ದೈಹಿಕ, ಮಾನಸಿಕ ಬಲ ಹೆಚ್ಚಿಸಲು ಕ್ರೀಡೆ ಸಹಕಾರಿ

KannadaprabhaNewsNetwork |  
Published : Dec 14, 2025, 02:15 AM IST
ಮಧುಗಿರಿಯ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬೆಂಗಳೂರು ವಿಭಾಗ  ಮತ್ತು ರಾಜ್ಯ ಮಟ್ಟದ ಥ್ರೋಬಾಲ್ ಪಂದ್ಯಾವಳಿ ಕ್ರೀಡಾಜ್ಯೋತಿಯನ್ನು ಎಂಎಲ್ಸಿ ಆರ್‌. ರಾಜೇಂದ್ರ ರಾಜಣ್ಣ ಸ್ವೀಕರಿಸಿದರು. | Kannada Prabha

ಸಾರಾಂಶ

ಕ್ರೀಡೆಗಳು ನಮ್ಮ ಜೀವನದ ಅವಿಭಾಜ್ಯ ಅಂಗ, ಕ್ರೀಡೆಗಳಿಂದದೈಹಿಕ ಬಲ ಹೆಚ್ಚಿಸುವಂತೆಯೇ ಮಾನಸಿಕ ಉತ್ಸಾಹ, ಸ್ಪರ್ಧಾತ್ಮಕ ಮನೋಭಾವ ಮತ್ತು ಪರಸ್ಪರರಲ್ಲಿ ಸ್ನೇಹ , ಪ್ರೀತಿ,ವಿಶ್ವಾಸ ಭಾವವನ್ನು ಮೂಡಿಸುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ ಆರ್. ರಾಜೇಂದ್ರ ರಾಜಣ್ಣ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಕ್ರೀಡೆಗಳು ನಮ್ಮ ಜೀವನದ ಅವಿಭಾಜ್ಯ ಅಂಗ, ಕ್ರೀಡೆಗಳಿಂದದೈಹಿಕ ಬಲ ಹೆಚ್ಚಿಸುವಂತೆಯೇ ಮಾನಸಿಕ ಉತ್ಸಾಹ, ಸ್ಪರ್ಧಾತ್ಮಕ ಮನೋಭಾವ ಮತ್ತು ಪರಸ್ಪರರಲ್ಲಿ ಸ್ನೇಹ , ಪ್ರೀತಿ,ವಿಶ್ವಾಸ ಭಾವವನ್ನು ಮೂಡಿಸುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ ಆರ್. ರಾಜೇಂದ್ರ ರಾಜಣ್ಣ ಅಭಿಪ್ರಾಯಪಟ್ಟರು.

ಶನಿವಾರ ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿ ಮಧುಗಿರಿ ಶೈಕ್ಷಣಿಕ ಜಿಲ್ಲೆ, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಧುಗಿರಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ಬೆಂಗಳೂರು ವಿಭಾಗ ಮತ್ತು ರಾಜ್ಯ ಮಟ್ಟದ ಥ್ರೋಬಾಲ್ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಜ್ಯೋತಿ ಸ್ವೀಕರಿಸಿ ಅವರು ಮಾತನಾಡಿದರು.

ಮಕ್ಕಳು ಶ್ರದ್ಧಾ ಭಕ್ತಿಯಿಂದ ಓದುವ ಜೊತೆಗ ಆಟ ಆಡುತ್ತಾ ಕಲಿತು, ಕಲಿಯತ್ತಾ ಆಟ ಆಡಿರಿ. ಕ್ರೀಡೆ ಬದುಕಿನ ಬೇರ್ಪಡಿಸಲಾಗದ ಚಟುವಟಿಕೆ. ಮಧುಗಿರಿ ಬರಗಾಲ ಪೀಡಿತ ಪ್ರದೇಶವಾಗಿದ್ದು, ಯಾರು ಸೋಮಾರಿಗಳಾಗದೆ ಸದಾ ತಂತಮ್ಮ ಕರ್ತವ್ಯಗಳಲ್ಲಿ ನಿರತರಾಗಿ ಸಮಾಜದ ಏಳಿಗೆ ಮತ್ತು ದೇಶದ ಪ್ರಗತಿಗೆ ಪ್ರೋತ್ಸಾಹವಿರಬೇಕು. ಪಠ್ಯಪುಸ್ತಕಗಳೊಂದಿಗೆ ಪಠ್ಯೇತರ ಕಾರ್ಯ ಟಚುವಟಿಕೆಗಳಲ್ಲೂ ತಮ್ಮ ಆಸಕ್ತಿ ಬೆಳಸಿ ಕೊಂಡು ಜಾಣರಾಗಿ .ಸೋಲು -ಗೆಲುವನ್ನು ಕ್ರೀಡಾ ಪಟುಗಳು ಸಮಾನ ಸ್ವೀಕಾರ ಆರೋಗ್ಯಕರವಾಗಿರಲಿ ತೀರ್ಪುಗಾರರು ಪ್ರತಿಭಾ ವಂತರನ್ನು ಪ್ರೋತ್ಸಾಹಿಸಿ ಕೊಡುವ ಉತ್ತೇಜನ ಕ್ರೀಡಾಳುಗಳಿಗೆ ಸ್ಪೂರ್ತಿಯಾಗಬೇಕು ಎಂದರು.

