾಲೆಯ ಸಂಸ್ಥಾಪಕ ಪ್ರಾಂಶುಪಾಲ ಎನ್.ಪುಟ್ಟರಾಜ್‌ರವರೊಂದಿಗೆ ವಿದ್ಯಾರ್ಥಿಗಳು. | Kannada Prabha

ಸಾರಾಂಶ

ನಾವು ಪ್ರತಿನಿತ್ಯ ವಿವಿಧ ರೀತಿಯ ಕ್ರೀಡಾ ಚಟುವಟಿಕೆ ಗಳಲ್ಲಿ ಭಾಗವಹಿಸುವುದರಿಂದ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ.

ವಿಜಯಪುರ:

ನಾವು ಪ್ರತಿನಿತ್ಯ ವಿವಿಧ ರೀತಿಯ ಕ್ರೀಡಾ ಚಟುವಟಿಕೆ ಗಳಲ್ಲಿ ಭಾಗವಹಿಸುವುದರಿಂದ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ದೇವನಹಳ್ಳಿಯ ಶ್ರೀ ವೆಂಕಟೇಶ್ವರ ವಾಣಿಜ್ಯ ವಿದ್ಯಾ ಶಾಲೆಯ ಸಂಸ್ಥಾಪಕ ಪ್ರಾಂಶುಪಾಲ ಎನ್.ಪುಟ್ಟರಾಜ್ ತಿಳಿಸಿದರು.

ಪಟ್ಟಣದ ಚಂದೆನಹಳ್ಳಿ ಗೇಟ್ ಬಳಿ ಇರುವ ಶ್ರೀ ಸಾಯಿ ಜ್ಞಾನಗಂಗಾ ಪದವಿ ಕಾಲೇಜಿನ ಆವರಣದಲ್ಲಿ ಸಂಸತ್ ಕ್ರೀಡಾ ಮಹೋತ್ಸವದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಪಾರಿತೋಷಕ, ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಮಾತನಾಡಿದರು.

ಶ್ರೀ ಸಾಯಿ ಜ್ಞಾನಗಂಗಾ ಪದವಿ ಕಾಲೇಜಿನ ಪ್ರಾಂಶುಪಾಲ ಎಸ್. ಎಸ್. ಪ್ರದೀಪ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಓದಿನ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗುವುದರಿಂದ ಸೋಲು ಗೆಲುವಿನ ಅರ್ಥದ ಪಾಠವನ್ನು ಕಲಿಯುತ್ತಾರೆ ಮತ್ತು ಸಮಯ ಪ್ರಜ್ಞೆ ಗೆಲುವಿನ ಹಾದಿಯನ್ನು ಹೊಂದುವ ಆಲೋಚನೆಯ ಸ್ಪೂರ್ತಿ ಕ್ರೀಡೆಗಳಿಂದ ಹೊರವೊಮ್ಮುತ್ತದೆ ಎಂದರು.

ಪ್ರಶಸ್ತಿ ಪಡೆದ ವಿಜೇತ ತಂಡಕ್ಕೆ ಶ್ರೀ ಸಾಯಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಬಿ. ಮಂಜುನಾಥ್ ಹಾಗೂ ಆಡಳಿತ ಮಂಡಳಿ, ಪ್ರಾಂಶುಪಾಲರು ಬೋಧಕ ಬೋಧಕೇತರ ವರ್ಗ ಮೊದಲಾದವರು ಅಭಿನಂದಿಸಿಯರು.

ಕಾರ್ಯಕ್ರಮದ ಉಪಸ್ಥಿತಿಯಲ್ಲಿ ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ. ವಿ. ಪ್ರಶಾಂತ, ಉಪನ್ಯಾಸಕ ಕೆ.ಎಂ. ನಾಗರಾಜ್, ಕ್ರೀಡಾ ಪಟುಗಳಾದ ಶಟಲ್ ಬ್ಯಾಡ್ಮಿಂಟನ್ ತಂಡದ ನಾಯಕ ಪುನೀತ್, ಉಪನಾಯಕ ಭರತ್, ನಿಖಿಲ್, ಶ್ರೇಯಸ್, ಚರಣ್ ಹಾಗೂ ಪುನೀತ್ ಮೊದಲಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