ಯುವಕರು ಒಗ್ಗೂಡಲು ಕ್ರೀಡೆ ಸಹಕಾರಿ

KannadaprabhaNewsNetwork |  
Published : Sep 16, 2026, 02:45 AM IST
ಮುಸ್ಲಿಮ ಮನೆಯಲ್ಲಿ ಪ್ರತಿಷ್ಠಾಪನೆ | Kannada Prabha

ಸಾರಾಂಶ

ಯುವಕರು ಒಗ್ಗೂಡಲು ಕ್ರೀಡೆ ಸಹಕಾರಿಯಾಗಿದೆ. ಗ್ರಾಮೀಣ ಭಾಗಗಳಲ್ಲಿ ಇನ್ನಷ್ಟು ಕ್ರೀಡಾಕೂಟಗಳು ಅಯೋಜಿಸುವಂತಾಗಬೇಕು. ಟೀಂ ತಾಕೇರಿ ತಂಡ ಕಳೆದ ಮೂರು ವರ್ಷಗಳಿಂದ ಅಂತಹ ಕೆಲಸ ಮಾಡಿಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮ ಮಾಡುವಂತಾಗಲಿ ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದರು.

ಸೋಮವಾರಪೇಟೆ : ಯುವಕರು ಒಗ್ಗೂಡಲು ಕ್ರೀಡೆ ಸಹಕಾರಿಯಾಗಿದೆ. ಗ್ರಾಮೀಣ ಭಾಗಗಳಲ್ಲಿ ಇನ್ನಷ್ಟು ಕ್ರೀಡಾಕೂಟಗಳು ಅಯೋಜಿಸುವಂತಾಗಬೇಕು. ಟೀಂ ತಾಕೇರಿ ತಂಡ ಕಳೆದ ಮೂರು ವರ್ಷಗಳಿಂದ ಅಂತಹ ಕೆಲಸ ಮಾಡಿಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮ ಮಾಡುವಂತಾಗಲಿ ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದರು.ಅವರು ತಾಕೇರಿ ಗ್ರಾಮದ ಟೀಂ ತಾಕೇರಿ ವತಿಯಿಂದ ಭಾನುವಾರ ನಡೆದ ಮೂರನೇ ವರ್ಷದ ಪಂಚಾಯಿತಿ ಮಟ್ಟದ ಫುಟ್‌ಬಾಲ್ ಕ್ರೀಡಾಕೂಟದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಉದ್ಯಮಿ ಎಡಿಕೇರಿ ಪ್ರಸನ್ನ ಮಾತನಾಡಿ, ಹಳ್ಳಿಗಾಡಿನಲ್ಲಿ ಎಲ್ಲರೂ ಒಗ್ಗೂಡುವ ಸಲುವಾಗಿ ಈ ರೀತಿಯ ಕ್ರೀಡಾಕೂಟ ಆಯೋಜನೆ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

ತಾಕೇರಿ ಗ್ರಾಮದ ಅಧ್ಯಕ್ಷ ಎಸ್.ಪಿ. ಪೊನ್ನಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಮಿಥುನ್ ಹಾನಗಲ್ ಹಾಗೂ ಟೀಂ ತಾಕೇರಿಯ ಸದಸ್ಯರು ಪಾಲ್ಗೊಂಡಿದ್ದರು.ತಾಕೇರಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೧೦ ಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿದ ಶಿಕ್ಷಕ ರಮೇಶ್ ಹಾಗೂ ವನಜಾ ಅವರಿಗೆ ಟೀಂ ತಾಕೇರಿ ವತಿಯಿಂದ ಗೌರವ ಸಲ್ಲಿಸಲಾಯಿತು.ಪಂದ್ಯಾಟದಲ್ಲಿ ಮಧು ತಂಡ ಪ್ರಥಮ ಸ್ಥಾನಗಳಿಸಿ ಚಾಂಪಿಯನ್ ಆಗಿ ಪ್ರಥಮ ಬಹುಮಾನವಾಗಿ ೪೦ ಕೆ.ಜಿ ಟಗರು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.ಕೀರ್ತನ್ ತಂಡ ದ್ವಿತೀಯ ಸ್ಥಾನಗಳಿಸಿ, ೩೦ ಕೆ.ಜಿ. ಕುರಿ ಹಾಗೂ ಟ್ರೋಫಿ ಪಡೆಯಿತು. ಉತ್ತಮ ಆಟಗಾರರಿಗೆ ನಾಟಿ ಕೋಳಿ ಬಹುಮಾನವಾಗಿ ನೀಡಲಾಯಿತು. ಅತಿ ಹೆಚ್ಚು ಗೋಲ್ ಗಳಿಸಿದ ಮಲ್ಲಿಜಿರ ಪ್ರವೀಣ್, ಉತ್ತಮ ಆಲ್ ರೌಂಡರ್ ಮಧು, ಬೆಸ್ಟ್ ಪ್ಲೆಯರ್ ಕೀರ್ತನ್, ಎಮರ್ಜಿಂಗ್ ಪ್ಲೆಯರ್ ಮೇಘನ್ ಅವರನ್ನು ಗೌರವಿಸಲಾಯಿತು. ಪಂದ್ಯಾಟದಲ್ಲಿ ೮ ತಂಡಗಳು ಭಾಗವಹಿಸಿದ್ದವು.

ತೀರ್ಪುಗಾರರಾಗಿ ಪವನ್ ಹಾಗೂ ಅಮೃತ್ ತಾಕೇರಿ ಕಾರ್ಯ ನಿರ್ವಹಿಸಿದರು.

೧೫ಎಸ್‌ಪಿಟಿ೦೪: ಸೋಮವಾರಪೇಟೆ ಸಮೀಪದ ತಾಕೇರಿ ಗ್ರಾಮದ ಟೀಂ ತಾಕೇರಿ ವತಿಯಿಂದ ನಡೆದ ಪಂಚಾಯಿತಿ ಮಟ್ಟದ ಫುಟ್‌ಬಾಲ್ ಪಂದ್ಯಾಟದಲ್ಲಿ ಮಧು ತಂಡ ಪ್ರಥಮ ಸ್ಥಾನಗಳಿಸಿ ಚಾಂಪಿಯನ್ ಆಗಿ ಪ್ರಥಮ ಬಹುಮಾನವಾಗಿ ೪೦ ಕೆ.ಜಿ ಟಗರು ಹಾಗೂ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.೧೫ಎಸ್‌ಪಿಟಿ೦೫: ಸೋಮವಾರಪೇಟೆ ಸಮೀಪದ ತಾಕೇರಿ ಗ್ರಾಮದ ಟೀಂ ತಾಕೇರಿ ವತಿಯಿಂದ ನಡೆದ ಪಂಚಾಯಿತಿ ಮಟ್ಟದ ಫುಟ್‌ಬಾಲ್ ಪಂದ್ಯಾಟದಲ್ಲಿ ಕೀರ್ತನ್ ತಂಡ ದ್ವಿತೀಯ ಸ್ಥಾನಗಳಿಸಿ, ೩೦ ಕೆ.ಜಿ. ಕುರಿ ಹಾಗೂ ಟ್ರೋಫಿ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೀಕರ ಅಗ್ನಿ ದುರಂತ: ಒಂದೇ ಕುಟುಂಬದ ನಾಲ್ವರು ಸಜೀವ ದಹನ
ಬರಘೋಷಣೆಗೆ ಆಗ್ರಹಿಸಿ ೨೧ರಂದು ತಾಳಿಕೋಟೆ ಬಂದ್‌