ದುಶ್ಚಟಗಳಿಂದ ದೂರವಿರಲು ಕ್ರೀಡೆ ಸಹಕಾರಿ: ಕುಮಾರ್ ಸುಬ್ಬಯ್ಯ

KannadaprabhaNewsNetwork |  
Published : Jan 05, 2025, 01:32 AM IST
 ಚಿತ್ರ : 4ಎಂಡಿಕೆ1 : ಉದ್ಯಮ ತಜ್ಞ ಕೊಕ್ಕಲೇರ ಕುಮಾರ್ ಸುಬ್ಬಯ್ಯ ಮಾತನಾಡಿದರು.  | Kannada Prabha

ಸಾರಾಂಶ

ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಪಾಲ್ಗೊಳ್ಳುವ ಮೂಲಕ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯ ಸಂರಕ್ಷಿಸಲು ಸಾಧ್ಯ ಎಂದು ಕೊಕ್ಕಲೇರ ಕುಮಾರ್‌ ಸುಬ್ಬಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ದುಶ್ಚಟಗಳಿಂದ ದೂರವಿರಲು ಸಹಕಾರಿಯಾಗಿರುವ ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಪಾಲ್ಗೊಳ್ಳುವ ಮೂಲಕ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವನ್ನು ಸಂರಕ್ಷಿಸಲು ಸಾಧ್ಯ ಎಂದು ಉದ್ಯಮ ತಜ್ಞ ಕೊಕ್ಕಲೇರ ಕುಮಾರ್ ಸುಬ್ಬಯ್ಯ ಅಭಿಪ್ರಾಯಪಟ್ಟಿದ್ದಾರೆ.ನಗರದ ಕೊಡಗು ವಿದ್ಯಾಲಯದ ಕ್ರೀಡಾ ದಿನಾಚರಣೆಯನ್ನು ಕ್ರೀಡಾಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿಯೂ ಕ್ರೀಡೆ ರಹಿತವಾದ ಶಿಕ್ಷಣ ಪ್ರಯೋಜನಕಾರಿಯಾಗದು. ಕ್ರೀಡಾ ತರಬೇತಿಯೊಂದಿಗಿನ ವಿದ್ಯೆಯು ಶಿಕ್ಷಣವನ್ನು ಪರಿಪೂರ್ಣಗೊಳಿಸುತ್ತದೆ ಎಂದರಲ್ಲದೇ, ಹಿರಿಯರು ಹೇಗೆ ವರ್ತಿಸುತ್ತಾರೆ ಎಂಬುದನ್ನೇ ಕಿರಿಯರೂ ಅನುಕರಿಸುವುದರಿಂದಾಗಿ ಹಿರಿಯರ ನಡವಳಿಕೆ ಕಿರಿಯರ ಪಾಲಿಗೆ ಮಾರ್ಗದರ್ಶಿಯಾಗಿರಬೇಕು ಎಂದು ಸಲಹೆ ನೀಡಿದರು. ಕ್ರಿಕೆಟ್, ಹಣ ಮತ್ತು ಖ್ಯಾತಿ ತಂದುಕೊಂಡುವ ಕ್ರೀಡೆಯಾಗಿದ್ದರೂ ಕ್ರಿಕೆಟ್ ನಲ್ಲಿ ಸೀಮಿತ ಅವಕಾಶಗಳಿದೆ, ಹೀಗಾಗಿ ಭಾರತದಲ್ಲಿ ಇರುವ ಇತರ ಕ್ರೀಡೆಗಳಲ್ಲಿಯೂ ಪಾಲ್ಗೊಳ್ಳಲು ಕ್ರೀಡಾವಿದ್ಯಾರ್ಥಿಗಳು ಆಸಕ್ತಿ ತೋರುವ ಮೂಲಕ ಉತ್ತಮ ಕ್ರೀಡಾತಾರೆಗಳಾಗಿ ಹೊರಹೊಮ್ಮಲು ಸಾಧ್ಯವಿದೆ ಎಂದೂ ಅವರು ಅಭಿಪ್ರಾಯಪಟ್ಟರು.

