ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶನಿವಾರ ಶ್ರೀದೇವಿಯ ಸನ್ನಿಧಿಯಲ್ಲಿ ಪ್ರಥಮ ಬಾರಿಗೆ ನಡೆದ ವೈಭವದ ಶತಚಂಡಿಕಾಯಾಗ ಸಂಪನ್ನಗೊಂಡಿತ್ತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶನಿವಾರ ಶ್ರೀದೇವಿಯ ಸನ್ನಿಧಿಯಲ್ಲಿ ಪ್ರಥಮ ಬಾರಿಗೆ ನಡೆದ ವೈಭವದ ಶತಚಂಡಿಕಾಯಾಗ ಸಂಪನ್ನಗೊಂಡಿತ್ತು.ಮುಂಜಾನೆ 6ರಿಂದ ಸಮೂಹಿಕ ದೇವತಾ ಪ್ರಾರ್ಥನೆ ಸಂಕಲ್ಪ ಪೂಜೆಯೊಂದಿಗೆ ಧಾರ್ಮಿಕ ಪೂಜಾ ವಿಧಾನಗಳನ್ನು ದೇವಳದ ತಂತ್ರಿಗಳಾದ ಕೆ.ಎಸ್.ಕೃಷ್ಣಮೂರ್ತಿ, ರಮಣ ತಂತ್ರಿಗಳ ಮಾರ್ಗದರ್ಶನದಲ್ಲಿ ನೂರಾರು ವೈದಿಕರು ನಡೆಸಿಕೊಟ್ಟರು. ಶತಚಂಡಿಕಾಯಾಗದ ಸೇವಾ ಕತೃಗಳಾದ ನೂರಾರು ದಂಪತಿಗಳು ಪೂಜೆಯಲ್ಲಿ ಪಾಲ್ಗೊಂಡರು ನೂತನ ಬ್ರಹತ್ ಹೋಮ ಕುಂಡದಲ್ಲಿ ಶತಚಂಡಿಕಾ ಯಾಗದ ಪೂರ್ಣಾಹುತಿಯಲ್ಲಿ ಸಮಿತಿ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ ದಂಪತಿ, ದೇವಳದ ಮೊಕ್ತೇಸರ ಮುದ್ದಣ್ಣ ಶೆಟ್ಟಿ ದಂಪತಿ, ಪವಿತ್ರಪಾಣಿ ಶ್ರೀನಿವಾಸ್ ಆಚಾರ್ಯ ದಂಪತಿ, ಆರ್ಥಿಕಸಮಿತಿ ಸಂಚಾಲಕ ರಮೇಶ್ ಶೆಟ್ಟಿ ದಂಪತಿಗಳು ಸಹಕರಿಸಿದರು.
ಶ್ರೀ ದೇವಿಗೆ ವಿಶೇಷ ಅಲಂಕಾರ, ಸಂಪೂರ್ಣ ದೇವಾಲಯವನ್ನು ವಿಶೇಷ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಚಂಡಿಕಾಯಾಗದ ಪೂರ್ಣಾಹುತಿಯ ಬಳಿಕ ಶ್ರೀದೇವಿಯ ಸಹಸ್ರ ನಾಮಾವಳಿ ಪಠಣ, ಸಮೂಹಿಕ ಕುಂಕುಮ ಅರ್ಚನೆ, ಮಹಾಪೂಜೆ, ಪಲ್ಲಪೂಜೆ, ಸುವಾಸಿನೀ ಆರಾಧನೆ, ದಂಪತಿ ಪೂಜೆ, ಕನ್ನಿಕಾ ಪೂಜೆ ನೆಡೆಯಿತು. ಸಾರ್ವಜನಿಕ ಮಹಾ ಅನ್ನಸಂತರ್ಪಣೆಯಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚಿನ ಭಕ್ತರೂ ಶ್ರೀದೇವರ ಭೋಜನ ಪ್ರಸಾದ ಸ್ವೀಕರಿಸಿದರು. ಸಮಾರಂಭದಲ್ಲಿ ಶಾಸಕರಾದ ಯಶಪಾಲ್ ಸುವರ್ಣ, ನಗರ ಸಭೆಯ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಶತ ಚಂಡಿಕಾಗದ ಹೊರೆಕಾಣಿಕೆ ಉಸ್ತುವಾರಿ ನವೀನ್ ಭಂಡಾರಿ, ಕಾರ್ಯದರ್ಶಿ ನಾರಾಯಣ ದಾಸ್ ಉಡುಪ, ಕೋಶಾಧಿಕಾರಿ ಸುದರ್ಶನ್ ಶೇರಿಗಾರ್, ಅರ್ಚಕ ವರದರಾಜ್ ಭಟ್, ಮೊಕ್ತೇಸರರಾದ ರಾಜಶೇಖರ್ ಭಟ್, ಮೋಹನ್ ಆಚಾರ್ಯ, ದುರ್ಗಾಪ್ರಸಾದ್, ಭಾರತಿ ಜಯರಾಮ ಆಚಾರ್, ಪ್ರೇಮನಾಥ್, ಸುರೇಶ ಶೆಟ್ಟಿ, ಸುಭಾಸ್ ಭಂಡಾರಿ, ಅರುಣ್ ಶೆಟ್ಟಿಗಾರ್, ಶಾಂತ ಶೇರಿಗಾರ್, ಪ್ರವೀಣ್ ಕುಮಾರ್, ಹರೀಶ್ ಸುವರ್ಣ, ನಗರಸಭೆ ಸದಸ್ಯ ಕೃಷ್ಣರಾವ್ ಕೊಡಂಚ, ಕಿರಣ್ ಕುಮಾರ್ ಬೈಲೂರು, ಸುಬ್ರಹ್ಮಣ್ಯ ತಂತ್ರಿ ಹಾಗೂ ವಿವಿಧ ಸಮಿತಿಯ ಪಧಾದಿಕಾರಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.