ಕನ್ನಡಪ್ರಭ ವಾರ್ತೆ ಯಮಕನಮರಡಿ
ಯಮಕನಮರಡಿಯಲ್ಲಿ ಮಹರ್ಷಿ ಕ್ರಿಕೆಟ್ ಕ್ಲಬ್ ವತಿಯಿಂದ ಆಯೋಜಿಸಲಾಗಿರುವ 3 ದಿನಗಳ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾಕೂಟಗಳಿಂದ ನಮ್ಮಲ್ಲಿ ಸ್ಪರ್ಧಾ ಮನೋಭಾವ ಬೆಳೆಯುತ್ತದೆ. ಬೇರೆಯವರ ಕೌಶಲ್ಯತೆ ನಮಗೆ ಗೊತ್ತಾಗುತ್ತದೆ. ನಮ್ಮ ತಪ್ಪುಗಳು ಅರಿವಿಗೆ ಬರುತ್ತವೆ. ಒಟ್ಟಾರೆಯಾಗ ನಮ್ಮ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕ್ರೀಡಾಕೂಟಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಆಕರ್ಷಕ ಬಹುಮಾನ: ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆದ್ದ ತಂಡಗಳಿಗೆ ಪ್ರಥಮವಾಗಿ ಗೆದ್ದ ತಂಡಗಳಿಗೆ ರವೀಂದ್ರ ಜಿಂಡ್ರಾಳಿ ಅವರು ₹25,001 ಮೊತ್ತದ ಬಹುಮಾನ ನೀಡಲಿದ್ದಾರೆ. ದ್ವಿತೀಯ ಬಹುಮಾನವಾಗಿ ₹15,001 ಬಹುಮಾನವನ್ನು ಕುತುಬುದ್ದಿನ್ ಬೇಪಾರಿ, ತೃತೀಯ ಬಹುಮಾನ ₹7001 ಗಳನ್ನು ಶ್ರೀಮಂತ ಪಾಟೀಲ ಮತ್ತು ಶಿವರಾಜ ಮುಂಡಲಿ ಮತ್ತು ₹5001 ಚತುರ್ಥ ಬಹುಮಾನವನ್ನು ಸಿದ್ದಪ್ಪ ಜಿನರಾಳಿ ನೀಡಲಿದ್ದಾರೆ. ಇದಲ್ಲದೆ ವಿವಿಧ 5 ವೈಯಕ್ತಿಕ ಬಹುಮಾನಗಳನ್ನು ಊರಿನ ಜನರು ಕೊಡಲಿದ್ದಾರೆ. ಸಮಾರಂಭದಲ್ಲಿ ಹತ್ತರಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಮೀರ್ ಬೇಪಾರಿ, ತಾಲೂಕು ಪಂಚಾಯತಿ ಮಾಜಿ ಸದಸ್ಯ ದಸ್ತಗೀರ ಬಸ್ಸಾಪೂರಿ, ಮುಖಂಡರಾದ ಆನಂದ ಮಗದುಮ್ಮ, ರಾಜು ಹೀರೆಮಠ, ಪರುಶರಾಮ ಪಾಟೀಲ ಹಾಗೂ ಮಹರ್ಷಿ ಕ್ರಿಕೆಟ್ ಕ್ಲಬ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.