ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿ:ಕಮಾಜಿ

KannadaprabhaNewsNetwork |  
Published : Aug 02, 2024, 12:47 AM IST
ಮುಳಗುಂದ ಕ್ಲಸ್ಟರ್‌ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದ ಧ್ವಜಾರೋಹಣವನ್ನ ರಾಮಣ್ಣ ಕಮಾಜಿ ನೆರವೇರಿಸಿದರು. | Kannada Prabha

ಸಾರಾಂಶ

ಕ್ರೀಡೆಯಲ್ಲಿ ಯಶಸ್ಸು ದೊರೆಯಬೇಕಾದರೆ ಸತತ ಪರಿಶ್ರಮಬೇಕು. ಕಲಿಕೆಯಲ್ಲಿ ಓದುವದೊಂದೆ ಅಲ್ಲ ಓದಿನಂತೆ ಕ್ರೀಡೆಗೂ ಹೆಚ್ಚಿನ ಆಸಕ್ತಿ ವಹಿಸಬೇಕು

ಮುಳಗುಂದ: ದೈಹಿಕ, ಮಾನಸಿಕ ಸದೃಢರಾಗಿರಲು, ಆರೋಗ್ಯ ವೃದ್ಧಿಸಲು ಕ್ರೀಡೆ ಸಹಕಾರಿಯಾಗಿದೆ ಎಂದು ರಾಮಣ್ಣ ಕಮಾಜಿ ಹೇಳಿದರು.

ಅವರು ಪಟ್ಟಣದ ಎಸ್‌.ಜೆ.ಜೆ.ಎಂ ಸಂಯುಕ್ತ ಪಪೂ ಮಹಾವಿದ್ಯಾಲಯದ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಗದಗ ಗ್ರಾಮೀಣ ವಲಯ, ಪಪಂ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 2ರ ಸಂಯುಕ್ತಾಶ್ರಯದಲ್ಲಿ ನಡೆದ ಮುಳಗುಂದ ಕ್ಲಸ್ಟರ್‌ ಮಟ್ಟದ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕ್ರೀಡೆಯಲ್ಲಿ ಯಶಸ್ಸು ದೊರೆಯಬೇಕಾದರೆ ಸತತ ಪರಿಶ್ರಮಬೇಕು. ಕಲಿಕೆಯಲ್ಲಿ ಓದುವದೊಂದೆ ಅಲ್ಲ ಓದಿನಂತೆ ಕ್ರೀಡೆಗೂ ಹೆಚ್ಚಿನ ಆಸಕ್ತಿ ವಹಿಸಬೇಕು. ಮಕ್ಕಳು ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಕ್ಲಸ್ಟರ್‌ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮವಾಗಿ ಆಡಿ,ತಾಲೂಕು, ಜಿಲ್ಲಾ, ರಾಜ್ಯ, ಅಂತಾರಾಷ್ಟ್ರಮಟದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದರು.

ಈ ವೇಳೆ ಪಪಂ ಸದಸ್ಯ ಷಣ್ಮುಖಪ್ಪ ಬಡ್ನಿ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎಸ್‌.ಆರ್‌. ಬಂಡಿ ಹಾಗೂ ಇತರರು ಮಾತನಾಡಿದರು.

ಬಾ.ಲೀ.ಮ.ಶಿ.ಶಿ ಸಮಿತಿ ಅಧ್ಯಕ್ಷ ಎಂ.ಡಿ. ಬಟ್ಟೂರ, ಪಪಂ ಸದಸ್ಯರಾದ ವಿಜಯ ನೀಲಗುಂದ, ಮಹಾಂತೇಶ ನೀಲಗುಂದ, ಗಂಗಪ್ಪ ಸುಂಕಾಪುರ, ಎಸ್‌ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಜಿಡ್ಡಿ, ಬುದ್ದಪ್ಪ ಮಾಡೊಳ್ಳಿ, ಕುಬೇರಪ್ಪ ಗಡಾದ, ಹುಸೇನ ಕಲೆಗಾರ ಹಾಗೂ ಮುಳಗುಂದ ಕ್ಲಸ್ಟರ್‌ ಮಟ್ಟದ ಶಾಲೆಗಳ ಶಿಕ್ಷಕರು, ದೈಹಿಕ ಶಿಕ್ಷಕರು ಹಾಗೂ ಮಕ್ಕಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!