ಪೋಷಕರು, ಶಿಕ್ಷಕರು, ಹಿರಿಯರಿಗೆ ಸದಾ ಗೌರವ ನೀಡಿ ಎಂದು ವಿದ್ಯಾರ್ಥಿ ವೃಂದಕ್ಕೆ ಕಿವಿಮಾತು ಹೇಳಿದ ಕುಮಾರ್ ಸುಬ್ಬಯ್ಯ, ಇವರೆಲ್ಲರ ಹಾರೈಕೆ ಇದ್ದಾಗ ಮಾತ್ರ ಜೀವನದಲ್ಲಿ ಶ್ರೇಯಸ್ಸು ಸಾಧ್ಯ ಎಂಬುದನ್ನು ಮರೆಯಬೇಡಿ ಎಂದರು.

ಭಾರತ ಆರ್ಥಿಕ ಸಂಕಷ್ಟದಲ್ಲಿದ್ದ ಸಂದರ್ಭ ಡಾ. ಮನಮೋಹನ್ ಸಿಂಗ್ ಅವರ ದೂರದೖಷ್ಟಿಯಿಂದಾಗಿ ಭಾರತದ ಆರ್ಥಿಕವಾಗಿ ಚೇತರಿಕೆಯಾಗಲು ಸಹಕಾರಿಯಾಯಿತು ಎಂದು ಮನಮೋಹನ್ ಸಿಂಗ್ ಸ್ಮರಿಸಿದ ಉದ್ಯಮ ತಜ್ಞ ಕುಮಾರ್ ಸುಬ್ಬಯ್ಯ, ಜಗತ್ತಿನಲ್ಲಿಯೇ ಕಾರು ಮತ್ತು ಸ್ಕೂಟರ್ ತಯಾರಿಕೆಯಲ್ಲಿ ಭಾರತ ಅಗ್ರಗಣ್ಯ ದೇಶವಾಗಿ ಸಾಧನೆ ಮಾಡುವಲ್ಲಿ ಮನಮೋಹನ್ ಸಿಂಗ್ ಅವರ ಆಥಿ೯ಕ ಉದಾರೀಕರಣ ನೀತಿಯೇ ಕಾರಣವಾಗಿತ್ತು ಎಂದು ಹೇಳಿದರು. ವಿಶ್ವದಲ್ಲಿಯೇ ಭಾರತವು ಆಥಿ೯ಕ ಸಾಧನೆಯಲ್ಲಿ 5 ನೇ ಸ್ಥಾನ ಪಡೆಯುವಲ್ಲಿ ಡಾ. ಮನಮೋಹನ್ ಸಿಂಗ್ ಅನೇಕ ವರ್ಷಗಳ ಹಿಂದೆ ಜಾರಿಗೆ ತಂದ ಆಥಿ೯ಕ ನೀತಿಯೇ ಕಾರಣ ಎಂದೂ ಕುಮಾರ್ ಸುಬ್ಬಯ್ಯ ವಿಶ್ಲೇಷಿಸಿದರು.

ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ಉಪಾಧ್ಯಕ್ಷೆ ಊವ೯ಶಿ ಮುದ್ದಯ್ಯ ಮಾತನಾಡಿ , ಫೀಲ್ಡ್ ಮಾಷ೯ಲ್ ಕೆ.ಎಂ. ಕಾಯ೯ಪ್ಪ ಅವರ ಕನಸಿನ ಕೂಸಾಗಿ ಪ್ರಾರಂಭವಾದ ಕೊಡಗು ವಿದ್ಯಾಲಯ 40 ವಷ೯ಗಳಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದೆ, ಕೋವಿಡ್ ಲಾಕ್ ಡೌನ್ ದಿನಗಳು, ಪ್ರಾಕೃತ್ತಿಕ ವಿಕೋಪದಂಥ ಸವಾಲುಗಳನ್ನೂ ಸಂಸ್ಥೆಯು ಸಮರ್ಥವಾಗಿ ಎದುರಿಸಿ ಉತ್ತಮ ಶಿಕ್ಷಣ ನೀಡಿದೆ ಎಂದರಲ್ಲದೇ, ವಿದ್ಯಾಥಿ೯ಗಳು ಕಲಿತ ವಿದ್ಯೆಯ ಜತೆಗೇ ಕ್ರೀಡಾ, ಸಾಂಸ್ಕೖತಿಕ ಪ್ರತಿಭೆಗಳನ್ನು ಅನಾವರಣಗೊಳಿಸುವಲ್ಲಿ ಕ್ರೀಡಾದಿನಾಚರಣೆ ಮಹತ್ವ ಪಡೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾಯ೯ಕ್ರಮದಲ್ಲಿ ಕೊಡಗು ವಿದ್ಯಾಲಯದ ಹಾಕಿ ಮತ್ತು ಕ್ರೀಡಾರಂಗದಲ್ಲಿ ರಾಷ್ಟ್ರೀಯ ಸಾಧನೆಗೆ ಕಾರಣವಾಗಿರುವ ಶಾಲೆಯ ಕ್ರೀಡಾ ತರಬೇತುದಾರರಾದ ದೀನಾ, ಪಾವ೯ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶೈಕ್ಷಣಿಕ ಹಾಗೂ ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಕೊಡಗು ವಿದ್ಯಾಲಯದ ಪ್ರಾಂಶುಪಾಲೆ ಕೆ.ಎಸ್. ಸುಮಿತ್ರಾ, ಆಡಳಿತಾಧಿಕಾರಿ ರವಿ ಪಿ, ನಿರ್ದೇಶಕರಾದ ಸಿ.ಎಸ್. ಗುರುದತ್, ಪವಿತ್ರ ಅಪ್ಪಯ್ಯ, ನಿಯತ ದೇವಯ್ಯ ಸೋಮಯ್ಯ, ರಘುಮಾದಪ್ಪ, ಪಿ. ಈ. ಕಾಳಯ್ಯ, ವಿಶೇಷ ಚೇತನ ಮಕ್ಕಳ ಶಾಲಾ ಮುಖ್ಯ ಶಿಕ್ಷಕಿ ಗೀತಾ ಶ್ರೀಧರ್, ಶಾಂತಿ ಶಂಕರ್ ಸೇರಿದಂತೆ ಪ್ರಮುಖರು ವೇದಿಕೆಯಲ್ಲಿದ್ದರು. ಶಿಕ್ಷಕಿ ಅಲೆಮಾಡ ಚಿತ್ರಾ ನಂಜಪ್ಪ, ಸಂಗೀನ್ ಕುಶಾಲಪ್ಪ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ನೂರಾರು ವಿದ್ಯಾರ್ಥಿಗಳಿಂದ ಆಕ಼ರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾಚಟುವಟಿಕೆಗಳು ಗಮನ ಸೆಳೆದವು, ಕೊಡಗು ವಿದ್ಯಾಲಯದ ವಿಶೇಷ ಚೇತನ ಮಕ್ಕಳು ಪ್ರಸ್ತುತ ಪಡಿಸಿದ ಹಂ ಹೋಂಗೇ ಕಾಮಿಯಾಬ್ ..ಏಕ್ ದಿನ್ ಎಂಬ ನೃತ್ಯ ಪ್ರೇಕ್ಷಕರ ಅಪಾರ ಮೆಚ್ಚಗೆಗೆ ಕಾರಣವಾಯಿತು. ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಪಾಲ್ಗೊಂಡಿದ್ದ ಶಾಲೆಯ ಎನ್ .ಸಿ. ಸಿ. ಕೆಡೆಟ್ ರಘುವಂಶಿ ಶಿವಕುಮಾರ್ ನೇತೃತ್ವದಲ್ಲಿ ಜರುಗಿದ ವಿದ್ಯಾರ್ಥಿಗಳ ಪಥಸಂಚಲನ ಆಕರ್ಷಕವಾಗಿತ್ತು. ಅನೂಹ್ಯ ರವಿಶಂಕರ್, ಆದ್ಯ, ದಿಯಾ ಪ್ರಾರ್ಥಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈಯಕ್ತಿಕ ಕಾರಣದಿಂದ ಬೇಸತ್ತು ಕಿರುತೆರೆ ಯುವ ನಟಿ ಆತ್ಮ*ತ್ಯೆ
ಜ.6 ಇಲ್ಲವೇ 9ಕ್ಕೆ ಡಿಕೆಶಿ ಸಿಎಂ 200% ಕನ್ಫರ್ಮ್: ಇಕ್ಬಾಲ್