ಶ್ರೀ ಗುರು ರಾಘವೇಂದ್ರಾಯ ನಮಃ ಮಂತ್ರ ಪಠಣ

KannadaprabhaNewsNetwork | Published : Aug 5, 2024 12:35 AM

ಸಾರಾಂಶ

ಪುಷ್ಯ ನಕ್ಷತ್ರದ ದಿನ ಗುರುಗಳ ಆಶೀರ್ವಾದ ಪಡೆಯಲು ಶುಭ ದಿನವಾಗಿದೆ, ರಾಘವೇಂದ್ರ ಸ್ತೋತ್ರವನ್ನು 108 ಬಾರಿ ಪಠಿಸುವುದರಿಂದ ರಾಯರು ನಮಗೆ ಸದಾ ಆನಂದವನ್ನು ನೀಡುತ್ತಾರೆ ಹಾಗೂ ಸನ್ಮಾರ್ಗದಲ್ಲಿ ನಡೆಸುತ್ತಾರೆ. ಶ್ರೀ ರಾಘವೇಂದ್ರ ಸ್ವಾಮಿಗಳು ಅನುಗ್ರಹ ಸದಾ ನಮ್ಮ ಮೇಲಿರುತ್ತದೆ

ಕನ್ನಡಪ್ರಭ ವಾರ್ತೆ ಕಲಬುರಗಿ

ನಗರದ ಹಳೇ ಜೇವರ್ಗಿ ರಸ್ತೆಯ ಗಣೇಶ ನಗರದ ಸಿದ್ಧಿ ಹನುಮಾನ್ ದೇವಸ್ಥಾನ ಹತ್ತಿರವಿರುವ ಜಲಮಂಡಳಿಯ ನಿವೃತ್ತ ಇಂಜಿನಿಯರ್‌ ಕೃಷ್ಣಾಚಾರ್ಯ ಜೋಷಿ ಇವರ ಮನೆಯಲ್ಲಿ ಭಾನುವಾರದ ಪುಷ್ಯಾರ್ಕ ಯೋಗದ ನಿಮಿತ್ತ ಶ್ರೀ ಹಂಸನಾಮಕ, ಶ್ರೀ ಲಕ್ಷ್ಮಿನಾರಾಯಣ ಹಾಗು ಹರೇ ಶ್ರೀರಾಮ ಪಾರಾಯಣ ಸಂಘಗಳ ವತಿಯಿಂದ ವಿಷ್ಣು ಸಹಸ್ರನಾಮಾದಿ ಸ್ತ್ರೋತ್ರಗಳ ವಿಶೇಷ ಪಾರಾಯಣ ಹಾಗೂ 108 ಬಾರಿ ಶ್ರೀ ಗುರು ರಾಘವೇಂದ್ರಾಯ ನಮಃ ಮಂತ್ರ ಜಪ, ಸ್ತೋತ್ರದ ಪಠಣ ಮಾಡಲಾಯಿತು.

ಪಾರಾಯಣ ಸಂಘದ ಅಧ್ಯಕ್ಷರಾದ ಶ್ರೀ ಜಗನ್ನಾಥಾಚಾರ್ಯ ಸಾಗರ್ ಮಾತನಾಡಿ ಪುಷ್ಯ ನಕ್ಷತ್ರದ ದಿನ ಗುರುಗಳ ಆಶೀರ್ವಾದ ಪಡೆಯಲು ಶುಭ ದಿನವಾಗಿದೆ, ರಾಘವೇಂದ್ರ ಸ್ತೋತ್ರವನ್ನು 108 ಬಾರಿ ಪಠಿಸುವುದರಿಂದ ರಾಯರು ನಮಗೆ ಸದಾ ಆನಂದವನ್ನು ನೀಡುತ್ತಾರೆ ಹಾಗೂ ಸನ್ಮಾರ್ಗದಲ್ಲಿ ನಡೆಸುತ್ತಾರೆ. ಶ್ರೀ ರಾಘವೇಂದ್ರ ಸ್ವಾಮಿಗಳು ಅನುಗ್ರಹ ಸದಾ ನಮ್ಮ ಮೇಲಿರುತ್ತದೆ ಎಂದರು.

