ಶ್ರೀನೀಲಕಂಠೇಶ್ವರ ದೇಗುಲ ಜೀರ್ಣೋದ್ದಾರ, ಕಳಸಸ್ಥಾಪನೆ

KannadaprabhaNewsNetwork |  
Published : Aug 19, 2024, 12:54 AM IST
ಪೋಟೋ೧೮ಸಿಎಲ್‌ಕೆ೦೪ ಚಳ್ಳಕೆರೆ ತಾಲ್ಲೂಕಿನ ಕಾಲುವೇಹಳ್ಳಿ ಗ್ರಾಮದಲ್ಲಿ ಶ್ರೀ ನೀಲಕಂಠೇಶ್ವರಸ್ವಾಮಿ ದೇವಾಲಯದ ಕಳಸ ಸ್ಥಾಪನೆಗೂ ಮುನ್ನ ಗ್ರಾಮದ ಮಹಿಳೆಯರು ಗಂಗಾಪೂಜೆಯಲ್ಲಿ ಪಾಲ್ಗೊಂಡಿದ್ದರು. | Kannada Prabha

ಸಾರಾಂಶ

Sri Neelakantheshwara Temple Restoration, Kalasasthana

-ಕಾಲುವೇಹಳ್ಳಿಯಲ್ಲಿ ನೂರಾರು ಸುಮಂಗಲಿಯರಿಂದ ಗಂಗಾಪೂಜೆ, ಕುಂಭ ಮೆರವಣಿಗೆ

----

ಕನ್ನಡಪ್ರಭವಾರ್ತೆಚಳ್ಳಕೆರೆ:

ತಾಲೂಕಿನ ತಳಕು ಹೋಬಳಿಯ ಕಾಲುವೇಹಳ್ಳಿ ಗ್ರಾಮದ ಶ್ರೀ ನೀಲಕಂಠೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ದಾರ ಮತ್ತು ಗೋಪುರಕ್ಕೆ ಕಳಸ ಸ್ಥಾಪನೆ ಕಾರ್ಯಕ್ರಮದ ಹಿನ್ನೆಲೆ ಗಂಗಾಪೂಜೆ ಕಾರ್ಯಮವನ್ನು ಚರಮತ್ತು ಸ್ಥಿರಪಟ್ಟಾಧ್ಯಕ್ಷ ಶ್ರೀರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿ ನೇತೃತ್ವದಲ್ಲಿ ನಡೆದಿದ್ದು, ನೂರಾರು ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಗರಣಿಹಳ್ಳದಲ್ಲಿ ಗಂಗಾಪೂಜೆ ಕಾರ್ಯವನ್ನು ನೆರವೇರಿಸಿದ್ದು, ನೂರಾರು ಸುಮಂಗಲಿಯರು ಕುಂಭವನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಬಂಡೆಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿದ್ದ ಕಳಸವನ್ನು ಮಂಗಳವಾದ್ಯಗಳ ಮೆರವಣಿಗೆಯೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜಯಕಾರದೊಂದಿಗೆ ತೆರಲಾಯಿತು.

ಸೋಮವಾರ ಬೆಳಗ್ಗೆ ೫ ಗಂಟೆಗೆ ಕಳಸಾರೋಹಣ ಕಾರ್ಯಕ್ರಮ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ. ಭಾನುವಾರ ನಡೆದ ಗಂಗಾ ಪೂಜೆ ಮತ್ತು ಮೆರವಣಿಗೆ ಕಾರ್ಯಕ್ರಮದಲ್ಲಿ ವಿದ್ವಾನ್ ಡಾ.ವೀರೇಶ್‌ ಹಿರೇಮಠ, ರೇಣುಕಾಸ್ವಾಮಿ, ನೀಲಕಂಠಶೆಟ್ಟಿ, ಕರಿಬಸಪ್ಪ, ಕೆ.ಒ.ಪಾಲಯ್ಯ, ಕಾಲುವೇಹಳ್ಳಿಶ್ರೀನಿವಾಸ್, ಕೆ.ಜೆ.ರಾಮಣ್ಣ, ಲಿಂಗದಹಳ್ಳಿಪಾಲಣ್ಣ, ರಂಗಸ್ವಾಮಿ, ರೈತ ಮುಖಂಡರಾದ ಕೆ.ಪಿ.ಭೂತಯ್ಯ, ಜಾಜೂರು ಹನುಮಂತಪ್ಪ, ರಾಘವೇಂದ್ರ ಪಾಲ್ಗೊಂಡಿದ್ದರು.

------

ಪೋಟೋ:೧೮ಸಿಎಲ್‌ಕೆ೪

ಚಳ್ಳಕೆರೆ ತಾಲೂಕಿನ ಕಾಲುವೇಹಳ್ಳಿ ಗ್ರಾಮದಲ್ಲಿ ಶ್ರೀ ನೀಲಕಂಠೇಶ್ವರಸ್ವಾಮಿ ದೇವಾಲಯದ ಕಳಸವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

----

ಪೋಟೋ: ೧೮ಸಿಎಲ್‌ಕೆ೦೪

ಚಳ್ಳಕೆರೆ ತಾಲೂಕಿನ ಕಾಲುವೇಹಳ್ಳಿ ಗ್ರಾಮದಲ್ಲಿ ಶ್ರೀ ನೀಲಕಂಠೇಶ್ವರಸ್ವಾಮಿ ದೇವಾಲಯದ ಕಳಸ ಸ್ಥಾಪನೆಗೂ ಮುನ್ನ ಗ್ರಾಮದ ಮಹಿಳೆಯರು ಗಂಗಾಪೂಜೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!