ಪೂಜೆ ಸಲ್ಲಿಸಿದ ಶಾಸಕ ಜಿ.ಎಚ್.ಶ್ರೀನಿವಾಸ
ಲಕ್ಕವಳ್ಳಿ ಹೋಬಳಿ ಸೊಂಪುರ ಗ್ರಾಮದ ಭದ್ರಾ ನದಿ ದಂಡೆಯ ಮೇಲಿರುವ ಇತಿಹಾಸ ಪ್ರಸಿದ್ಧ ಹಾಗೂ ವಿಶೇಷವಾಗಿ ಪಶ್ಚಿಮಾಭಿಮುಖವಾಗಿರುವ ನಾಲ್ಕು ದೇವಾಲಯಗಳಲ್ಲಿ ಒಂದಾದ ಈ ಶ್ರೀ ಸೋಮೇಶ್ವರ ದೇವಾಲಯದ ಸನ್ನಿಧಿಯಲ್ಲಿ ಶ್ರದ್ಧಾ ಭಕ್ತಿಯಿಂದ ಶ್ರೀ ತ್ರಿಮೂರ್ತ್ಯಾತ್ಮಕ ಶ್ರೀ ಪ್ರಸನ್ನ ಸೋಮೇಶ್ವರ ಸ್ವಾಮಿ ದಿವ್ಯ ರಥೋತ್ಸವ ಏರ್ಪಡಿಸಲಾಗಿತ್ತು.ಪ್ರತಿವರ್ಷವೂ ಏಳ್ಳಮವಾಸ್ಯೆ ದಿನ ಜಾತ್ರೋತ್ಸವದಲ್ಲಿ ಪಾಲ್ಗೊಳುವ ಭಕ್ತರು ಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಪೂಜೆ ಸಲ್ಲಿಸುತ್ತಾರೆ. ಡಿ.19ರಂದು ಶ್ರೀ ಸೋಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹೋಮ ಹವನಗಳನ್ನು ಪುರೋಹಿತರಿಂದ ನಡೆಸಲಾಯಿತು.
ಡಿ. 20 ರಂದು ಶ್ರೀ ಸೋಮೇಶ್ವರ ಉತ್ಸವಮೂರ್ತಿಯನ್ನು ದೇವಾಲಯದ ಸನ್ನಿಧಿಯಲ್ಲಿ ಪ್ರದಕ್ಷಿಣೆ ಮಾಡುವ ಮೂಲಕ ವಾದ್ಯಗೋಷ್ಠಿ ಗಳೊಂದಿಗೆ ಉತ್ಸವವನ್ನು ನೇರವೆರಿಸಿ, ಮೀನ ಲಗ್ನದಲ್ಲಿ ಉತ್ಸವ ಮೂರ್ತಿಯನ್ನು ವಿಶೇಷ ಅಲಂಕರಿಸಿದ ಎತ್ತರದ ರಥದಲ್ಲಿ ನಿಗಧಿತ ಮುಹೂರ್ತದಲ್ಲಿ ಸಾಂಪ್ರದಾಯಿಕ ಪೂಜೆಗಳನ್ನು ಸಲ್ಲಿಸಿದ ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ಪುರೋಹಿತರಿಂದ ಆಶೀರ್ವಚನವನ್ನು ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ಬೋಧಿಸಿದರು. ನಂತರ ರಥೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರೆಹಮಾನ್, ಸದಸ್ಯ ಫಣಿರಾಜ್ ಜೈನ್, ಜಿಪಂ ಮಾಜಿ ಸದಸ್ಯ ಕೆ.ಪಿ.ಕುಮಾರ್, ಕೆಪಿಸಿಸಿ ಸದಸ್ಯ ಎಚ್.ವಿಶ್ವನಾಥ, ಭದ್ರಾ ಕಾಡಾ ನಿಗಮ ಸದಸ್ಯ ರಾಜಶೇಖರ್, ಧರ್ಮದರ್ಶಿಗಳು, ಸಮಿತಿಯ ಮಾಜಿ ಸದಸ್ಯ ಎಲ್. ಟಿ. ಹೇಮಣ್ಣ, ತಾಪಂ ಮಾಜಿ ಅಧ್ಯಕ್ಷ ಎಲ್.ಎಸ್.ಶಿವಯೋಗಿ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ಮುಜರಾಯಿ ಅಧಿಕಾರಿಗಳು, ರಕ್ಷಣಾಧಿಕಾರಿಗಳು ಭಾಗವಹಿಸಿದ್ದರು. ದಿವ್ಯರಥೋತ್ಸವದಲ್ಲಿ ಸಾಕ್ಷಿಯಾಗಲು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು. ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. -
20ಕೆಟಿಆರ್.ಕೆ.2ಃತರೀಕೆರೆ ಸಮೀಪದ ಸೋಂಪುರ ಗ್ರಾಮದಲ್ಲಿ ಶ್ರದ್ಧಾ ಭಕ್ತಿಯಿಂದ ಶ್ರೀ ತ್ರಿಮೂರ್ತ್ಯಾತ್ಮಕ ಶ್ರೀ ಪ್ರಸನ್ನ ಸೋಮೇಶ್ವರ ಸ್ವಾಮಿ ದಿವ್ಯ ರಥೋತ್ಸವ ನೇರವೇರಿತು.