-ಕ್ರಿಕೆಟ್ ಪಂದ್ಯಾವಳಿಗೆ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಬಸ್ಸುಗೌಡ ಬಿಳ್ಹಾರ್ ಚಾಲನೆ
-----ಕನ್ನಡಪ್ರಭ ವಾರ್ತೆ ವಡಗೇರಾ
ಪ್ರತಿಯೊಬ್ಬರು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ, ಮಾನಸಿಕವಾಗಿ ಆರೋಗ್ಯವೃದ್ಧಿಯಾಗುತ್ತದೆ ಎಂದು ಕಾಂಗ್ರೆಸ್ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸ್ಸುಗೌಡ ಬಿಳ್ಹಾರ್ ಹೇಳಿದರು.ತಾಲೂಕಿನ ಗೊನಾಲ ಗ್ರಾಮದಲ್ಲಿ ದುರ್ಗಾದೇವಿಯ ಜಾತ್ರಾ ಮಹೋತ್ಸವ ಸಂಪನ್ನ ಕಾರ್ಯಕ್ರಮ ಅಂಗವಾಗಿ ನಡೆದ ಕ್ರಿಕೆಟ್ ಪ್ರಿಮಿಯರ್ ಲೀಗ್ ಸೀಜನ್-4ರ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡಾ ಇಲಾಖೆಯ ಅಧಿಕಾರಿಗಳು ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಅವಕಾಶ ನೀಡವುದರ ಜೊತೆಗೆ ಸರಿಯಾದ ತರಬೇತಿ ನೀಡುವಲ್ಲಿ ಅವರು ಮುಂದಾಗಬೇಕಿದೆ. ಗ್ರಾಮೀಣ ಕ್ರೀಡಾಪಟುಗಳೇ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತಮವಾಗಿ ಆಟಗಳು ಆಡುವ ಮೂಲಕ ದೇಶ ಮತ್ತು ರಾಜ್ಯ ಹಾಗೂ ತಮ್ಮ ಗ್ರಾಮಕ್ಕೂ ಕೀರ್ತಿ ತರುತ್ತಿದ್ದಾರೆ. ನಾನು ಕ್ರೀಡಾಪಟುಗಳಿಗೆ ಸದಾ ಬೆಂಬಲವಾಗಿ ಇರುತ್ತೇನೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ಗ್ರಾಮೀಣ ಕ್ರೀಡಾಪಟುಗಳ ಅನುಕೂಲಕ್ಕಾಗಿ ರಾಜ್ಯ ಬಜೆಟ್ ನಲ್ಲಿ ಶಹಾಪುರದಲ್ಲಿ ಕ್ರೀಡಾ ವಸತಿ ನಿಲಯ ಸ್ಥಾಪನೆಗೆ 10 ಕೋಟಿ ರು.ಗಳು ಮಂಜೂರು ಮಾಡಿಸಿದ್ದು, ನಾನು ಈ ಸಮಯದಲ್ಲಿ ಕ್ರೀಡಾಪಟುಗಳ ಪರವಾಗಿ ಅವರಿಗೆ ಅಭಿನಂದನೆಗಳು ಸಲ್ಲಿಸಿದ ಅವರು, ಇದರಿಂದ ಜಿಲ್ಲೆಯ ಕ್ರೀಡಾಪಟುಗಳಿಗೆ ತುಂಬಾ ಅನುಕೂಲವಾಗುತ್ತದೆ ಎಂದರು.
ದುರ್ಗಾದೇವಿ ದೇವಸ್ಥಾನದ ಅರ್ಚಕರಾದ ಮರಿಸ್ವಾಮಿ ಪೂಜಾರಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಚಂದ್ರಶೇಖರ್ ಗೌಡ ಪೊಲೀಸ್ ಪಾಟೀಲ್ ಅವರು ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಶಿವಪೂರ, ಸಂದೀಪರಡ್ಡಿ ಮಾಲಿ ಪಾಟೀಲ್, ಬಾಬುಗೌಡ ಮಾಚನೂರ, ಶ್ರೀನಿವಾಸ್ ಕಲಾಲ್, ಖಾಜಾ ಹುಸೇನಿ, ಮರೆಣ್ಣ ಹಂಪಯ್ಯನೋರ್, ರಮೇಶ್, ದೇವಪ್ಪ ಬಡಿಗೇರ , ಶಾಮ್ಶಾಶಾನ್ ಕುರ್ಕಳ್ಳಿ ಉಸ್ಮಾನ್, ಸಣ್ಣ ಮರೇಣ್ಣ ಪೂಜಾರಿ, ಕರಣಕುಮಾರ ಪೂಜಾರಿ, ದುರ್ಗಪ್ಪ ಪೂಜಾರಿ, ಬಾಬು, ರಾಮಣ್ಣ ಮಾಗೇರಿ ಇದ್ದರು.
-------ಫೋಟೊ: ವಡಗೇರಾ ತಾಲೂಕಿನ ಗೊನಾಲ ಗ್ರಾಮದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಗೆ ಕಾಂಗ್ರೆಸ್ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸ್ಸುಗೌಡ ಬಿಳ್ಹಾರ್ ಚಾಲನೆ ನೀಡಿ ಮಾತನಾಡಿದರು.
17ವೈಡಿಆರ್13