ಮಧುಗಿರಿ ಜಿಲ್ಲೆಯಾಗುವ ಎಲ್ಲ ಲಕ್ಷಣಗಳನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಆಕರ್ಷಣಿಯ ಮತ್ತು ಪ್ರವಾಸಿ ಸ್ಥಳವಾಗಿ ಜನಮನ್ನಣೆ ಗಳಿಸಲಿದೆ. ಈ ಕ್ರೀಡಾಂಗಣವನ್ನು ಸುಸ್ಸಜ್ಜಿತ ಕ್ರೀಡಾಂಗಣವನ್ನಾಗಿ ಕಟ್ಟಲು ಇಂದು ಗುದ್ದಲಿ ಪೂಡೆ ನೆರವೇರಿಸಿದ್ದೇವೆ. ಮಧುಗಿರಿ ಇತಿಹಾಸ ಪ್ರಸಿದ್ಧ ಏಕಶಿಲಾ ಗಿರಿ ವಿಶ್ವದಲ್ಲಿಯೇ ಗುರುತಿಸಲ್ಪಟ್ಟಿದೆ.ಮಕ್ಕಳು ಶಿಕ್ಷಣ ಪಡೆದು ಉನ್ನತ ಮಟ್ಟಕ್ಕೇರುವ ಮೂಲಕ ಪೋಷಕರಿಗೆ, ಗುರು- ಹಿರಿಯರಿಗೆ ಹುಟ್ಟೂರಿಗೆ ಕೀರ್ತಿ ಗೌರವ ತರಬೇಕು ಎಂದರು. ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಮಾತನಾಡಿ, ಥ್ರೋಬಾಲ್ ಪಂದ್ಯಾವಳಿಗಳು ನಮ್ಮ ಶೈಕ್ಷಣಿಕ ಜಿಲ್ಲೆಯಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ. ಎಂಎಲ್‌ಸಿ ಆರ್.ರಾಜೇಂದ್ರ ಅವರ ಪರಿಶ್ರಮದಿಂದ ಈ ಕ್ರೀಡಾಂಗಣ ಮೇಲ್ದರ್ಜೆಗೇರಿಸಲಿದ್ದು, ವ್ಯವಸ್ಥಿತ ಕ್ರೀಡಾಂಗಣವಾಗಿ ರೂಪಗೊಳ್ಳಲಿದೆ. ಮಕ್ಕಳು ಏಕಶಿಲಾ ಬೆಟ್ಟವನ್ನು ಚಾರಣ ಮಾಡಿ ಆನಂದಿಸಿ ಎಂದರು.

ಪ್ರಾಸ್ತಾವಿಕ ಭಾಷಣ ಮಾಡಿದ ಡಿಡಿಪಿಐ ಮಾಧವರೆಡ್ಡಿ ಮಾತನಾಡಿ,11 ಜಿಲ್ಲೆಗಳಿಂದ ಕ್ರೀಡಾ ಪಟುಗಳು ಬಂದಿದ್ದು, ಯಾವುದೇ ಭೇದ ಭಾವವಿಲ್ಲದೆ ಮಕ್ಕಳು ಉತ್ತಮ ಪ್ರದರ್ಶನ ನೀಡಿ ಎಂದರು.

ಸಮಾರಂಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದಿ ಎನ್.ಗಂಗಣ್ಣ, ಎಂ.ಕೆ. ನಂಜುಂಟರಾಜು, ಬಿಇಓ ಕೆ.ಎನ್‌. ಹನುಮಂತರಾಯಪ್ಪ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ರಂಗಪ್ಪ, ಇಓ ಲಕ್ಷ್ಮಣ್, ತಾ.ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ಸಂಜಯ್, ವಲಯ ಅರಣ್ಯಾಧಿಕಾರಿ ಸುರೇಶ್, ಪುರಸಭೆ ಮುಖ್ಯಾಧಿಕಾರಿ ಸುರೇಶ್, ಎಸ್.ವಿ.ರಾಮಚಂದ್ರಪ್ಪ, ಶಾಲೆಯ ವಿವಿಧ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳಾದ ಚನ್ನಿಗರಾಮಯ್ಯ, ರಂಗಧಾಮಯ್ಯ ಹಾಗೂ ದೈಹಿಕ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