ನೆಲಮಂಗಲ: ಕ್ರೀಡೆ ಮತ್ತು ಸಂಗೀತ ಮಾನಸಿಕ ಒತ್ತಡ ನೀಗಿಸುವ ಸಾಧನಗಳು. ಆದ್ದರಿಂದ ಪ್ರತಿನಿತ್ಯ ಯಾವುದಾದರೂ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಕೇಶವಮೂರ್ತಿ ಹೇಳಿದರು.
ಪ್ರದಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ದೇವರಾಜು ಭುಟ್ಟೆ ಮಾತನಾಡಿ, ತಾಲೂಕಿನ ವಕೀಲರ ಸಂಘ ಹಾಗೂ ನ್ಯಾಯಪೀಠ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ವಕೀಲರ ಸಂಘದ ಕ್ರೀಡಾಕೂಟದಲ್ಲಿ ನ್ಯಾಯಾಧೀಶರು ಮತ್ತು ಸಿಬ್ಬಂದಿ ಭಾಗವಹಿಸಲು ಅವಕಾಶ ಕಲ್ಪಿಸಿದ್ದು ನಮ್ಮೆಲ್ಲರಿಗೂ ಸಂತವಾಗಿದೆ. ಸಂಘದಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಬೇಸಿಗೆ ಬಿಸಿಲು ಹೆಚ್ಚಾಗಿದ್ದು ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ವಕೀಲರ ಸಂಘದ ಉಪಾಧ್ಯಕ್ಷ ಬಿ.ಟಿ.ಮೋಹನ್‌ಕುಮಾರ್ ಮಾತನಾಡಿ, ಸಂಘದ ನೂತನ ಆಡಳಿತ ಮಂಡಳಿಯ ಸಹಕಾರದಿಂದಾಗಿ ಈ ಬಾರಿ ಕ್ರೀಡಾಕೂಟ ಪ್ರಾರಂಭಿಸಿದ್ದು, ವಕೀಲ ಮಿತ್ರರಲ್ಲಿ ಸಂತಸವನ್ನುಂಟು ಮಾಡಿದೆ. ಸಂಘದಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಸಮಿತಿ ರಚಿಸಲಾಗಿದೆ. ತಾಲೂಕಿನ ಪ್ರತಿಯೊಬ್ಬ ವಕೀಲರು ಸಂಘದ ಬೆಳವಣಿಗೆಗೆ ತಮ್ಮ ಸಲಹೆ ಮತ್ತು ಸಹಕಾರ ನೀಡುವ ಮೂಲಕ ವಕೀಲರ ಹಿತ ಕಾಪಾಡಲು ಸಂಘದೊಂದಿಗೆನಿರಂತರವಾಗಿ ಸಂಪರ್ಕದಲ್ಲಿರಬೇಕೆಂದು ಮನವಿ ಮಾಡಿದರು.ಬಹುಮಾನ ವಿತರಣೆ: ತಾಲೂಕು ವಕೀಲರ ಸಂಘ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಕ್ರೀಡಾರ್ಥಿಗಳಿಗೆ ನ್ಯಾಯಾಧೀಶರು ಮತ್ತು ವಕೀಲರ ಸಂಘದ ಅಧ್ಯಕ್ಷ ಕೆ.ಕೇಶವಮೂರ್ತಿ ಬಹುಮಾನ ವಿತರಿಸಿದರು.
ಪೊಟೊ27ಕೆಎನ್‌ಎಲ್‌ಎಮ್1 :
ನೆಲಮಂಗಲ ತಾಲೂಕು ನ್ಯಾಯಾಲಯಗಳ ಸಂಕೀರ್ಣದಲ್ಲಿ ತಾಲೂಕು ವಕೀಲರ ಸಂಘ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮವನ್ನು ಹಿರಿಯ ನ್ಯಾಯಾಧೀಶ ದೇವರಾಜುಭುಟ್ಟೆ, ವಕೀಲರ ಸಂಘದ ಅಧ್ಯಕ್ಷ ಕೆ.ಕೇಶವಮೂರ್ತಿ ಇತರರು ಉದ್ಘಾಟಿಸಿದರು.