ಪಾರಾಯಣ ಸಂಘದ ಪ್ರಮುಖರಾದ ರಾಮಾಚಾರ್ಯ ನಗನೂರು, ನರಸಿಂಗರಾವ್ ಕುಲಕರ್ಣಿ, ಅನಿಲ್ ಕುಲಕರ್ಣಿ, ಶೇಷಮೂರ್ತಿ ಅವಧಾನಿ, ವಿನುತ ಜೋಶಿ, ಕೃಷ್ಣಾಚಾರ್ಯ ಜೋಶಿ, ರಾಮಾಚಾರ್ಯ ನಗನೂರ್‌, ನಾರಯಣಚಾರ್ಯ ಓಂಕಾರ, ಅರ್ ಕೆ ಕುಲಕರ್ಣಿ, ಪಿ ಬಿ ಜೋಶಿ, ಲಕ್ಷ್ಮಣರಾವ್ ಕುಲಕರ್ಣಿ, ಸಂತೋಷ್ ಕುಲಕರ್ಣಿ, ನಿಖಿಲ್ ನಿಂಬರ್ಗಿಕರ್, ಪ್ರವೀಣ ಓಂಕಾರ್, ಜಯತೀರ್ಥ ಶರ್ಮಾ, ಗಿರೀಶ್ ಕುಲಕರ್ಣಿ, ಗುರುರಾಜ್ ಹಾಲಾವಿ, ಗುಂಡೇರಾವ್ ಕುಲಕರ್ಣಿ ಇದ್ದರು.

ಪುಷ್ಯಾರ್ಕ ನಿಮಿತ್ತ ಶ್ರೀ ರಾಘವೇಂದ್ರಾಯ ನಮಃ 108 ಬಾರಿ ಹಾಗೂ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾಧೀಶ ತೀರ್ಥರ ಮಧ್ಯಾರಾಧನೆ ಪ್ರಯುಕ್ತ ಯತಿಗಳ ಚರಮ ಶ್ಲೋಕ ಸಾಮೂಹಿಕವಾಗಿ 3 ಬಾರಿ ಪಠಿಸಲಾಯಿತು.

ಇದೇ ಸಂದರ್ಭದಲ್ಲಿ ಮುಂದಿನ ಭಾನುವಾರ ಆ. 11 ರ ಸಾಪ್ತಾಹಿಕ ಪಾರಾಯಣ ಕರುಣೇಶ್ವರ ನಗರದ ಪ್ರಾಣೇಶಾಚಾರ್ಯ ಜೋಷಿಯವರ ಮನೆಯಲ್ಲಿ ನಿಗದಿಯಾಯ್ತು. ಪಿಬಿ ಜೋಷಿಯವರು ಮಾತನಾಡುತ್ತ ಎಲ್ಲಾ ಸದಸ್ಯರಿಗೆ ತಮ್ಮ ಮನೆ ಪಾರಾಯಣಕ್ಕೆ ಆಹ್ವಾನವಿತ್ತರು.

ಇಂದಿನ ಪಾರಾಯಣ ಶ್ರೀ ಕೃಷ್ಣಾಚಾರ್ಯ ಜೋಶಿ ಗಣೇಶ ನಗರದಲ್ಲಿ ಜರುಗಿತು. ಪುಷ್ಯಾರ್ಕ ನಿಮಿತ್ತ ಶ್ರೀ ರಾಘವೇಂದ್ರಾಯ ನಮಃ 108 ಬಾರಿ ಹಾಗು ಶ್ರೀ ಸತ್ಯಾಧೀಶ ತೀರ್ಥರ ಮದ್ಯಾರಾಧನೆ ಪ್ರಯುಕ್ತ ಚರಮ ಶ್ಲೋಕ 3 ಬಾರಿ ಪಠಿಸಲಾಯಿತು.

ನಂತರ ಕೃಷ್ಣಾಚಾರ್ಯ ಜೋಷಿ ಪರಿವಾರದ ಸರ್ವ ಸದಸ್ಯರಿಗೆ ಮೂರು ಪಾರಾಯಣ ಸಂಘಗಳ ಪರವಾಗಿ ಆಚಾರ್ಯ ಮಧ್ವರ ಭಾವಚಿತ್ರದೊಂದಿಗೆ ಶಾಲು ಹೊದಿಸಿ ನಾರಾಯಣಾಚಾರ್ಯ ಓಂಕಾರ ಅವರು ಸನ್ಮಾನಿಸಿ ಫಲ- ಮಂತ್ರಾಕ್ಷತೆ ನೀಡಿದರು.

Share this article