ತರೀಕೆರೆಶತಮಾನಗಳ ಇತಿಹಾಸದ ಸಂಪ್ರದಾಯ ಬದ್ದ ಪೂಜೆ ಅಂಗವಾಗಿ ಶ್ರೀಗೌರಮ್ಮನನ್ನು ಪ್ರತಿಷ್ಠಾಪಿಸಿ ಐದು ದಿನಗಳ ಕಾಲ ಪೂಜೆ ಮಾಡಿ, ಬಾಗಿನ ಅರ್ಪಿಸಿ ಪಟ್ಟಣದಲ್ಲಿ ಮೆರವಣಿಗೆ ಮೂಲಕ ವಿಸರ್ಜಿಸುವ ವಾಡಿಕೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕನ್ನಡಪ್ರಭ ವಾರ್ತೆ ತರೀಕೆರೆ
ಶತಮಾನಗಳ ಇತಿಹಾಸದ ಸಂಪ್ರದಾಯ ಬದ್ದ ಪೂಜೆ ಅಂಗವಾಗಿ ಶ್ರೀಗೌರಮ್ಮನನ್ನು ಪ್ರತಿಷ್ಠಾಪಿಸಿ ಐದು ದಿನಗಳ ಕಾಲ ಪೂಜೆ ಮಾಡಿ, ಬಾಗಿನ ಅರ್ಪಿಸಿ ಪಟ್ಟಣದಲ್ಲಿ ಮೆರವಣಿಗೆ ಮೂಲಕ ವಿಸರ್ಜಿಸುವ ವಾಡಿಕೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಎಲ್ಲಾ ಸಮುದಾಯದ ಜನರು ಈ ಸಾಂಪ್ರದಾಯಿಕ ಆಚರಣೆಯಲ್ಲಿ ಭಾಗವಹಿಸುವುದು ಇನ್ನೊಂದು ವಿಶೇಷ. ಐದನೇ ದಿನದ ಬೆಳಗಿನ ಜಾವದಲ್ಲಿ ಅಮ್ಮನವರನ್ನು ಸಿಂಗರಿಸಿದ ಪಲ್ಲಕ್ಕಿಯಲ್ಲಿ ಹೊತ್ತು ಮಂಗಳ ವಾದ್ಯಗಳನ್ನು ಮೊಳಗಿಸಿ ಪಟ್ಟಣದ ಬೀದಿ-ಬೀದಿಗಳಲ್ಲಿ ಮೆರವಣಿಗೆ ನಡೆಸಿ ಅಲ್ಲಿನ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಮನೆಗಳಿಂದ ಬಾಗಿನ ಸರ್ಮಪಿಸುವುದು ಪದ್ಧತಿ.
ಈ ವರ್ಷ ಪಟ್ಟಣದ ವಿನಾಯಕ ನಗರದ 101,102 ನ ಯುವಕರು ಉತ್ಸಾಹದಿಂದ ಸಿಂಗರಿಸಿದ ಪಲ್ಲಕ್ಕಿಯನ್ನು ಹೊತ್ತು ಬೀದಿಗಳಲ್ಲಿ ಗೌರಮ್ಮನನ್ನು ಹೊತ್ತು ತಂದರು. ಮನೆ ಬಾಗಿಲಿಗೆ ಬರುವ ಗೌರಮ್ಮನಿಗೆ ಹೆಣ್ಣುಮಕ್ಕಳು ಅತ್ಯಂತ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದರು.
101 ವಿನಾಯಕ ನಗರದ ಲೀಲಾಸೋಮಶೇಖರಯ್ಯ ಮಾತನಾಡಿ ಪಟ್ಟಣದ ಪ್ರತಿಯೊಂದು ಮನೆಯಿಂದ ಮುತ್ತೈದೆ ಯರು, ಹೆಣ್ಣುಮಕ್ಕಳು ಬಾಗಿನ, ಮಡಿಲಕ್ಕಿ ಅರ್ಪಿಸುವುದು ವಾಡಿಕೆ ಮತ್ತು ಸಂಪ್ರದಾಯ. ಗೌರಮ್ಮನ ಪಲ್ಲಕ್ಕಿಯಿಂದ ಪೂಜಾರರು ನೀಡುವ ಸೆರಗಿನ ಮಡಲಕ್ಕಿ ತೆಗೆದುಕೊಳ್ಳುವ ಹಂಬಲ, ಆನಂದ ಮುತ್ತೈದೆಯರಿಗೆ ಎಲ್ಲಿಲ್ಲದ ಸಂತೋಷ ವೆಂದು ಹೇಳಿದರು.
ಪಲ್ಲಕ್ಕಿ ಉತ್ಸವದಲ್ಲಿ ಅಂಗಡಿ ರವಿ, ಮಂಜಣ್ಣ, ಟಿ.ಆರ್.ಸೋಮಶೇಖರಯ್ಯ, ನಾಗರಾಜ್, ವೆಂಕಟೇಶ್, ವಿಶ್ವಾಸ್, ಅನೂಪ್, ಹರ್ಷ, ಚಿರಂಜೀವಿ, ಶ್ರೇಯಸ್ ಭಟ್ಟರು, ಸಂತೋಷ್, ಅರವಿಂದ್, ನಿಶ್ಚಲ್, ಎಲ್.ಐ.ಸಿ ಸತ್ಯನಾರಾಯಣ. ಉಪ್ಪಾರರಾಜೇಶ್, ಪುರಸಭಾ ಸದಸ್ಯೆ ದಿವ್ಯಾರವಿ, ವಾಸು, ಕೃಷ್ಣಮೂರ್ತಿ, ದರ್ಶನ್ ಇತರರು ಹಾಗೂ ವಿನಾಯಕನಗರ ಯುವಕರು ಭಾಗವಹಿಸಿದ್ದರು. ನಾಗರತ್ನಮ್ಮ, ಲೀಲಾ, ಲಕ್ಷ್ಮೀ, ವಾಣಿ, ಇತರ ಮಹಿಳೆಯರು ದೇವಿಗೆ ಪೂಜೆ ಮಾಡಿ ಆರತಿ ಬೆಳಗಿ ಶ್ರೀ ಗೌರಮ್ಮನವರ ಕೃಪೆಗೆ ಪಾತ್ರರಾದರು.
-
20ಕೆಟಿಆರ್.ಕೆ.4ಃ
ತರೀಕೆರೆಯಲ್ಲಿ ಶ್ರದ್ದಾ ಭಕ್ತಿಯಿಂದ ನೆಡೆದ ಶ್ರೀ ಗೌರಮ್ಮ ಅಮ್ಮನವರ ಪಲ್ಲಕ್ಕಿ ಉತ್ಸವ ನೆಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.