ಕನ್ನಡಪ್ರಭ ವಾರ್ತೆ ಮೈಸೂರು
ವಿ.ವಿ. ಮೊಹಲ್ಲಾ 8ನೇ ಕ್ರಾಸ್‌ನ ಟ್ರಸ್ಟ್‌ಆವರಣದಲ್ಲಿ ಸೆ. 7ರಂದು ಸಂಜೆ 6.45ಕ್ಕೆ ಮಾಲಿನಿ ಮತ್ತು ತಂಡದವರಿಂದ ಹರಿಕಥೆ ನಡೆಯಲಿದೆ. ವಿದ್ವಾನ್‌ಎ. ಉದಯರಾಜು ಹಾರ್ಮೋನಿಯಂ, ಎಂ.ಆರ್. ಶ್ರೀಕಂಠ ತಬಲ ಸಹಕಾರ ನೀಡುವರು.
ಸೆ. 8ರಂದು ಸಂಜೆ 6ರಂದು ಪಾರಂಪರಿಕ ಸಂಗೀತೋತ್ಸವವನ್ನು ಶಾಸಕ ಕೆ. ಹರೀಶ್‌ಗೌಡ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ ಪಾಲ್ಗೊಳ್ಳುವರು. ಉದ್ಯಮಿ ಜಗನ್ನಾಥ ಶೆಣೈ ಅಧ್ಯಕ್ಷತೆ ವಹಿಸುವರು. ಬಳಿಕ ವಿದುಷಿ ಸೂರ್ಯಗಾಯತ್ರಿ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನಕ್ಕೆ ವಿದ್ವಾನ್‌ಆದರ್ಶ ಅಜಯಕುಮಾರ್‌ವಯೋಲಿನ್, ಕೃಪಾಲ್‌ಸಾಯಿರಾಂ ಮೃದಂಗ ಮತ್ತು ಪ್ರಶಾಂತ್‌ಶಂಕರ್‌ತಬಲ ನೆರವು ನೀಡುವರು.ಸೆ. 9ರಂದು ಸಂಜೆ 5.30 ರಿಂದ 6.45 ರವರೆಗೆ ಗಣೇಶ ಪುರಾಣ ಅವರಿಂದ ಕಾವ್ಯ ಗಾಯನಕ್ಕೆ ಶುಭಾ ರಾಘವೇಂದ್ರ ವಾಚಿಸಿದರೆ, ಎ. ನಿರಂಜನ ವ್ಯಾಖ್ಯಾನಿಸುವರು. 6.45ಕ್ಕೆ ವಿದ್ವಾನ್‌ತಿರುವಾರೂರು ಗಿರೀಶ್‌ಗಾಯನಕ್ಕೆ, ವಯೋಲಿನ್‌ಆರ್.ಕೆ. ಶ್ರೀರಾಂಕುಮಾರ್, ಮೃದಂಗ ತಿರುವಾರೂರು ಭಕ್ತವತ್ಸಲ, ಖಂಜಿರಾ ವ್ಯಾಸವಿಠಲ ನೆರವಾಗುವರು. ಸೆ. 10ರಂದು ಸಂಜೆ 6.45ಕ್ಕೆ ವಿದ್ವಾನ್‌ಹರೀಶ್‌ಶಿವರಾಮಕೃಷ್ಣನ್‌ಗಾಯನಕ್ಕೆ, ವಯೋಲಿನ್‌ಕಾರ್ತಿಕ್‌ನಾಗರಾಜ್, ಮೃದಂಗ ಉಮಯಾಳಪುರಂ ಸಿವರಾಮ್ ಮತ್ತು ರಿದಂಪ್ಯಾಡ್ ಗೆ ಅರುಣ್‌ಕುಮಾರ್‌ನೆರವಾಗುವರು.
ಸೆ. 12 ರಂದು ಶ್ರೀ ದತ್ತ ಭಾಗವತ ಕಾವ್ಯವನ್ನು ವಸಂತ ವೆಂಕಟೇಶ್‌ವಾಚಿಸಿದರೆ, ಧರಿಶ್ರೀ ಆನಂದರಾವ್‌ವ್ಯಾಖ್ಯಾನಿಸುವರು. ಸಂಜೆ 6.45ಕ್ಕೆ ವಿದ್ವಾನ್‌ಕಲ್ಯಾಣಪುರಂ ಎಸ್. ಅರವಿಂದ್‌ಗಾಯನ, ಎಚ್.ಎನ್. ಭಾಸ್ಕರ್‌ವಯೋಲಿನ್, ಕೆ.ಯು. ಜಯಚಂದ್ರರಾವ್ ಮೃದಂಗ, ಬಿ.ಎಸ್. ಪುರುಷೋತ್ತಮ್‌ಖಂಜಿರಾದಲ್ಲಿ ನೆರವಾಗುವರು.
ಸೆ. 14ರಂದು ಬೆಳಗ್ಗೆ 10ಕ್ಕೆ ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ ನಡೆಯಲಿದೆ. ಸಂಜೆ 5.30 ರಿಂದ 6.45 ರವರೆಗೆ ಮಾರುತಿ ಭಕ್ತಿ ದರ್ಪಣ ಕಾವ್ಯವನ್ನು ಕುಮಾರಿ ಧನ್ಯ ವಾಚಿಸುವರು. ವಿದ್ವಾನ್‌ಕಜಪ ಮಂಜುನಾಥ್‌ವ್ಯಾಖ್ಯಾನಿಸುವರು. ಸಂಜೆ 5.30ಕ್ಕೆ ವಿದುಷಿ ಸಂಗೀತಾ ಕಟ್ಟಿ ಗಾಯನಕ್ಕೆ ಸತೀಶ್‌ಕೊಲ್ಲಿ ಹಾರ್ಮೋನಿಯಂ ಮತ್ತು ಕೇಶವ್‌ಜೋಶಿ ತಬಲಾದಲ್ಲಿ ಸಹಕರಿಸುವರು.
ಸೆ. 16 ರಂದು ಸಂಜೆ ಶಿವತತ್ವ ಚಿಂತಾಮಣಿ ಕಾವ್ಯವನ್ನು ಕೆ.ಎಸ್. ಭಾಗ್ಯಲಕ್ಷ್ಮೀ ವಾಚಿಸಿದರೆ, ಮೊರಬದ ಮಲ್ಲಿಕಾರ್ಜುನ ವ್ಯಾಖ್ಯಾನಿಸುವರು. ಸಂಜೆ 6.45ಕ್ಕೆ ವಿದ್ವಾನ್‌ಕುನ್ನಕ್ಕುಡಿ ಬಾಲಮುರಳಿಕೃಷ್ಣ ಅವರಿಂದ ಗಾಯನ, ಅಕ್ಕರೈ ಶುಭಲಕ್ಷ್ಮೀ ಅವರ ವಯೋಲಿನ್, ಸುಂದರ್‌ಕುಮಾರ್‌ಅವರ ಮೃದಂಗ ಮತ್ತು ಗುರುಪ್ರಸನ್ನ ಅವರು ಖಂಜಿರಾದಲ್ಲಿ ಸಹಕರಿಸುವರು.