ಸಂಭ್ರಮದಿಂದ ನಡೆದ ಶ್ರೀಲಕ್ಷ್ಮಿನಾರಾಯಣಸ್ವಾಮಿ ಬ್ರಹ್ಮರಥೋತ್ಸವ

KannadaprabhaNewsNetwork |  
Published : Mar 07, 2025, 12:49 AM IST
6ಕೆಎಂಎನ್ ಡಿ20 | Kannada Prabha

ಸಾರಾಂಶ

ಜಾತ್ರೆ ಉತ್ಸವ ಹಾಗೂ ಹಬ್ಬಗಳು ನಮ್ಮ ಸಂಸ್ಕೃತಿ ಪ್ರತಿಬಿಂಬ, ಹಬ್ಬದ ಸಂಭ್ರಮದಲ್ಲಿ ಎಲ್ಲರೂ ಒಂದಾಗಿ ಭಾಗವಹಿಸಿದರೆ ಪರಸ್ಪರ ಭಾಂದವ್ಯ ವೃದ್ಧಿಯಾಗುವ ಜೊತೆಗೆ ಸಹೋದರತೆ ಸಹಬಾಳ್ವೆ ಹೆಚ್ಚಾಗಿ ಪ್ರೀತಿ ವಿಶ್ವಾಸ ಇಮ್ಮಡಿಯಾಗುತ್ತದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಪುರಸಭಾ ವ್ಯಾಪ್ತಿಯ ಹೊಸಹೊಳಲು ಗ್ರಾಮದಲ್ಲಿ ಶ್ರೀಲಕ್ಷ್ಮೀನಾರಾಯಣಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತ ಸಮೂಹದಲ್ಲಿ ಸಡಗರ ಸಂಭ್ರಮದಿಂದ ಜರಗಿತು.

ಮಧ್ಯಾಹ್ನ ತಾಲೂಕು ದಂಡಾಧಿಕಾರಿ, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ನಾಗಮಂಗಲ ಡಿವೈಎಸ್ ಪಿ ಚಲುವರಾಜು, ಆರ್.ಟಿ.ಓ ಮಲ್ಲಿಕಾರ್ಜುನ, ಪುರಸಭೆ ಅಧ್ಯಕ್ಷೆ ಪಂಕಜಾ ಹಾಗೂ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಶೋಕ್ ಶ್ರೀ ರಥ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ್, ಜಾತ್ರೆ ಉತ್ಸವ ಹಾಗೂ ಹಬ್ಬಗಳು ನಮ್ಮ ಸಂಸ್ಕೃತಿ ಪ್ರತಿಬಿಂಬ, ಹಬ್ಬದ ಸಂಭ್ರಮದಲ್ಲಿ ಎಲ್ಲರೂ ಒಂದಾಗಿ ಭಾಗವಹಿಸಿದರೆ ಪರಸ್ಪರ ಭಾಂದವ್ಯ ವೃದ್ಧಿಯಾಗುವ ಜೊತೆಗೆ ಸಹೋದರತೆ ಸಹಬಾಳ್ವೆ ಹೆಚ್ಚಾಗಿ ಪ್ರೀತಿ ವಿಶ್ವಾಸ ಇಮ್ಮಡಿಯಾಗುತ್ತದೆ ಎಂದು ಹೇಳಿದರು.

ಜಾನಪದ ಕಲಾತಂಡಗಳ ನೃತ್ಯವು ರಥೋತ್ಸವ ಮತ್ತು ಜಾತ್ರಾ ಸೌಂದರ್ಯವನ್ನು ಹೆಚ್ಚಿಸಿದ್ದವು. ಭಕ್ತರು ಶ್ರೀ ರಥದ ಕಳಸಕ್ಕೆ ಬಾಳೆಹಣ್ಣು ಹಾಗೂ ಜವನವನ್ನು ಎಸೆದು ಪುನೀತರಾದರು. ಕುರುಹಿನಶೆಟ್ಟಿ ಸಮಾಜದ ಬಂಧುಗಳು ಭಕ್ತರಿಗೆ ಮಜ್ಜಿಗೆ ಪಾನಕ, ಪುಳಿಯೋಗರೆ ಪ್ರಸಾದ ವಿತರಿಸಿದರು. ಹಣ್ಣು ಜವನ, ಕಡ್ಲೆ ಪುರಿ, ಬೆಂಡು ಬತಾಸು, ಜಿಲೇಬಿ ಸೇರಿದಂತೆ ಸಿಹಿ ತಿಂಡಿಗಳ ವ್ಯಾಪಾರ ಭರ್ಜರಿಯಾಗಿ ನಡೆಯಿತು.

ಡಿವೈಎಸ್ಪಿ ಚಲುವರಾಜು, ಇನ್ಸ್‌ಪೆಕ್ಟರ್ ಸುಮಾರಾಣಿ ನೇತೃತ್ವದಲ್ಲಿ ಹೊಸಹೊಳಲು ಜ್ರಾತ್ರೆ ಮತ್ತು ರಥೋತ್ಸವ ನಡೆಯುವ ಸ್ಥಳದಲ್ಲಿ ಮೊಕ್ಕಾಂ ಹೂಡಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಈ ವೇಳೆ ದೇವಾಲಯ ಸಮಿತಿ ಅಧ್ಯಕ್ಷ ರಾಮಚಂದ್ರು, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ರವೀಂದ್ರಬಾಬು, ಪುರಸಭಾ ಸದಸ್ಯರಾದ ಹೆಚ್.ಆರ್.ಲೋಕೇಶ್, ಎಚ್.ಎನ್.ಪ್ರವೀಣ್, ಕೆ.ಬಿ.ಮಹೇಶ್, ಶಾಸಕರ ಸಹೋದರ ಎಚ್.ಟಿ.ಲೋಕೇಶ್, ಗ್ರೇಡ್-2 ತಹಸೀಲ್ದಾರ್ ಲೋಕೇಶ್, ರಾಜಸ್ವ ನಿರೀಕ್ಷಕ ಜ್ಞಾನೇಶ್, ಗ್ರಾಮ ಆಡಳಿತ ಅಧಿಕಾರಿ ಜಗದೀಶ್, ಮುಖಂಡರಾದ ರಾಮೇಗೌಡ, ಚಿಕ್ಕೇಗೌಡ, ಡಾ.ಶ್ರೀನಿವಾಸಶೆಟ್ಟಿ, ಹೆಚ್.ಎಸ್.ಕೃಷ್ಣೇಗೌಡ, ಪ್ರಕಾಶ್,ಪುನೀತ್, ಕಾಂತರಾಜು,ಸೇರಿದಂತೆ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!