ಯಲಬುರ್ಗಾ: ದೈಹಿಕ ಮತ್ತು ಮಾನಸಿಕ ಆರೋಗ್ಯ ಸದೃಢತೆಗೆ ಕ್ರೀಡೆ ಸಹಕಾರಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಜೆ. ರಂಗಸ್ವಾಮಿ ಹೇಳಿದರು.
ಸಿವಿಲ್ ನ್ಯಾಯಾಧೀಶ ಸಂಜೀವಕುಮಾರ ಪಚ್ಚಪೋರೆ ಮಾತನಾಡಿ, ನ್ಯಾಯಾಲಯದಲ್ಲಿ ವಾದ, ಪ್ರತಿವಾದಗಳಲ್ಲಿ ನಿರತರಾಗುವ ವಕೀಲರಿಗೆ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಿ ಮಾನಸಿಕ ಒತ್ತಡ ಹತೋಟಿಗೆ ತರಲು ಮುಂದಾಗಿರುವುದು ಆರೋಗ್ಯಕರ ಬೆಳವಣಿಗೆ ಎಂದರು.
ವಕೀಲರ ಸಂಘದ ತಾಲೂಕಾಧ್ಯಕ್ಷ ಸುಭಾಷ್ ಹೊಂಬಳ ಅಧ್ಯಕ್ಷತೆ ವಹಿಸಿದ್ದರು.ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್, ಸಹಾಯಕ ಸರ್ಕಾರಿ ಅಭಿಯೋಜಕ ರವಿ ಹುಣಸಿಮರದ, ಹಿರಿಯ ವಕೀಲರಾದ ಪ್ರಕಾಶ ಬೇಲೇರಿ, ಎಚ್.ಎಚ್. ಹಿರೇಮನಿ, ಎಸ್.ಎ. ವಾದಿ, ಯು.ಎಸ್. ಮೆಣಸಗೇರಿ, ಪ್ರಕಾಶ ಬೇಲೇರಿ, ಎಂ.ಎಸ್. ನಾಯ್ಕರ, ಆರ್.ಜಿ. ನಿಂಗೋಜಿ, ಡಿ.ಎಚ್. ಪೊಲೀಸ್ ಪಾಟೀಲ್, ಎ.ಎಂ. ಪಾಟೀಲ್, ಆರ್.ಜಿ. ಕುಷ್ಟಗಿಶೆಟ್ಟರ್, ಐ.ಬಿ. ಕೋಳೂರ, ಎಸ್.ಎನ್. ಶ್ಯಾಗೋಟಿ, ಎಸ್.ಸಿ. ಗದಗ, ಐ.ಆರ್. ಕೆಂಚಮ್ಮನವರ, ನ್ಯಾಯಾಲಯ ಸಿಬ್ಬಂದಿ ವಿನಾಯಕ ಇದ್ದರು.